ಮಂಗಳೂರು: ಪಡಿತರ ಚೀಟಿಯಲ್ಲಿ ಅಕ್ಕಿ ಪಡೆಯುತ್ತಿರುವವರಿಗೆ ವ್ಯವಹಾರದ ಸಮಯವನ್ನು ಕನಿಷ್ಠ 2 ಗಂಟೆಗಳ ಕಾಲ ಹೆಚ್ಚುವರಿಯಾಗಿ ನೀಡುವ ಅಗತ್ಯವಿದೆ ಮಾತ್ರವಲ್ಲದೇ, ಪ್ರತಿ ಪಡಿತರ ಅಂಗಡಿಗಳಲ್ಲಿ 10 ಗಂಟೆಯ ಹೊತ್ತಿಗೆ ಸುಮಾರು 50 ಕುಟುಂಬಗಳು ರೇಶನಿಗಾಗಿ ಕಾಯುತ್ತಿರುವಾಗ, ಅವರುಗಳಿಗೆ ರೇಶನನ್ನು ಪಡೆದುಕೊಂಡು ಹೋಗಲು ಸೂಚಿಸುವಂತೆ ಆಹಾರ ನಿರ್ದೇಶಕರನ್ನು ಸಂಪರ್ಕಿಸಿ, ಯಾರೆಲ್ಲರೂ ರೇಶನಿಗಾಗಿ 10 ಗಂಟೆಯ ಮುಂಚಿತವಾಗಿ ರೇಶನನ್ನು ಪಡೆಯಲು ಸಾಲಿನಲ್ಲಿ ನಿಂತಿದ್ದಾರೋ, ಅವರಿಗೆ ಪಡಿತರ ಸಾಮಾನುಗಳನ್ನು ನೀಡಿ ಕಳುಹಿಸುವಂತೆ ಸೂಚಿಸಬೇಕೆಂದು ಮಾಜಿ ವಿಧಾನ ಪರಿಷತ್ ಶಾಸಕ ಮತ್ತು  ಎಐಸಿಸಿ ಕಾರ್ಯದಶಿರಾದ ಐವನ್ ಡಿ ಸೋಜರವರು ಆಹಾರ ನಿರ್ದೇಶಕರಿಗೆ ಮತ್ತು ಜಿಲ್ಲಾಧಿಕಾರಿಗೆ ವಿನಂತಿಸಿದ್ದಾರೆ ಹಾಗೂ ಇದರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲದೇ, ವ್ಯಾಕ್ಸಿನೇಷನ್ ಮತ್ತು ಪಡಿತರ ಸಾಮಾಗ್ರಿಗಾಗಿ ಬರುವವರಿಗೆ ಸಮಯದಲ್ಲಿ ಹೆಚ್ಚಿನ ಅವಕಾಶವನ್ನು ನೀಡುವಂತೆ ಜಿಲ್ಲಾಡಳಿತವನ್ನು ಐವನ್ ಡಿ ಸೋಜರವರು ವಿನಂತಿಸಿದ್ದಾರೆ. ಸರಕಾರದ ಸೂಚನೆಯಂತೆ ಎಲ್ಲ ರೇಶನ್ ಅಂಗಡಿಗಳು, ಕೇಂದ್ರ ಸರಕಾರ 5ಕೆ.ಜಿ ಮತ್ತು  ರಾಜ್ಯ ಸರಕಾರ 5 ಕೆ.ಜಿ (5+5) ರಂತೆ, 10 ಕೆ.ಜೆ ಅಕ್ಕಿ ನೀಡುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ ಐವನ್ ಡಿ ಸೋಜರವರು, ಒಳ್ಳೆಯ ಪ್ರಮಾಣದ ಅಕ್ಕಿಯನ್ನು ವಿತರಿಸಲು ಸಹಾಯಕ ಆಹಾರ ನಿರ್ದೇಶಕ ಅಧಿಕಾರಿಗೆ ಸೂಚಿಸಿದ್ದಾರೆ.

ಇದರ ಜೊತೆಯಲ್ಲಿ ರಾಜ್ಯ ಸರಕಾರ ದಿನಸಿಗಳನ್ನು ಪಡಿತರ ಅಂಗಡಿಯ ಮೂಲಕ ವಿತರಿಸಬೇಕೆಂದು ರಾಜ್ಯದ ಆಹಾರ ಸಚಿವರಿಗೆ ವಿನಂತಿಸಿದ್ದಾರೆ.

ಮಂಗಳೂರು ಪಡಿತರ ಅಂಗಡಿಗೆ ಭೇಟಿ ನೀಡುವ ಸಂದರ್ಭದಲ್ಲಿ  ಮಾಜಿ ಕಾರ್ಪೊರೇಟರ್‌ ಭಾಸ್ಕರ್ ರಾವ್, ಯುವ ನಾಯಕರಾದ ಚಿತ್ತರಂಜನ್, ವಿವೇಕ್‍ರಾಜ್ ಪೂಜಾರಿ, ಅಶಿತ್ ಪಿರೇರಾ, ದುರ್ಗಾಪ್ರಸಾದ್, ಹೊನ್ನಯ್ಯ, ವಿಕ್ಟೋರಿಯಾ, ತೆರೆಜಾ ಪಿಂಟೊ, ದೀಕ್ಷಿತ್ ಅತ್ತಾವರ, ಮಿಲಾಜ್ ಅತ್ತಾವರ, ಹಸನ್ ಪಾಂಡೇಶ್ವರ, ಅಬಿಬುಲ್ಲ ಕಣ್ಣೂರು ಮುಂತಾದವರು ಉಪಸ್ಥಿತರಿದ್ದರು.