ಎಲ್ಲಾ ನನ್ನ ಲೇಖನ ಓದುಗರಿಗೆ ಹಾಗೂ ಪಾಲಕರಿಗೆ ನಿಮ್ಮ ನವೀನ ನ ನಮಸ್ಕಾರಗಳು. ಓದುಗರೇ ಇಂದಿನ ನನ್ನ ಲೇಖನದ ವಿಷಯ ಮಕ್ಕಳ ಐಕ್ಯೂ ಮಟ್ಟವನ್ನು ಹೆಚ್ಚಿಸುವದು ಹೇಗೆ ನಮ್ಮ ಎಲ್ಲಾ ಪಾಲಕರಿಗೂ ತಮ್ಮ ಮಕ್ಕಳು ಬುದ್ಧಿವಂತರಾಗಬೇಕು ಚನ್ನಾಗಿ ಓದಬೇಕು ಏನೇ ಪ್ರಶ್ನೆ ಕೇಳಿದ್ರು ಕುಡ್ಲೆ ಉತ್ತರ ಕೊಡ್ಬೇಕು ಯಾವಾಗ್ಲೂ ಮಕ್ಕಳು ಸ್ಕೂಲ್ ನಲ್ಲಿ ಫಸ್ಟ್ ಬರ್ಬೇಕು ಅಂತ ಹೇಳಿ ಮಕ್ಕಳಿಗೆ ಬರೀ ಅದು ಓದು ಇದು ಓದು ಹೋಂ ವರ್ಕ್ ಮಾಡು ಅದು ಮಾಡು ಇದು ಮಾಡು ಅಂತ ಮಕ್ಕಳ ಹಿಂದೆ ಬೀಳ್ತಾರೆ ಹೊರತು ಅದನ್ನ ಬಿಟ್ಟು ನಮ್ಮ ಮಕ್ಕಳ ಐಕ್ಯೂ ಹೇಗೆ ಹೆಚ್ಚಿಸಬೇಕು ಅಂತ ಯಾರು ಯೋಚನೆ ಮಾಡುವದಿಲ್ಲ.. ಪಾಲಕರೇ ಕೇವಲ 24ಘಂಟೆ ಓದೋದ್ರಿಂದ ಐಕ್ಯೂ ಜಾಸ್ತಿ ಆಗೋಲ್ಲ ಅದಕ್ಕೆ ಕೆಲ ಬೇರೆ ಉಪಾಯಗಳನ್ನ ಮಾಡಬೇಕು. ಪಾಲಕರೇ ಇದು ಸ್ಪರ್ಧಾತ್ಮಕ ಜಗತ್ತು ಇಲ್ಲಿ ಮಕ್ಕಳು ಎಷ್ಟು ಮುಂದಿದ್ದರೂ ಸಾಲೋದಿಲ್ಲ.ನೂರಕ್ಕೆ ನೂರು ಮಾರ್ಕ್ಸ್ ತಗೊಂಡ್ರು ಕಡಿಮೆ ಅನ್ನೋ ಮನೋಭಾವ ನಮ್ಮೆಲ್ಲರದು ಮಕ್ಕಳು ಕೇವಲ ಓದಿನಲ್ಲಿ ಮಾತ್ರ ಮುಂದೆ ಇದ್ರೆ ಸಾಲದು ಅದರ ಜೊತೆಗೆ ಎಲ್ಲಾ ರಂಗದಲ್ಲೂ ಮುಂದೆ ಇರ್ಬೇಕು.ಕೆಲ ಮಕ್ಕಳ ಐಕ್ಯೂ ಮಟ್ಟ ಹೆಚ್ಚಿದ್ದರೆ ಕೆಲ ಮಕ್ಕಳ ಐಕ್ಯೂ ಕಡಿಮೆ ಇರುತ್ತೆ ಕೆಲ ಜನ ಹೇಳ್ತಾರೆ ಮಕ್ಕಳ ಐಕ್ಯೂ ಹುಟ್ಟಿದಾಗಿನಿಂದ ವಂಶದಿಂದ ಬಂದಿರುತ್ತದೆ ಅದನ್ನ ಏನು ಮಾಡೋಕೆ ಬರೋಲ್ಲ ಅಂತ ಹೇಳ್ತಾರೆ ಆದ್ರೇ ಇದು ತಪ್ಪು ನೀವುಗಳು ಕೆಲ ನಾನಾ ವಿಧಾನಗಳಿಂದ ಸ್ಮಾರ್ಟ್ ಮಾರ್ಗಗಳ ಸಹಾಯದಿಂದ ಮಕ್ಕಳು ಐಕ್ಯೂ ಮಟ್ಟವನ್ನು ಹೆಚ್ಚಿಸಬಹುದು ಅದು ಹೇಗೆ ಏನಂತ ಈ ಲೇಖನದಲ್ಲಿ ಹೇಳ್ತಿನಿ ಬನ್ನಿ......
ಐಕ್ಯೂ ಹೆಚ್ಚಿಸುವ ಉಪಾಯಗಳು
ದೈಹಿಕ ಆಟದ ಮೂಲಕ :- ಆಟದ ಮುಖಾಂತರ ಹೌದು ಪಾಲಕರೇ ಆಟಗಳು ಮಕ್ಕಳ ಐಕ್ಯೂ ಲೇವಲ್ ಹೆಚ್ಚು ಮಾಡೋದ್ರಲ್ಲಿ ತುಂಬಾ ಸಹಾಯ ಮಾಡುತ್ತೇ.ಇತ್ತೀಚಿನ ದಿನಗಳಲ್ಲಿ ಮಕ್ಕಳು ಮನೆಯಿಂದ ಹೊರಗೆ ಬರೋಲ್ಲ ಮತ್ತು ಪಾಲಕರು ಸಹ ನಾನಾ ಕಾರಣಗಳಿಂದ ಮಕ್ಕಳನ್ನ ಮನೆಯಿಂದ ಹೊರಗಡೆ ಕಳುಹಿಸೋದು ಇಲ್ಲಾ.ಇದರಿಂದ ಮಕ್ಕಳಿಗೆ ದೈಹಿಕ ಚಟುವಟಿಕೆ ಇಲ್ಲದಂತಾಗಿದೆ.ಆಟಗಳು ಮಕ್ಕಳಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಂಪೂರ್ಣ ಸದೃಢರನ್ನಾಗಿ ಮಾಡುತ್ತವೆ. ಅದಕ್ಕೆ ಮಕ್ಕಳನ್ನ ಆಟ ಆಡೋಕೆ ಬಿಡಿ ಮೈದಾನಗಳಿಗೆ ಆಟವಾಡಲು ಕಳುಹಿಸಿ ಅದರಿಂದ ಅವರ ಬುದ್ದಿ ಚುರುಕಾಗುತ್ತದೆ.. ಹಾಗೂ ಐಕ್ಯೂ ಮಟ್ಟ ಹೆಚ್ಚುತ್ತದೆ.
ಮಾನಸಿಕ ಆಟಗಳು :- ಈ ಆಟಗಳು ತುಂಬಾ ಮುಖ್ಯ ಪಾಲಕರೇ. ಮೈಂಡ್ ಗೇಮ್ ಗಳನ್ನ ಆಡಿಸುವದರ ಮೂಲಕ ನೀವು ನಿಮ್ಮ ಮಕ್ಕಳನ್ನು ಮಾನಸಿಕವಾಗಿ ಬಲಪಡಿಸಬಹುದು... ಉಧಾಹರಣೆ ಚೆಸ್ ಚದುರಂಗ ಆಟ ಈ ಆಟಗಳನ್ನ ನೀವು ಆಡಿಸಬೇಕು ಸಾದ್ಯವಾದರೆ ನೀವು ಅವರ ಜೊತೆಗೆ ಆಟ ಆಡಿ ಸಂದರ್ಭಕ್ಕೆ ತಕ್ಕ ಹಾಗೇ ಅವರಿಗೆ ಹೊಸ ವಿಚಾರಗಳನ್ನ ತುಂಬಿ ಹೀಗೆ ಮಾಡುವದರಿಂದ ನೀವು ನಿಮ್ಮ ಮಕ್ಕಳು ಖುಷಿಯಾಗಿ ಇರಬಹುದು ಹಾಗೂ ಈ ತರಹದ ಮೈಂಡ್ ಗೇಮ್ ಆಡೋದರಿಂದ ಮಕ್ಕಳ ಐಕ್ಯೂ ಮಟ್ಟದ ಜೊತೆಗೆ ಅವರಿಗೆ ಏಕಾಗ್ರತೆ ಕೂಡ ಹೆಚ್ಚುತ್ತದೆ.
ವ್ಯಾಯಾಮ ಯೋಗ :- ಪಾಲಕರಾದವರು ಮಕ್ಕಳಿಗೆ ವ್ಯಾಯಾಮ ಯೋಗ ಕೂಡ ಹೇಳಿ ಕೊಡಬೇಕು. ಇಲ್ಲಾ ಸಾದ್ಯವಾದರೆ ಬೆಳಿಗ್ಗೆ ನೀವು ಮಾಡುತ್ತ ನಿಮ್ಮ ಜೊತೆಗೆ ಅವರನ್ನು ಮಾಡಿಸುತ್ತ ಇದರ ರೂಡಿ ಮಾಡಿಸಬೇಕು. ಏಕೆಂದರೆ ವ್ಯಾಯಾಮ ಯೋಗ ಕೂಡ ಮಕ್ಕಳ ಐಕ್ಯೂ ಹಾಗೂ ಏಕಾಗ್ರತೆ ಹೆಚ್ಚಿಸುವಲ್ಲಿ ಹಾಗೂ ಅವರನ್ನ ಚೈತನ್ಯಪೂರ್ಣರಾಗಿ ಇಡುವಲ್ಲಿ ಬಹಳ ಸಹಾಯಕ.
ಗಣಿತದ ಸಹಾಯದಿಂದ :- ಮಕ್ಕಳ ಐಕ್ಯೂ ಮಟ್ಟವನ್ನು ಹೆಚ್ಚಿಸುವಲ್ಲಿ ಗಣಿತ ವಿಷಯ ಬಹಳ ಸಹಾಯಕಾರಿ ನೀವು ಮನೆಯಲ್ಲಿ ನಿಮ್ಮ ಮಕ್ಕಳಿಗೆ ಗಣಿತದ ಸಮಸ್ಯೆಗಳನ್ನು ಲೆಕ್ಕಗಳನ್ನು ಬಿಡಿಸಲು ಹೇಳುವ ಮುಖಾಂತರ ಅವರ ಐಕ್ಯೂ ಹೆಚ್ಚಿಸಬಹುದು...ಮಾನಸಿಕ ಸಾಮರ್ಥ್ಯ ಪರೀಕ್ಷೆ ಮಾಡುವ ಪ್ರಶ್ನೆಗಳ ಮುಖಾಂತರ ಕ್ಯಾಲೆಂಡರ್ ಪ್ರಶ್ನೆ ಟೈಮ್ ಪ್ರಶ್ನೆ ದಿಕ್ಕಿನ ಪ್ರಶ್ನೆ ಪಾಸ್ವರ್ಡ್ ಪ್ರಶ್ನೆ ಗಳ ಸಹಾಯದಿಂದ ಮಾಡಬಹದು.
ಕಥೆಗಳ ಹೇಳುವ ಮೂಲಕ :- ಹೌದು ಮನೆಯಲ್ಲಿ ಪಾಲಕರು ಮಕ್ಕಳಿಗೆ ನೀತಿ ಕಥೆಗಳನ್ನ ಹೇಳುವ ಮೂಲಕ ಹಾಗೂ ಆ ಕಥೆಗಳ ಮದ್ಯೆ ಕೆಲ ಪ್ರಶ್ನೆಗಳನ್ನ ಕೇಳುವ ಮೂಲಕ ಅವರ ಬುದ್ದಿಮಟ್ಟ ಪರೀಕ್ಷೆ ಮಾಡುತ್ತ ಅದನ್ನ ಅವರ ಯೋಚನಾ ಶಕ್ತಿ ಕಲ್ಪನಾ ಶಕ್ತಿ ಹೆಚ್ಚುವ ಹಾಗೇ ಮಾಡಬೇಕು... ಇದರಿಂದ ಅವರ ತರ್ಕ ಮಟ್ಟ ಹೆಚ್ಚಾಗಿ ಐಕ್ಯೂ ಕೂಡ ಹೆಚ್ಚಾಗುತ್ತದೆ..
ಪಾಲಕರು ಈ ಮೇಲಿನ ಕೆಲ ಉಪಾಯಗಳ ಸಹಾಯದಿಂದ ನಿಮ್ಮ ಮಕ್ಕಳು ಬುದ್ದಿ ಚುರುಕು ಮಾಡಿ ಅವರ ಐಕ್ಯೂ ಬುದ್ಧಿಲಬ್ಧ ಹೆಚ್ಚು ಮಾಡಬಹುದು...
Article by