ಚಂದ್ರ ಶೇಖರ ಸ್ವಾಮಿ ಕಲಾಭವನ ತೆಗ್ಗಿನ‌ ಮಠ ಹರಪನಹಳ್ಳಿ ನೂರುಕೃತಿಗಳ ಲೋಕಾರ್ಪಣೆ ಮತ್ತು ರಾಜ್ಯ ಮಟ್ಡದ ಕವಿಗೋಷ್ಠಿ- ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ‌ಹಡಗಲಿ ಇದರ ವತಿಯಿಂದ ಅಭೂತ ಪೂರ್ವ ನೂರು ಕೃತಿಗಳ ಲೋಕಾರ್ಪಣೆ ಎಂಬ ವಿಶಿಷ್ಟ ಗಿನ್ನೀಸ್ ದಾಖಲೆಯ ಸಮಾರಂಭವು ಹರಪನಹಳ್ಳಿಯ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ  ಗಣ್ಯರ ಸಮ್ಮುಖದಲ್ಲಿ ಜರಗಿತು.

ಇದೇ ವೇಳೆ ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಇವರ ನೂತನ ಕೃತಿ ತನಗ ತರಂಗ ಎಂಬ ತನಗವೆಂಬ ಪಿಲಿಪ್ಪೈನ್ ಮೂಲದ ಸಾಹಿತ್ಯ ಪ್ರಕಾರದ ಕನ್ನಡ ತನಗಗಳ ಪುಸ್ತಕವು ಲೋಕಾರ್ಪಣೆ ಗೊಂಡಿತು.

ಸೆಪ್ಟೆಂಬರ್ ದಿನಾಂಕ 24 ರ ಭಾನುವಾರ ಹರಪನ ಹಳ್ಳಿಯಲ್ಲಿರುವ ಚಂದ್ರಶೇಖರ ಕಲಾ ಭವನ ತೆಗ್ಗಿನ ಮಠದಲ್ಲಿ ಸೆ.24 ರಂದು ಶಾಸಕ ಲತಾ ಮಲ್ಲಿಕಾರ್ಜುನರವರ  ಘನ‌ ಉಪಸ್ಥಿತಿಯಲ್ಲಿ ಉದ್ಘಾಟುಸಲ್ಪಟ್ಟ ಈ ಸಮಾರಂಭದಲ್ಲಿ ನೂರ ಹದಿನೆಂಟು ಕೃತಿಗಳು ಲೋಕಾರ್ಪಣೆ ಗೊಂಡಿದ್ದು ವಿಶೇಷ.

ಶಾಸಕರು ಮಾತನಾಡುತ್ತಾ  ಇತಿಹಾಸದ ಚಿತ್ರಣಗಳ ಸಾಹಿತ್ಯದಿಂದ ಮಾತ್ರ ಲಭ್ಯ.ಎಂದು ಹೇಳಿದರು ಅದಲ್ಲದೆ ಚಲನ‌ಚಿತ್ರ ನಟ ಮೈಸೂರು ರಮಾನಂದ ,ಕ.ಸಾ.ಪ ಅಧ್ಯಕ್ಷ  ಕೆ.ಉಚ್ಚೆಂಗಪ್ಪ ಸಹಿತ ಹಲವಾರು ಗಣ್ಯರು ಭಾಗವಹಿಸಿದ್ದರು.

ಹಿರಿಯ ಸಾಹಿತಿ ರಾಮನಮಲಿ ಅವರ ಅಧ್ಯಕ್ಷತೆಯಲ್ಲಿ ಬೃಹತ್ ಕವಿಗೋಷ್ಠಿ ಸಂಪನ್ನವಾಯಿತು. ಸಮಾರಂಭದ ಸಾರಥ್ಯವನ್ನು ಸಂಘಟಕ ಹಾಗೂ ಬಳಗ ಮುಖ್ಯಸ್ಥರಾದ ಸಾಹಿತಿ ಮಧುನಾಯ್ಕರವರು ವಹಿಸಿದ್ದರು.