ಹಂಪನಕಟ್ಟೆ ಸುತ್ತಿನಲ್ಲಿ ರಸ್ತೆಗಳನ್ನು ಕಾಂಕ್ರೀಟ್ ಮಾಡುವ ಭರದಲ್ಲಿ ಸಾಕಷ್ಟು ಕಡೆ ನೆಲದಡಿಯ ನೀರಿನ ನಲ್ಲಿಗಳಿಗೆ ಹಾನಿ ಮಾಡಿದ್ದಾರೆ.

ಇಲ್ಲೆಲ್ಲ ಕಾಂಕ್ರೀಟ್ ಕೆಲಸದ ನಡುವೆ ಏಳೆಂಟು ಕಡೆ ತೇಪೆ ಹಾಕಿದ್ದಾರೆ. ನಿನ್ನೆ ರಾತ್ತಿ ಕಾಂಕ್ರೀಟ್ ಕೆಲಸ ಮಾಡುವಾಗ ಕಾರ್ನಾಡ್ ಸದಾಶಿವರಾವ್ ರಸ್ತೆಯ ಪೋಸ್ಟ್ ಆಫೀಸ್‌ನತ್ತಣ ತಿರುವಿನ ಕೊಳಾಯಿಗೆ ಹಾನಿ ಮಾಡಿದ್ದಾರೆ. ಬೆಳಿಗ್ಗೆ ಒಂಬತ್ತು ಗಂಟೆಯಾದರೂ ಇದನ್ನು ಸರಿಪಡಿಸಲು ಯಾರೂ ಬಂದಿಲ್ಲ.