ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ನಂದಿಹೊಸಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬಳು ಹಿತ್ತಿಲಲ್ಲೆ ಕೊರೋನಾದಿಂದ ಸತ್ತಿದ್ದು ನಾಲ್ಕು ಗಂಟೆಯಾದರೂ ಆರೋಗ್ಯ ಇಲಾಖೆಯವರು ಬಾರದ್ದರಿಂದ ಜನ ಆಕ್ರೋಶಗೊಂಡರು.

ಬರೇ ಮೂರು ದಿನಗಳ ಹಿಂದೆ ಈ ಮಹಿಳೆಯ ಅಣ್ಣ ಕೊರೋನಾಕ್ಕೆ ಬಲಿಯಾಗಿದ್ದರು. ಕೊನೆಗೂ ಗ್ರಾ.ಪಂ. ಸದಸ್ಯರ ಕರೆ ಮೇರೆಗೆ ಆರೋಗ್ಯ ಇಲಾಖೆಯವರು ಬಂದು ಶವ ಸಾಗಿಸಿದರು.