ವರದಿ ರಾಯಿ ರಾಜ ಕುಮಾರ್


ನೀರುಡೆ ಅಮ್ನಿಕೋಡಿ ಪ್ರದೇಶದಲ್ಲಿ ಇತ್ತೀಚೆಗೆ ನಡೆಸಿದ ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಹೊಸ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದ್ದು, ಇದರಿಂದ ಸ್ಥಳೀಯರಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಉತ್ತಮ ಅವಕಾಶ ಸಿಕ್ಕಿದೆ. ರಸ್ತೆಯೊಂದಕ್ಕೆ ಸುಮಾರು 12 ವಿದ್ಯುತ್ ದಾರಿ ದೀಪಗಳನ್ನು ಅಳವಡಿಸಲಾಗಿದ್ದು, ರಾತ್ರಿ ವೇಳೆಯಲ್ಲೂ ಸುಲಭವಾಗಿ ಸಂಚರಿಸಲು ಸಹಕಾರಿಯಾಗಿದೆ. ನೀರುಡೆ ಬಳ್ಳಾಲಬೈಲ್ ರಸ್ತೆಗೆ ಮತ್ತು ಮುಖ್ಯ ರಸ್ತೆಯಿಂದ ಒಳಗಿನ ಅಡ್ಡ ರಸ್ತೆಗೆ ಸೋಲಾರ್ ದಾರಿ ದೀಪಗಳನ್ನು ಅಳವಡಿಸುವ ಮೂಲಕ ಪರಿಸರ ಸ್ನೇಹಿ ಹಾಗೂ ದೀರ್ಘಕಾಲದ ಬೆಳಕು ವ್ಯವಸ್ಥೆಯನ್ನು ಒದಗಿಸಲಾಗಿದೆ. ಈ ಎಲ್ಲಾ ಯೋಜನೆಗಳನ್ನು ಪಂಚಾಯತ್ ಸದಸ್ಯರು ಕಾರ್ಯಗತಗೊಳಿಸಿದ್ದಾರೆ.