ಉಡುಪಿಯಲ್ಲಿ ಮತ್ತೆ ಕೊರೋನಾ ಅಲೆ ಅಪ್ಪಳಿಸಿ ನಿನ್ನೆಯ ಒಂದೇ ದಿನದಲ್ಲಿ ಐದು ಜನರ ಜೀವ ಬಲಿ ಪಡೆದಿದೆ.

ಉಡುಪಿಯಲ್ಲಿ ಮೂವರು ಮತ್ತು ಕುಂದಾಪುರದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಕುಂದಾಪುರದವರಲ್ಲಿ ಒಬ್ಬರು ಮಹಿಳೆ. ಉಡುಪಿಯವರಲ್ಲಿ ಒಬ್ಬರು 58ರ ಪ್ರಾಯದಾವರಾದರೆ, ಸತ್ತ ಉಳಿದೆಲ್ಲರೂ‌ 60 ಪ್ರಾಯ ದಾಟಿದವರಾಗಿದ್ದಾರೆ.

ನಿನ್ನೆಯೂ ಉಡುಪಿ ಜಿಲ್ಲೆಯಲ್ಲಿ 962 ಹೊಸ ಕೊರೋನಾ ಸೋಂಕಿತರು ಪತ್ತೆಯಾದರು.

ಕೊರೋನಾ ಮೃತ್ಯು ನರ್ತನಕ್ಕೆ‌ ಬಲಿಯಾದವರ ಸಂಖ್ಯೆಯು ನಿನ್ನೆ 33 ಕೋಟಿ ದಾಟಿ ‌ಮುನ್ನಡೆಯಿತು. ನಿನ್ನೆಯದೂ ಸೇರಿ ಜಗತ್ತಿನಲ್ಲಿ ‌ಕೋವಿಡ್ ಕೋವಿಗೆ ತುತ್ತಾದ‌ ಕೊರೋನಾ ಬಾಧಿತರ ಸಂಖ್ಯೆಯು ಒಟ್ಟು 33,06,746 ಆಯಿತು. ಒಟ್ಟು ಸೋಂಕಿತರ ಸಂಖ್ಯೆಯು ಲೋಕದಲ್ಲಿ  15,89,70,290 ಮುಟ್ಟಿ ಮುನ್ನಡೆಯಿತು.