ಮುಂಬಯಿ : ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಇದರ ವತಿಯಿಂದ ಮೇ.9 ರಂದು ನಲಾಸೋಪಾರ ಪಶ್ಚಿಮದ ಗ್ಯಾಲಾಕ್ಷಿ ಹೋಟೇಲಿನ ಸಭಾಗೃಹದಲ್ಲಿ ರಕ್ತದಾನ ಶಿಭಿರ ನಡೆಯಿತು. ಬಂಟರ ಸಂಘ ಮುಂಬಯಿಯ ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯ ಸಮನ್ವಯಕರಾದ ಶಶಿಧರ ಶೆಟ್ಟಿ ಇನ್ನಂಜೆ ಇವರು ಈ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆಯಿತ್ತರು. ಬಳಿಕ ರಕ್ತದಾನ ಶಿಭಿರ ನಡೆಯಿತು. ಆ ಬಳಿಕ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ ಯುವ ಜನಾಂಗದಿಂದ ನಡೆಯುತ್ತಿರುವ ಜೀವ ರಕ್ಷಣೆಯ ಈ ಕಾರ್ಯಕ್ರಮದಲ್ಲಿ ಬಾಗವಹಿಸುವ ಅವಕಾಶ ದೊರಕಿದ್ದು, ಇಂದಿನ ಪರಿಸ್ಥಿತಿಯಲ್ಲಿ ರಕ್ತದಾನದಂತಹ ಕಾರ್ಯದಿಂದ ಅನೇಕರ ಜೀವ ಉಳಿಸಬಹುದು. ಇಂತಹ ಕಾರ್ಯಕ್ಕೆ ನಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದರು

ರಕ್ತದಾನ ಶಿಭಿರದಲ್ಲಿ ಸರಕಾರದ ಕೋವಿಡ್ ನಿಯಮವನ್ನು ಪಾಲಿಸುತ್ತಾ ನಾಲಾಸೋಪಾರ ಮತ್ತು ಪರಿಸರದ ಅಪಾರ ಜನರು ಭಾಗವಹಿಸಿದ್ದರು. ಬಂಟರ ಸಂಘ ಮುಂಬಯಿ ವಸಯಿ ದಹಾಣು ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಪಳ್ಳಿ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ : ಈಶ್ವರ ಎಂ. ಐಲ್

ಚಿತ್ರ : ದಿನೇಶ್ ಕುಲಾಲ್