ನೆಚ್ಚಿನ ಓದುಗರೇ ನಾನು ಕೆಲ ದಿನಗಳ ಹಿಂದೆ ಮಕ್ಕಳಿಗೆ ಪಾಠ ಬೋಧನೆ ಮಾಡುವಾಗ ಒಂದು ಪಾಠದ ಆಯ್ಕೆ ಮಾಡಿಕೊಂಡೆ... ಆ ಪಾಠದ ಶೀರ್ಷಿಕೆ ಮೈ ಪಢ ನಹೀ ಸಕಾ ಅಂದರೆ ನನಗೆ ಓದಲಾಗಲಿಲ್ಲ ಅಂತ.. ಈ ಪಾಠದಲ್ಲಿ ಒಬ್ಬ ವಿದ್ಯಾರ್ಥಿ ಮತ್ತು ಶಿಕ್ಷಕನ ಸಂವಾದವಿದೆ.. ಆ ಸಂವಾದದ ವಿಷಯ ಕೊರಗು ತಪ್ಪಿತಸ್ಥ ಭಾವ ಇಲ್ಲಿ ವಿದ್ಯಾರ್ಥಿಗೆ ಒಂದು ತರಹದ ಕೊರಗಿದ್ರೆ ಶಿಕ್ಷಕನಿಗೂ ಒಂದು ದೊಡ್ಡ ಕೊರಗು ಇದೆ.... ಅದೇನೆಂದು ತಿಳಿಯುವ ಮುನ್ನ ನಾವು ಶಿಕ್ಷಕ ಗುರು ಎಂದರೆ ಯಾರು...? ಎಂದು ತಿಳಿಯೋಣ...
ನಾನು ಓದಿದ ಪ್ರಕಾರ ನಾನು ತಿಳಿದ ಪ್ರಕಾರ ಗುರು ಎಂದರೆ...ಅಜ್ಞಾನವೆಂಬ ಅಂಧಕಾರದಿಂದ ಜ್ಞಾನ ಅನ್ನೋ ಬೆಳಕಿನ ಕಡೆಗೆ ಕರೆದೋಯ್ಯುವ ಒಂದು ಅದ್ಬುತ ಶಕ್ತಿ... ನಮ್ಮಲ್ಲಿ ಅಡಗಿ ಕೂತ ವಿಶೇಷ ಸುಪ್ತ ಶಕ್ತಿಗಳನ್ನ ತಿಳಿದು ನಮಗೆ ಅವುಗಳ ಪರಿಚಯ ಮಾಡಿಸಿ ಅವುಗಳನ್ನ ಹೊರ ತಂದು ನಮ್ಮನ್ನ ವಿಶೇಷರನ್ನಾಗಿ ಮಾಡುವ ಒಂದು ಸಕಾರಾತ್ಮಕ ಶಕ್ತಿ.... ಕಲ್ಲು ಬಂಡೆಯಂತಹ ವಿದ್ಯಾರ್ಥಿಗಳನ್ನ ಪ್ರತಿದಿನ ಸ್ವಲ್ಪ ಸ್ವಲ್ಪ ಕೆತ್ತಿ ಕೆತ್ತಿ ಅವುಗಳಿಗೆ ಮೂರ್ತಿ ರೂಪಾವನ್ನಾಗಿ ಮಾಡಿ ಹೊರ ಜಗತ್ತಿಗೆ ಪರಿಚಯ ಮಾಡಿಸುವ ಶಕ್ತಿ.... ಒಂದೇ ಮಾತಿನಲ್ಲಿ ಹೇಳಬೇಕೆಂದರೆ... ಒಟ್ಟಾರೆಯಾಗಿ ಗುರು ಶಿಕ್ಷಕನೆಂದರೆ.... ಒಬ್ಬ ವಿದ್ಯಾರ್ಥಿಯ ಒಳಗೆ ಅಡಗಿ ಕೂತ ಎಲ್ಲಾ ನಕಾರಾತ್ಮಕ ವಿಚಾರಗಳನ್ನ ಭಾವನೆಗಳನ್ನ ಕೀಳರಿಮೆಗಳನ್ನ ಹೊರಗಡೆ ತಂದು.. ಅವನಲ್ಲಿ ವಿಶೇಷ ಆತ್ಮವಿಶ್ವಾಸದ ವಿಚಾರಗಳನ್ನ ತುಂಬಿ ಜ್ಞಾನ ಸಾಮರ್ಥ್ಯ ಮತ್ತು ಮೌಲ್ಯಗಳನ್ನು ಪಡೆಯಲು ನೆರವು ನೀಡೋ ವ್ಯಕ್ತಿ.
ಮೇಲೆ ಹೇಳಿರೋ ಎಲ್ಲಾ ವಿಚಾರಗಳು ನೋಡಿದರೆ... ಶಿಕ್ಷಕ ಎನ್ನುವವರು ಯಾವತ್ತೂ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ ಅವರಿಗಾಗಿ ಉತ್ತಮ ಭವಿಷ್ಯವನ್ನು ನಿರ್ಮಿಸಲು ಭಗವಂತ ಈ ಪ್ರಕೃತಿಗೆ ನೀಡಿರೋ ವಿಶೇಷ ಉಡುಗೊರೆ ಅಂತ ಆಯ್ತು ಅಲ್ವಾ... ಆದ್ರೇ ಇಂದು ನಾನು ಮಕ್ಕಳಿಗೆ ಹೇಳೋ ಪಾಠದಲ್ಲಿ ಒಬ್ಬ ಶಿಕ್ಷಕನ ನಿರ್ಲಕ್ಷ ಮತ್ತು ಕಠೋರ ವರ್ತನೆಯಿಂದ ಒಬ್ಬ ಮುಗ್ಧ ವಿದ್ಯಾರ್ಥಿಗೆ ಶಿಕ್ಷಣ ಮತ್ತು ಶಿಕ್ಷಕರ ಮೇಲೆ ವಿಶ್ವಾಸವೇ ಹೋಗಿ.. ಅವನು ತನ್ನ ಶಿಕ್ಷಣ ಅರ್ಧಕ್ಕೆ ಬಿಟ್ಟು ಇಂದು ಬೆಳೆದು ದೊಡ್ಡವನಾಗಿ ನನ್ನಿಂದ ಓದಲಾಗಲಿಲ್ಲಿ ಅನ್ನೋ ಕೀಳರಿಮೆಯಲ್ಲೇ ಬದುಕುತ್ತಾ ಇದ್ದಾನೆ.. ಹಾಗೂ ಅದಕ್ಕೆ ಕಾರಣ ತನ್ನ ಜೊತೆಗೆ ಅತೀ ಕಠೋರವಾಗಿ ನಡೆದುಕೊಂಡ ಶಿಕ್ಷಕರೆ ಎಂದು ಕೊರಗುತ್ತಿದ್ದಾನೆ...ಅದು ಹೇಗೆ ಹೇಳ್ತಿನಿ ಬನ್ನಿ...
ಒಂದು ಊರು ಆ ಊರಲ್ಲಿ ಮುಖ್ಯ ಮಾರ್ಕೆಟ್ ನಲ್ಲಿ ಒಂದು ಅಂಗಡಿ ಆ ಅಂಗಡಿ ಹೆಸರು ಸಂಜು ಆಯ್ರನ್ ವರ್ಕ್ಸ್ ಆ ಅಂಗಡಿ ಹೊರಗೆ ಒಂದು ಆಟೋ ಬಂದು ನಿಲ್ಲುತ್ತೆ. ಆ ಆಟೋನಿಂದ ಒಬ್ಬ ವೃದ್ಧರು ಕೆಳಗೆ ಇಳಿಯುತ್ತಾರೆ.. ಅಂಗಡಿ ಬೋರ್ಡ್ ನೋಡಿ ಒಳಗೆ ಹೋಗ್ತಾರೆ. ಅಷ್ಟರಲ್ಲಿ ಆ ಅಂಗಡಿ ಮಾಲೀಕ ಸಂಜು ಬಂದು ಅವರನ್ನ ನೋಡಿ ಮಾತನಾಡುತ್ತಾನೆ... ಹೇಳಿ ಅಜ್ಜಾ ಏನಾಗಬೇಕು ಅಂತ... ಆ ವೃದ್ಧ ಹೇಳುತ್ತಾರೆ ನೋಡಪ್ಪ ನನ್ನ ಮನೆಯ ಎಲ್ಲಾ ಕಿಡಕಿಗಳಿಗೆ ಜಾಲರಿ ಹಾಕಬೇಕು ಹಾಕ್ತಿಯ ಅಂತ... ಅವರು ಅದನ್ನೆಲ್ಲಾ ಹೇಳುವಾಗ ಆ ಸಂಜು ಅವರನ್ನ ಧ್ಯಾನಕೊಟ್ಟು ನೋಡುತ್ತಾರೆ... ಆಗಾ ಅವನಿಗೆ ಗೊತ್ತಾಗುತ್ತೆ ಇವರು ನನ್ನ ಗುರುಗಳು ಅಂತ... ಅವನು ಆಗಲೇ ಅವರಿಗೆ ಕೇಳುತ್ತಾನೆ.. ಸರ್ ನಿಮಗೆ ನನ್ನ ಗುರುತು ಸಿಕ್ತಾ ಅಂತ... ಅದಕ್ಕೆ ಆ ವೃದ್ಧ ಅವನನ್ನು ಧಿಟ್ಟಿಸಿ ನೋಡುತ್ತಾ ಹೇಳ್ತಾರೆ ಕ್ಷಮಿಸಿ ನೀವು ಯಾರೆಂದು ನನಗೆ ಗೊತ್ತಿಲ್ಲ ಅಂತ ಹೇಳುತ್ತಾರೆ.. ಹಾಗೂ ನಾನು ಒಬ್ಬ ನಿವೃತ್ತ ಶಿಕ್ಷಕ ನನ್ನ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಇವತ್ತು ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದಾರೆ.. ದೊಡ್ಡ ದೊಡ್ಡ ವ್ಯಾಪಾರಿಗಳಾಗಿದ್ದಾರೆ ಅಂತ ಹೇಳಿಕೊಳ್ಳುತ್ತಾರೆ...ಆಗಾ ಸಂಜು ಹೇಳುತ್ತಾನೆ... ನೀವು ಬಲದೇವ ಟೀಚರ್ ಅಲ್ವಾ ಅಂತ.. ಆಗಾ ಅವರು ಹೌದು ನಿನಗೆ ಹೇಗೆ ಗೊತ್ತು ಎಂದು ಕೇಳುತ್ತಾರೆ... ಆಗಾ ಸಂಜು ಹೇಳುತ್ತಾನೆ...ಸರ್ ನಿಮಗೆ ನೆನಪಿದೆಯಾ ಸುಮಾರು 18 ವರ್ಷಗಳ ಹಿಂದೆ ನೀವು ಕೆಲಸ ಮಾಡೋ ಸ್ಕೂಲ್ ನಲ್ಲಿ 7ನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಇದ್ದ ನೀವು ಅವನನ್ನ ಮಾತು ಮಾತಿಗೂ ಮೂರ್ಖ ಮೂರ್ಖ ಅಂತ ಕರೀತಾ ಇದ್ರಿ....ಸರ್ ನಿಮಗೆ ನೆನಪಿದೆಯಾ ಒಂದು ದಿನ ನೀವು ನಾನು ಹೋಂ ವರ್ಕ್ ಮಾಡಿಲ್ಲ ಅಂತ ಯಾವ ರೀತಿ ನನ್ನ ಹೊಡೆದಿದ್ರೀ... ನಿಮ್ಮ ಅವತ್ತಿನ ಆ ಒಂದೊಂದು ಹೊಡೆತಗಳು ನನ್ನ ಜೀವನದ ದಿಕ್ಕನ್ನೇ ಬದಲಿಸಿ ನನಗೆ ಶಿಕ್ಷಣದ ಮೇಲೆ ಇದ್ದ ಆಸಕ್ತಿಯನ್ನ ಕೈ ಬಿಟ್ಟು ಪೂರ್ಣವಾಗಿ ಶಿಕ್ಷಣ ಅಂದ್ರೆ ತಿರಸ್ಕಾರ ಅನ್ನೋ ಭಾವನೆ ನನ್ನ ಮನಸ್ಸಲ್ಲಿ ಮೂಡಿತು... ನೀವು ಪ್ರತಿ ದಿನ ಏನೋ ಒಂದು ತಪ್ಪು ಹುಡುಕಿ ಆ ತಪ್ಪು ನನ್ನ ಮೇಲೆ ಹಾಕಿ ಎಲ್ಲರ ಮುಂದೆ ನನ್ನ ಮೂರ್ಖ ಅಂತ ಅವಮಾನ ಮಾಡಿ ಅನವಶ್ಯಕವಾಗಿ ನನ್ನ ಹೊಡೆಯುತ್ತಾ ಇದ್ರಿ... ಸರ್ ನಿಮಗೆ ನೆನಪಿದೆಯಾ ಅವಾಗ ನನ್ನ ತಂದೆ ಇರಲಿಲ್ಲ ನನ್ನ ತಾಯಿ ನಿಮ್ಮ ಹತ್ತಿರ ಬಂದು ನಮ್ಮ ಪರಿಸ್ಥಿತಿ ಎಲ್ಲಾ ಹೇಳಿಕೊಂಡು ನನಗೆ ಗಂಡ ಇಲ್ಲಾ ಈ ಒಬ್ಬ ಮಗ ಮಾತ್ರ ಆಸರೆ ಇವನಿಗೆ ಒಳ್ಳೆ ಶಿಕ್ಷಣ ಸಿಕ್ರೆ ಅದೇ ನನಗೆ ದೊಡ್ಡ ಉಡುಗೊರೆ ಅಂತ ನಿಮಗೆ ಹೇಳಿ ಹೋಗಿದ್ದರು... ಆದ್ರೇ ನೀವು ಏನು ಮಾಡಿದ್ರಿ... ಸರ್ ಆಗಾ ಎಲ್ಲಾ ಮಕ್ಕಳಿಗೂ ಅವರ ತಂದೆ ತಾಯಿ ಹೋಮ್ ವರ್ಕ್ ಮಾಡೋದ್ರಲ್ಲಿ ಸಹಾಯ ಮಾಡ್ತಾ ಇದ್ದರು.. ಆದ್ರೇ ನನಗೆ ಯಾರು ಇರಲಿಲ್ಲ... ತಂದೆ ಇಲ್ಲಾ ತಾಯಿ ಇದ್ರೂ ಅವಾರು ಅನಕ್ಷರಸ್ತರು ನಾನು ಹೇಗೋ ಮಾಡಿ ನನ್ನ ಸ್ನೇಹಿತರ ಜೊತೆಗೆ ಕೂತು ಒಂದು ದಿನ ತಡವಾದ್ರೂ ಮಾಡ್ತಾ ಇದ್ದೆ ಆದ್ರೇ ನೀವು ಅವತ್ತು ಹೊಡೆದ ಹೊಡೆತ... ನನ್ನ ಮನಸ್ಸಲ್ಲಿ ತುಂಬಾ ದೊಡ್ಡ ಮಟ್ಟದ ನೋವು ಮಾಡಿತು... ಅವತ್ತೇ ನಾನು ನಿರ್ಧಾರ ಮಾಡಿದೆ ಇನ್ನು ಮುಂದೆ ಯಾವತ್ತೂ ನಾನು ಸ್ಕೂಲ್ ಗೆ ಹೋಗಲ್ಲ ಅಂತ.... ನನ್ನ ತಾಯಿ ತುಂಬಾ ಹೇಳಿದ್ರು ಹೋಗು ಅಂತ ನಾನು ಹೋಗಲಿಲ್ಲ....
ಆಗಾ ಶಿಕ್ಷಕರು ಕೇಳುತ್ತಾರೆ.... ನೀವು ಆಗಾ ಬಿಟ್ಟು ಮತ್ತೇ ಯಾವತ್ತೂ ಸ್ಕೂಲ್ ಗೆ ಹೋಗಲಿಲ್ವ...?
ಆಗಾ ಸಂಜು ಹೇಳ್ತಾರೆ... ಇಲ್ಲ ಸರ್... ಎಲ್ಲೂ ಹೋಗಲಿಲ್ಲ ನಿಮ್ಮ ಹೊಡೆತದ ಪ್ರಭಾವ ಹೇಗಿತ್ತು ಅಂದ್ರೆ ಸ್ಕೂಲ್ ಟೀಚರ್ ಅಂದ್ರೆ ಭಯ ಆಗ್ತಾ ಇತ್ತು.... ಆದ್ರೇ ಇವತ್ತು ನನ್ನ ಜ್ಞಾನ ಇರೋ ಮಟ್ಟಿಗೆ ಈ ಚಿಕ್ಕ ಅಂಗಡಿ ವ್ಯಾಪಾರ ಮಾಡಿಕೊಂಡು ಇದ್ದೇನೆ.. ಒಂದು ವೇಳೆ ನಾನು ಚನ್ನಾಗಿ ಓದಿ ವಿದ್ಯಾವಂತನಾಗಿದ್ದಾರೆ ನೀವು ಹೇಳಿದ ಹಾಗೇ ನಿಮ್ಮ ಕೈಯಲ್ಲಿ ಕಲಿತ ಎಲ್ಲಾ ವಿದ್ಯಾರ್ಥಿಗಳು ಹೇಗೆ ದೊಡ್ಡ ಹುದ್ದೆ ದೊಡ್ಡ ವ್ಯಾಪಾರಿಗಳಾಗಿದ್ದರೋ ಅವರಲ್ಲಿ ನಾನು ಒಬ್ಬನಾಗ್ತಾ ಇದ್ದೆ... ಅಂತ ತನ್ನ ಬೇಸರ ಹೊರಹಾಕುತ್ತಾನೆ..
ಆಗಾ ಶಿಕ್ಷಕರು ಹೇಳುತ್ತಾರೆ... ನೀವು ಹಾಗೇ ಭಯ ಪಡಬಾರದಿತ್ತು. ಮತ್ತೇ ಸ್ವಲ್ಪ ದಿನ ಬಿಟ್ಟು ಸ್ಕೂಲ್ ಗೆ ಬರಬೇಕಿತ್ತು... ಅಂತ.... ಅದಕ್ಕೆ ಸಂಜು ಹೇಳ್ತಾರೆ... ಸರ್.. ಆಗಾ ನಾನು 7ನೇ ತರಗತಿ ಬಾಲಕ ನಾನು ನಿಮ್ಮ ವರ್ತನೆ ಕಂಡು ಭಯ ಪಟ್ಟಿರೋದ್ರಲ್ಲಿ ತಪ್ಪಿಲ್ಲ... ಆದ್ರೇ ಅವತ್ತು ನೀವು ಒಂದು ಸಣ್ಣ ಕೆಲಸ ಮಾಡಿದ್ರೆ... ಇವತ್ತು ನಾನು ಇಲ್ಲಿ ಕೂತ್ಕೋಳ್ತಾ ಇರಲಿಲ್ಲವೇನೋ..... ಅದೇನೆಂದರೆ... ಅವಾಗ ನಾನು ಸತತವಾಗಿ ತುಂಬಾ ದಿನ ಸ್ಕೂಲ್ ಗೆ ಬರದೇ ಇದ್ದಾಗ.. ಸ್ಕೂಲ್ ಬಿಟ್ಟಾಗ.. ನೀವು ಸ್ಕೂಲ್ ನಲ್ಲಿ ನನ್ನ ಸ್ನೇಹಿತರಿಗೆ ಸಂಜಯ ಯಾಕೆ ಬಂದಿಲ್ಲ... ಅಂತ ಕೇಳಿದ್ರೆ... ಅವರನ್ನ ನನ್ನ ಮನೆಗೆ ಕರೆ ತರಲು ಕಳುಹಿಸಿದ್ರೆ.. ಅಥವಾ ನನ್ನ ಆರೋಗ್ಯದಲ್ಲಿ ಏನಾದ್ರೂ ಸಮಸ್ಯೆ ಆಗಿರ್ಬೋದು ಅಂತ ತಿಳಿದುಕೊಂಡು ಸ್ವತಃ ನೀವೇ ಒಂದು ಸಲ ನಮ್ಮ ಮನೆಗೆ ಬಂದು ನನ್ನ ಮನವೊಲಿಸಿ ತಿಳಿ ಹೇಳಿ ಕರೆದುಕೊಂಡು ಹೋಗಿದ್ದರೆ.... ಬಹುಷಃ ನಾನು ವಿದ್ಯಾವಂತನಾಗಿರುತ್ತಾ ಇದ್ದೆ.... ಅಂತ ಹೇಳುತ್ತ... ಆ ವಿಷಯ ಬಿಟ್ಟು ಹೋಗ್ಲಿ ಬಿಡಿ ಸರ್ ಆಗಿದ್ದು ಆಗಿ ಹೋಯ್ತು ನಿಮ್ಮ ಕೆಲಸದ ಬಗ್ಗೆ ಮಾತಾಡೋಣ ಅಂತ ಹೇಳಿ ಆ ವಿಷಯ ಅಲ್ಲೇ ಬಿಡುತ್ತಾನೆ... ಆಗಾ ಆ ಶಿಕ್ಷಕರ ಕಣ್ಣಲ್ಲಿ ನೀರು ಹರಿದು ಬರುತ್ತಾ ಇದ್ದವು.....
Article by