ವೈಜ್ಞಾನಿಕವಾಗಿ  ಜಗತ್ತು ಎಷ್ಟೇ ಮುಂದುವರಿದರೂ ಜನರಲ್ಲಿ ಮೂಢನಂಬಿಕೆ ಇನ್ನೂ ಇದೆ.ಅಪಶಕುನ ಕಾಲ್ಗುಣ ಅಥವಾ ದೆವ್ವ ಭೂತ ಎಂಬ ಮೂಢನಂಬಿಕೆ ವಿದ್ಯಾವಂತರಲ್ಲೂ ಆವರಿಸಿದ್ದು ಪ್ರಗತಿಯ ಸಂಕೇತವಂತು ಅಲ್ಲಮನಸಿನ ಮೂಲೆಯಲಿ ಗಾಢವಾಗಿ ನೆಲೆ ನಿಂತಿದೆ ಅಪಶಕುನದ ಮೂಢ ನಂಬಿಕೆ ಮನುಷ್ಯನಲ್ಲಿ ಆವರಿಸಿದ ಬಯಕೆಯ ಭೂತ ಕಿತ್ತೆಸೆಲು ಆಗದೆ  ಪ್ರತಿಕ್ಷಣವು ಭಯದಲ್ಲೆ ಬಾಳುವನುಮನದಲ್ಲಿ ನಡೆವ ನಕಾರಾತ್ಮಕ ಯೋಚನೆ ಬದುಕಿನಲ್ಲಿ ನಡೆವ ಸಾಮಾನ್ಯ ಅವಘಡ ಮನದ ದುಗುಡಕ್ಕೂ ವಾಸ್ತು ಅಥವಾ ಅಪಶಕುನದ ಹೆಸರನ್ನಿಟ್ಟು ಬಿಡುವರು ದಾರಿಯಲಿ ಅಡ್ಡವಾದ ಬೆಕ್ಕು ಅಪಶಕುನವೆಂದು ಗೋಡೆಯಲಿ ಕಾಲು ಜಾರಿ ಮೈಮೇಲೆಬಿದ್ದ ಹಲ್ಲಿ ಶಕುನ ಹೇಳುವುದೆಂದುಕಾಗೆಯೊಂದು ಮುಟ್ಟಿದ್ದಕ್ಕೆ ಶನಿಕಾಟ ಸಾವು ತರುವುದಂತೆ, ವಾಹನಕೆ ಕಟ್ಟಿದ ನಿಂಬೆಹಣ್ಣು ಅಪಘಾತ ತಡೆಯುವುದಂತೆ....ನಿತ್ಯ ಹವನ ಮಾಡಿದರೆ ಸಾವು ಸಮೀಪಿಸದೆ...?

ತನ್ನ ಜೀವದ ಆಸೆ ಹೊತ್ತ ಹರಕೆಗೆ ಪಾಪದ ಪ್ರಾಣಿಯ ಜೀವ ಬಲಿ ಕೊಟ್ಟರೆ ನಿನ್ನ ಆಯುಷ್ಯ ಹೆಚ್ಚುವುದೇ ಮನದ ನೆಮ್ಮದಿ ಕೆಡಸಿ ಕೊಂಡು ವಾಸ್ತು ದೋಷವೆಂದು ಮನೆಯ ಕಟ್ಟಡ ಬಿಳಿಸುವುದು ಸುಮ್ನೆ ಹಣದ ವ್ಯರ್ಥ ಮಾಡುವರು  ಅದರ ಬದಲು ಕೊಡಬಹುದಿತ್ತು ಹಸಿದವನಿಗೆ  ಅನ್ನ... ಆಧುನಿಕತೆ ಇರಬೇಕು ಆಲೋಚನೆಗಳಲ್ಲಿ ಕೊಳೆಯಬಾರದು ದಿಕ್ಕು ತಪ್ಪದಿರಲಿ ಬದುಕು ಮೂಢನಂಬಿಕೆಯ ಜಾಲದಲ್ಲಿ ....ಹೆಂಗಸರು ಒಂದು ಸಮಾರಂಭದಲ್ಲಿ  ಸೇರಿ ಸಹಜ ಮಾತುಕತೆಯಲ್ಲಿ ಹೇಳತಾರೆ ನಾನು ನನ್ನ ಗಂಡನ ಮನೆಗೆ ಬಂದಾಗಿಂದ ಸಿರಿ ಸಂಪತ್ತು ದ್ವಿಗುಣವಾಗಿದೆ ನನ್ನ ಕಾಲ್ಗುಣ ಬಹಳ ಚೆನ್ನಾಗಿದೆ ಸಂಬಂಧಿಕರ ಮನೆಲಿ ಅವರ ಸೊಸೆ ಕಾಲ್ಗಣ ಸರಿ ಇಲ್ಲ  ಎಂದು ಮಾತಾಡುವ ಅವರ ಪರಿಗೆ ದಂಗಾದೆ..ಮನುಷ್ಯ ತನ್ನನ್ನ ಉಚ್ಛ ಎಂದು ತೋರಿಸಿಕೊಳ್ಳೆಕೆ ಇನ್ನೊಬ್ಬರಿಗೆ ತುಚ್ಛವಾಗಿ ಕಾಣತಾನೆ ತಲೆ ಬುಡ ಇಲ್ಲದ ಈ ಮೂಢನಂಬಿಕೆ ಯಾರ ಉದ್ಧಾರಕ್ಕಾಗಿ ಇದೆ...ಪರಿಕ್ಷೆಯಲ್ಲಿ ಪಾಸ್ ಮಾಡು ದೇವರೆ ಎಂದು ದೇವರ ಮುಂದೆ ದೀಪ ಹಚ್ಚಿ ಕೂತರೆ ಉತ್ತಿರ್ಣರಾಗತಾರಾ? ಕತ್ತಲು ಆವರಿಸಿದ್ದರೂ ಸಣ್ಣ ಉರಿಯಲ್ಲಿ ಉರಿವ ದೀಪದ ಬೆಳಕಲ್ಲೂ ಓದುವ ಪ್ರಾಮಾಣಿಕ ಪ್ರಯತ್ನದಿಂದ ಪರೀಕ್ಷೆಯಲ್ಲಿ ಉತ್ತಿರ್ಣರಾಗತಾರೆ ಮಕ್ಕಳಲ್ಲಿ  ನಾವು ಮೂಢನಂಬಿಕೆ ಬಿತ್ತಬಾರದು ದೇವರು ಪಾಸ ಮಾಡತಾನೆ ಹರಕೆ ಹೋರು ಎನ್ನಬಾರದು ಪ್ರಯತ್ನಕ್ಕೆ ತಕ್ಕ ಫಲ ಸಿಗುತ್ತದೆ ಎಂದು ತಿಳಿಸಬೇಕು. ದೇವರನ್ನ ನಂಬಬಾರದು ಎಂದು ಹೇಳತಿಲ್ಲ

....ದೇವರು ಎಂದರೆ ಒಂದು ಅದ್ಬುತ ಶಕ್ತಿ. ದೇವರು ಇದ್ದಾನೆ ಎಂಬುವುದೇ ಮನಸ್ಸಿಗೆ ಸಕಾರಾತ್ಮಕ ಶಕ್ತಿ.ನಂಬಿಕೆ ಸಕಾರಾತ್ಮಕವಾಗಿರಲಿ.ಪ್ರತಿ ಸಲ ದೇವರು ನಮ್ಮ ಬೇಡಿಕೆಯನ್ನು ಈಡೆರಿಸಲೇ ಬೇಕೆಂದೆನಿಲ್ಲ.ದೈವವನ್ನು ನಂಬುವುದು ತಪ್ಪಲ್ಲ ದೈವವಿದ್ದರೆ ದೆವ್ವನು ಇರುತ್ತದೆ ಎಂದು ಮತ್ತೊಂದು ಮೂಢನಂಬಿಕೆ ಮನದಲ್ಲಿ ಪೋಷಿಸುತ್ತೆಲ್ಲ ಅದು ತಪ್ಪು ಮನುಷ್ಯ ವೈಜ್ಞಾನಿಕವಾಗಿ ಯೋಚಿಸಲೇ ಬೇಕು ಒಬ್ಬ ಯುವತಿ ತನ್ನ ವಿಫಲ ಪ್ರೀತಿಯನ್ನು   ವಿಪರೀತ ಹಚ್ಚಿಕೊಂಡು ತನ್ನ ದುಃಖವನ್ನು ಮನದಲ್ಲಿ ಅದುಮಿ ಕೊರಗುತ್ತಿದ್ದಳು ಮಾನಸಿಕವಾಗಿ ರೊಸಿಹೋದವಳು ತನ್ನ ಮನಸ್ಸನ್ನ ನಿಯಂತ್ರಣ ಮಾಡುವುದಕ್ಕಾಗದೆ ಮನೆಯಲ್ಲಿ ವಿಚಿತ್ರವಾಗಿ ವರ್ತಿಸತೊಡಗಿದಳು...ಬದಲಾದ ಹಾವ ಭಾವಗಳನ್ನ ಮನೆಯವರು ಗಮನಿಸಿ ಅವಳ ದೇಹದಲ್ಲಿ ಭೂತ ಆವರಿದೆ ಎಂದು ಅವಳನ್ನ ಭೂತ ಬಿಡಿಸುವವರ ಹತ್ತಿರ ಕರೆದು ಹೋಗುವಾಗ ಹುಡುಗಿ ಕಿರಿಚಾಟ ಅಳು  ದೆವ್ವದ ಹಾರಾಟವೆಂದು ತಿಳಿದರೆ ಹೊರತು ಅವಳೊಬ್ಬ ಮಾನಸಿಕ ರೋಗಿ ಎಂದು ಊಹಿಸಲೆ ಇಲ್ಲ...ಚಲಿಸುತ್ತಿರುವ ವಾಹನದಿಂದ ಅವಳು ಓಡಲು ಪ್ರಯತ್ನಿಸಿದಾಗ ಬಿದ್ದು ಕಾಲು ಮುರಿಯಿತು ನಂತರ ಆಸ್ಪತ್ರೆಗೆ ಸೇರಿಸಿದಾಗ ನಡೆದ ವಿಷಯವೆಲ್ಲ ವೈದ್ಯರಿಗೆ ತಿಳಿಸಿದಾಗ ಅವಳೊಂದು ಮನೊರೋಗಿ ಎಂದು ತಿಳಿಯಿತು ಚಿಕಿತ್ಸೆ ನೀಡಿದಾಗ ಅವಳು ಗುಣಮುಖಳಾದಳು ಆದರೆ ಮೂಢನಂಬಿಕೆಯ ಬಲೆಗೆ ಅವಳು ಅಂಗವಿಕಲೆಯಾದಳು...ಅದಕ್ಕೆ ಹೇಳುವುದು ಜೀವನದಲ್ಲಿ ನಂಬಿಕೆ ಇರಲಿ ಅತಿಯಾದ ಮೂಢನಂಬಿಕೆ ಬೇಡ ಏಕೆಂದರೆ ಅತಿಯಾದದ್ದು ಯಾವುದು ಒಳ್ಳೆದಲ್ಲ ದೇವರನ್ನ ಆರಾಧಿಸೊಣ ನಮ್ಮ ಕಾಯಕದಲ್ಲಿ ಅವನನ್ನ ಕಾಣೊಣ 

✍ಅಂಜಲಿ ಶ್ರೀನಿವಾಸ