ಜನವರಿ 6 ಮತ್ತು 24ರಂದು ಎಂಸಿಡಿ- ದಿಲ್ಲಿ ಮುನಿಸಿಪಲ್ ಕಾರ್ಪೊರೇಶನ್ ಮೇಯರ್ ಆಯ್ಕೆಗೆ ಸೇರಿ ಗಲಾಟೆಯಲ್ಲಿ ಮುಗಿದಿತ್ತು. ಹಾಗೆಯೇ ಫೆಬ್ರವರಿ 6ರ ಸೋಮವಾರ ಸಹ ಮೇಯರ್ ಆಯ್ಕೆಗೆ ಸೇರಿದ ಕೌನ್ಸಿಲರ್‌ಗಳು ಗಲಾಟೆ ಕಾರಣಕ್ಕೆ ಆಯ್ಕೆ ನಡೆಸದೆ ಮುಂದೂಡಿಕೆ ಕಂಡಿತು.
ಬೆಳಿಗ್ಗೆ 11 ಗಂಟೆಗೆ ಮೇಯರ್ ಆಯ್ಕೆ ಎಂದು ತೀರ್ಮಾನ ಆಗಿತ್ತು. ಇಂದು ಬೆಳಿಗ್ಗೆಯೇ ಸಭೆ ಸೇರುತ್ತಲೇ ಚುನಾವಣಾ ಅಧಿಕಾರಿ ಎನಿಸಿದ ಬಿಜೆಪಿ ಕೌನ್ಸಿಲರ್ ಸತ್ಯ ಶರ್ಮಾ ಅವರು ನಾಮಕರಣ ಸದಸ್ಯರಿಗೆ ಕೂಡ ಮೇಯರ್ ಆಯ್ಕೆಯಲ್ಲಿ ಮತ ಚಲಾಯಿಸುವ ಹಕ್ಕು ಇದೆ ಎಂದರು. ಅದನ್ನು ಎಎಪಿ ಕೌನ್ಸಿಲರ್‌ಗಳು ವಿರೋಧಿಸಿದರು.
ಕೂಡಲೆ ಶರ್ಮಾರು ಮುಂದಿನ ದಿನಾಂಕ ಪ್ರಕಟಿಸುವವರೆಗೆ ಮೇಯರ್ ಆಯ್ಕೆ ಮುಂದೂಡಲಾಗಿದೆ ಎಂದು ಪ್ರಕಟಿಸಿದರು. ಎಎಪಿ ಕೌನ್ಸಿಲರ್‌ಗಳು ಕುಳಿತಿದ್ದಂತೆಯೇ ಬಿಜೆಪಿ ಕೌನ್ಸಿಲರ್‌ಗಳು ಮತ್ತು ನಾಯಕರು ಹೊರಟೇ ಬಿಟ್ಟರು.
ಇತ್ತೀಚೆಗೆ ಲೆಫ್ಟಿನೆಂಟ್ ಗವರ್ನರ್‌ರು 10 ಮಂದಿ ಬಿಜೆಪಿಯವರನ್ನು ನಿಯಮದಂತೆ ನಾಮಕರಣ ಮಾಡಿದ್ದರು.