ಅಲ್ಪಸಂಖ್ಯಾತರ ವಿರುದ್ಧ ಪೂರ್ವಗ್ರಹ ಪೀಡಿತೆಯಾದ ವಿಕ್ಟೋರಿಯಾ ಗೌರಿ ನ್ಯಾಯಯುತ ತೀರ್ಪು ನೀಡಲಾರರು. ಅಂತಾ ನಡೆಯು ಸಂವಿಧಾನ ಬಾಹಿರ ಆಗಿರುತ್ತದೆ ಎಂದು ವಕೀಲರುಗಳಾದ ಸುಧಾ, ನಾಗೇಶ್, ಅನ್ನಾ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ ಅವರ ವಜಾ ಕೋರಿದ್ದಾರೆ.
ಅದಕ್ಕೆ ಮೊದಲು ವಕೀಲ ರಾಜು ರಾಮಚಂದ್ರನ್ ಅವರು ಗೌರಿಯವರ ಹೆಸರು ಶಿಫಾರಸು ಹಿಂಪಡೆಯುವಂತೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ಬೆಳಿಗ್ಗೆ ಚಂದ್ರಚೂಡ್ ಅವರು ಈ ವಿಷಯ ನಾಳೆಯೇ ವಿಚಾರಣೆ ಪಟ್ಟಿಗೆ ಸೇರಿಸುವದಾಗಿ ತಿಳಿಸಿದರು.
ಫೆಬ್ರವರಿ ಮಧ್ಯಾಹ್ನ ರಾಜು ಅವರು ಶುಕ್ರವಾರ ತಮ್ಮ ಅರ್ಜಿ ವಿಚಾರಣೆಗೆ ಬರುತ್ತದೆ ಎನ್ನುವಾಗಲೆ ಕೇಂದ್ರ ಕಾನೂನು ಮಂತ್ರಿ ಕಿರಣ್ ರಿಜೆಜು ಅವರು ಗೌರಿ ಮತ್ತಿತರರ ನೇಮಕ ಆಗಿದೆ ಎಂದಿದ್ದಾರೆ. ಮತ್ತೆ ರಾಜು ಅವರು ಚರಿತ್ರೆ ಅರಿಯದೆ ನೇಮಕ ಹೇಗೆ ಸಾಧ್ಯ ಎಂದು ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.