ಎರಡನೆಯ ಕೊರೋನಾ ಅಲೆಯಲ್ಲಿ ಭಾರತದಲ್ಲಿನ ಸಾಂಕ್ರಾಮಿಕ ಸೋಂಕು ಪ್ರಮಾಣವು ಜಗತ್ತಿನ ಅರ್ಧದಷ್ಟು ಇರುವುದು ತಿಳಿದುಬಂದಿದೆ.
ನೋವೆಲ್ ಕೋವಿಡ್19 ಸಾವಿನಲ್ಲಿ ಎರಡನೆಯ ಅಲೆಯಲ್ಲಿ ವಿಶ್ವ ಗುರು ಆಗಿರುವ ಭಾರತ ಈ ಅನಗತ್ಯದ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡಿದೆ. ಮೇ ಮೊದಲ ದಿನ ಜಗತ್ತಿನ 10 ಸಾವಿರ ಸಾವಿನಲ್ಲಿ ಭಾರತದಲ್ಲಿ 3,668 ಸಾವು ಆಗಿದೆ. ಅಂದರೆ 30 ಶೇಕಡಾಕ್ಕಿಂತ ಹೆಚ್ಚು. ಅದೇ ದಿನ ಜಾಗತಿಕ ಸೋಂಕು ಹರಡುವಿಕೆ 7,95,819 ಇದ್ದು, ಅದರಲ್ಲಿ ಭಾರತದ ಪಾಲು 3,92,562 ಅಂದರೆ 50 ಶೇಕಡಾ .
ಆದರೆ ಜನಸಂಖ್ಯೆ ರೀತ್ಯಾ ಭಾರತ ಧೈರ್ಯಗುಂದಬೇಕಿಲ್ಲ. ಎರಡೂ ಅಲೆ ಪರಿಗಣಿಸಿ, ಭಾರತದ ಜನಸಂಖ್ಯೆ ಪ್ರಮಾಣದ ಸಹಿತ ಲೋಕ ಮಟ್ಟದಲ್ಲಿ ತುಲನೆ ಮಾಡಿದರೆ ಸೋಂಕು ತಗುಲಿದವರಲ್ಲಿ ಭಾರತವು 114ನೇ ಸ್ಥಾನದಲ್ಲೂ, ಕೊರೋನಾ ಸಾವಿನಲ್ಲಿ 117ನೇ ಸ್ಥಾನದಲ್ಲೂ ಇದೆ.