ಮಂಗಳೂರು: ಜಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 20ಕ್ಕೂ ಅಧಿಕ ಕೋವಿಡ್-19 ಸಿಬ್ಬಂದಿಗಳಿಗೆ ಮತು ಆಶಾ ಕಾರ್ಯಕರ್ತರಿಗೆ, ಅವರ ಕಾರ್ಯಸ್ಥಳಕ್ಕೆ ತೆರಳಿ, ದಿನಸಿ ಕಿಟ್ಟುಗಳನ್ನು ಮಾಜಿ ವಿಧಾನ ಪರಿಷತ್ ಶಾಸಕ ಮತ್ತು ಎಐಸಿಸಿ ಕಾರ್ಯದರ್ಶಿರಾದ ಐವನ್ ಡಿ ಸೋಜರವರು ವಿತರಿಸಿದರು ಮತ್ತು ಕೊರೊನ-19 ಕ್ಕೆ ಅವರು ನೀಡುತ್ತಿರುವ ಸೇವೆಯನ್ನು ಶ್ಲಾಘಿಸಿದರು ಹಾಗೂ ಅವರಿಗೆ ಶುಭವನ್ನು ಕೋರಿದರು ಮತ್ತು ಕೊರೊನಾ ಚಿಕಿತ್ಸೆಗೆ ಬರುವವರಿಗೆ ಸಹಾನುಭೂತಿಯಿಂದ ಚಿಕಿತ್ಸೆ ನೀಡಿ, ಸಾಂತ್ವಾನ ಹೇಳುವಂತೆ ಕಿವಿ ಮಾತನ್ನು ಹೇಳಿದರು.








ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಭಾಸ್ಕರ್ ರಾವ್, ಪಕ್ಷದ ನಾಯಕರುಗಳಾದ ಚಿತ್ತರಂಜನ್, ವಿವೇಕ್ ರಾಜ್ ಪೂಜಾರಿ, ಅಶಿತ್ ಪಿರೇರಾ, ದುರ್ಗಾಪ್ರಸಾದ್, ಹೊನ್ನಯ್ಯ, ವಿಕ್ಟೋರಿಯಾ, ತೆರೆಜಾ ಪಿಂಟೊ, ದೀಕ್ಷಿತ್ ಅತ್ತಾವರ, ಮಿಲಾಜ್ ಅತ್ತಾವರ, ಹಸನ್, ಅಬಿಬುಲ್ಲ ಕಣ್ಣೂರು ಹಾಗೂ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿದ್ಯಾ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.