ಲಂಡನ್ ಮೇಯರ್ ಆಗಿ ಲೇಬರ್ ಪಕ್ಷದ ಸಾದಿಕ್ ಖಾನ್ ಎರಡನೆಯ ಬಾರಿ ಬಹುಮತದಿಂದ ಆಯ್ಕೆಯಾದರು.

2016ರಲ್ಲಿ ಲಂಡನ್ ‌ಮೇಯರ್ ಆಗಿ ಸಾದಿಕ್ ಖಾನ್ ಗೆದ್ದಿದ್ದರು. ಕೊರೋನಾ ಕಾರಣ ಕಳೆದ ‌ವರುಷ ನಡೆಯಬೇಕಾಗಿದ್ದ ಚುನಾವಣೆಯನ್ನು ಮುಂದೂಡಲಾಗಿತ್ತು.

ಎರಡನೆಯ ಬಾರಿ ಆಯ್ಕೆಯಾದ ಸಾದಿಕ್ ಖಾನ್ 12,06,034 ಮತ ಪಡೆದರು. ಎದುರಾಳಿ ಕನ್ಸರ್ವೇಟಿವ್ ಪಕ್ಷದ ಶೌನ್ ಬೈಲ್ 9,77,801 ಮತ ಗಳಿಸಿದರು.

ಲಂಡನ್ ಮೇಯರ್ ನೇರ ಚುನಾವಣೆ ನಡೆಯುತ್ತದೆ. ಕೊರೋನಾ ಮೆಟ್ಟಿ ಮುನ್ನಡೆಯುವಂತೆ‌ ನಗರಾಡಳಿತ ಇರುತ್ತದೆ ಎಂದು ಗೆದ್ದ ಖಾನ್ ಹೇಳಿದರು. ಲಂಡನ್ ಮೇಯರ್ ಆದ ಮೊದಲ ಮುಸ್ಲಿಂ ಇವರು.

ತಮಿಳುನಾಡಿನ ಹಾಲಿ ಮುಖ್ಯಮಂತ್ರಿ ಸ್ಟಾಲಿನ್ ಅವರು ಮದರಾಸು ಮೇಯರ್ ಆಗಿ ಮೂರು ಅವಧಿಗೆ ನೇರ ಚುನಾವಣೆಯಲ್ಲಿ ಗೆದ್ದಿದ್ದರು. ಎಡಿಎಂಕೆ 1990ರ ಸುತ್ತಿನಲ್ಲಿ ನೇರ ಮೇಯರ್ ಆಯ್ಕೆ ಪದ್ಧತಿ ರದ್ದುಪಡಿಸಿತ್ತು.