ವರದಿ ರಾಯಿ ರಾಜಕುಮಾರ
ಮೂಡುಬಿದಿರೆ: ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡದ ದಶಮಾನೋತ್ಸವದ ಪ್ರಯುಕ್ತ ಸೌಹಾರ್ದ ಕ್ರಿಸ್ಮಸ್ ಕಾರ್ಯಕ್ರಮ ಮೂಡುಬಿದಿರೆ ಕೊರ್ಪೂಸ್ ಕ್ರಿಸ್ತಿ ಚರ್ಚ್ ಸಭಾಂಗಣದಲ್ಲಿ ಡಿಸೆಂಬರ್ 12 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಲಯದ ಪ್ರಧಾನ ಧರ್ಮಗುರು ಅ.ವಂ. ಒನಿಲ್ ಡಿಸೋಜಾ ಪುನರಪಿ ಒದಗುವ ಸಹಾಯ ಸದಾಸ್ಮರಣೀಯ ಎಂದರು. ಮುಖ್ಯ ಅತಿಥಿ ಹೊಸಬೆಟ್ಟು ಧರ್ಮಗುರು ವಂ. ಗ್ರೆಗರಿ ಡಿಸೋಜಾ ಪ್ರೀತಿ ಹಂಚುವ ಗೂಡುಗಳಾಗುವ ಎಂದು ಕರೆಕೊಟ್ಟರು.







ಶಾಂತಿ, ಸೌಹಾರ್ದತೆ, ಕ್ಷಮಾ ಗುಣದ ಕೊಡುಗೆ ನೀಡಿದ ಕ್ರೈಸ್ತ ಸಮುದಾಯವನ್ನು, ತಕ್ಷಣ ಸಹಾಯ ಒದಗಿಸುವ, ಸಮಾಜಮುಖಿ ಕಾರ್ಯಗಳನ್ನು ವೇದಿಕೆಯಲ್ಲಿದ್ದ ಇನ್ಸ್ಪೆಕ್ಟರ್ ಸಂದೇಶ್ ಪಿ ಜಿ, ಸ್ಪೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯ ಸಂಸ್ಥಾಪಕ ಪ್ರಕಾಶ್ ಜೆ ಶೆಟ್ಟಿಗಾರ್, ಎ ಜಿ ಸೋನ್ಸ್ ನ ಉಪನ್ಯಾಸಕ ಶಿವಪ್ರಸಾದ್ ಹೆಗ್ಡೆ, ಹಿರಿಯ ವಕೀಲ ಎಂ. ಬಾಹುಬಲಿ ಪ್ರಸಾದ್, ಅಲಂಗಾರು ಲಯನ್ಸ್ ಅಧ್ಯಕ್ಷ ಅಮಿತ್ ಡಿ ಸಿಲ್ವಾ, ಉದ್ಯಮಿಗಳಾದ ಅಬುಲಾಲ್ ಪುತ್ತಿಗೆ, ಅಭಿನಂದಿಸಿದರು. ಸಿ ಎಚ್ ಅಬ್ದುಲ್ ಗಪೂರ್, ಅಶ್ವಿನ್ ಜೆ ಪಿರೇರಾ, ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 104 ವರ್ಷದ ಎವ್ಲಿನ್ ಗೋವಿಯಸ್, ವಿಶ್ವ ದಾಖಲೆ ಮಾಡಿದ ಭರತನಾಟ್ಯ ಕಲಾವಿದೆ ರೆಮೋನಾ ಇ ಪಿರೇರಾ, ಹಿರಿಯ ಪತ್ರಕರ್ತ ಧನಂಜಯ ಮೂಡುಬಿದರೆ, ಸಮಾಜಸೇವಕ ಮುನೀರು ನಡುಪಳ್ಳ, ರವರುಗಳನ್ನು ಸನ್ಮಾನಿಸಲಾಯಿತು.
ಜಿಗಿಮಿಗಿ ತಾರಾ ದ ಅನಿಷ ಸಾಂತುಮೇಯರ್, ಅನೋರಾ ಮೆಂಡೋನ್ಸಾ ರವರಗಳನ್ನು ಅಭಿನಂದಿಸಲಾಯಿತು.
ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡದ ಸಂಸ್ಥಾಪಕ ಸುನಿಲ್ ಮೆಂಡೋನ್ಸಾ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಲ್ಲಿ ತಮ್ಮ ಸ್ವ ಅನುಭವಗಳನ್ನು ಹಂಚಿಕೊಂಡರು. ಕಾರ್ಯದರ್ಶಿ ಲತೀಶ್ಯಾ ಗೋಮ್ಸ್ ವರದಿ ವಾಚಿಸಿದರು. ನೋರ್ಬರ್ಟ್ ಮಾರ್ಟಿಸ್ ಪರಿಚಯ ಗೈದರು. ಸ್ಪೂರ್ತಿ ವಿದ್ಯಾರ್ಥಿ ತಂಡದಿಂದ ಸ್ವಾಗತ ನೃತ್ಯ ನಡೆಯಿತು. ಸಭಾ ಕಾರ್ಯಕ್ರಮದ ತರುವಾಯ ಅಸಹಾಯಕರಿಗೆ, ನಿರ್ಗತಿಕರಿಗೆ, ಬಡ ವಿದ್ಯಾರ್ಥಿಗಳಿಗೆ, ಹೋಗಪೀಡಿ ತರಿಗೆ, ವಿಶೇಷ ವಿದ್ಯಾರ್ಥಿ ಸಂಸ್ಥೆಗಳಿಗೆ, ಧನ ಸಹಾಯ, ಕುಟುಂಬದ ಸಾಮಗ್ರಿಗಳು ಇತ್ಯಾದಿಗಳನ್ನು ವಿತರಿಸಲಾಯಿತು. ಸುಮಾರು ಒಂದು ಕೋಟಿ 30 ಲಕ್ಷಕ್ಕೂ ಅಧಿಕ ಧನ ಸಂಗ್ರಹದಿಂದ ಸಹಾಯವನ್ನು ಒದಗಿಸಲಾಗಿತ್ತು.