ಕರ್ನಾಟಕ ಸೋಶಿಯಲ್ ಕ್ಲಬ್ ಹಾಗೂ ಬಸವ ಬಳಗ ಹುಬ್ಬಳ್ಲಿ ಇವರ ಸಹಯೋಗದಲ್ಲಿ ಬಸವ ಜಯಂತಿಯ ನಿಮಿತ್ತವಾಗಿ ಕೊಡ ಮಾಡಲಿರುವಬಸವ ಕಾಯಕರತ್ನ ಪ್ರಶಸ್ತಿ ಹಾಗೂ ಬಸವ ಸೇವಾ ಪ್ರಶಸ್ತಿ ಗಳ ಪೈಕಿ ಬಸವ ಸೇವಾ ರತ್ನ ಪ್ರಶಸ್ತಿಗಾಗಿ ಮಂಗಳೂರು ನಿವಾಸಿ ಡಾ ಸುರೇಶ್ ನೆಗಳಗುಳಿಯವರು ಆಯ್ಜೆಯಾಗಿದ್ದಾರೆ ಎಂದು ಸದ್ರಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಮಾಡಲಗೇರಿ ಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಮೇ.ದಿನಾಂಕ ೧೬ ರಂದು ನಡೆಸ ಬೇಕಾಗಿದ್ದ ಸಮಾರಂಭವನ್ನು ಕೋವಿಡ್ ೧೯ ನಿಯಮಾನುಸಾರ ಮುಂದೆ ನಡೆಸಲಾಗುವುದು ಎನ್ನಲಾಗಿದೆ.
# ವರದಿ
ಡಾ ಸುರೇಶ ನೆಗಳಗುಳಿ