"ಸ್ನೇಹಿತ" ನೋಡಿ ಈ ಸ್ನೇಹಿತ ಅನ್ನೋ 3 ಅಕ್ಷರದಲ್ಲಿ ಎಂತಹ ಅದ್ಭುತವಾದ ಒಂದು ಸಕಾರಾತ್ಮಕ ಶಕ್ತಿ ಅಡಗಿದೆ. ಪ್ರಿಯ ಓದುಗರೇ ನಾವು ಹುಟ್ಟಿದಕೂಡಲೇ ನಮ್ಮ ಜೊತೆ ಸಾಕಷ್ಟು ಸಂಭಂದಗಳು ಕೂಡಾ ನಮ್ಮ ಪರಿವಾರದೊಂದಿಗೆ ನಮ್ಮ ಜೊತೆ ಹುಟ್ಟಿಕೊಳ್ಳೋತ್ತವೆ. ಉಧಾಹರಣೆ ಅಪ್ಪಾ ಅಮ್ಮ ತಂಗಿ ತಮ್ಮ ಅಕ್ಕ ಅಣ್ಣ ಅಜ್ಜ ಅಜ್ಜಿ ಚಿಕ್ಕಪ್ಪ ಚಿಕ್ಕಮ್ಮ ದೊಡ್ಡಪ್ಪ ದೊಡ್ಡಮ್ಮ ಹೇಳ್ತಾ ಹೋದ್ರೆ ಲೇಖನದ ತುಂಬಾ ಅವರ ಹೆಸರುಗಳೇ ಬರುತ್ತೆ. ಈ ಎಲ್ಲಾ ಸಂಭಂದಗಳು ನಮ್ಮ ರಕ್ತ ಸಂಭಂದದಿಂದ ಬರುವ ಸಂಭಂದಗಳು.

ಆದರೆ ಸ್ನೇಹ ಸ್ನೇಹಿತ ಖುದ್ದು ನಾವಾಗಿ ಹುಟ್ಟುಹಾಕುವ ಸಂಭಂದ ಒಬ್ಬ ವ್ಯಕ್ತಿಗೆ ಹೇಗೆ ತನ್ನ ಕುಟುಂಬ ಮಹತ್ವದ ಪಾತ್ರ ವಹಿಸುತ್ತದೆಯೋ ಅದೇ ರೀತಿ ಸ್ನೇಹ ಕೂಡಾ ಒಬ್ಬ ವ್ಯಕ್ತಿಯ ಜೀವದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಆ ಸ್ನೇಹಕ್ಕೆ ಒಂದು ವಿಶೇಷವಾದ ಅರ್ಥ ಆಕಾರ ಬರೋದಕ್ಕೆ ಪ್ರಮುಖ ಕಾರಣ ಒಳ್ಳೆಯ ಉತ್ತಮ  ಸ್ನೇಹಿತನ ಆಯ್ಕೆ..ಹಾಗಾದ್ರೆ ಒಳ್ಳೆಯ ಉತ್ತಮ ಸ್ನೇಹಿತನ ಗುರುತಿಸುವಿಗೆ ಹೇಗೆ? ಅದನ್ನ ಈ ಲೇಖನದಲ್ಲಿ ತಿಳಿಯೋಣ...

ಉತ್ತಮ ಒಳ್ಳೆಯ ಸ್ನೇಹಿತನ ಗುರುತಿಸುವೇಕೆ

ಓದುಗರೇ ನಮ್ಮ ಜೀವನದಲ್ಲಿ ಒಳ್ಳೆಯ ಸ್ನೇಹಿತರ ಅವಶ್ಯಕತೆ ನಮಗೆ ಬಹಳ ಮುಖ್ಯ. ನಾವು ನಮ್ಮ ಕುಟುಂಬದವರ ಜೊತೆ ನಮ್ಮ ಅಣ್ಣ ತಮ್ಮಂದಿರ ಜೊತೆ ಹೇಳಿಕೊಳ್ಳದ ಎಷ್ಟೋ ವಿಷಯಗಳನ್ನು ನಾವು ನಮ್ಮ ಆತ್ಮೀಯ ಸ್ನೇಹಿತನ ಜೊತೆ ಹೇಳಿಕೊಳ್ಳುತ್ತೇವೆ. ಹಾಗೂ ಎಷ್ಟೋ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತೇವೆ.

ಒಬ್ಬ ಒಳ್ಳೆಯ ಸ್ನೇಹಿತ ನಮ್ಮ ಜೀವನದಲ್ಲಿ ಬಹಳ ಪ್ರಮುಖ ಪಾತ್ರವನ್ನು ನಿಭಾಹಿಸುತ್ತಾನೆ. ಒಳ್ಳೆಯ ಸ್ನೇಹಿತ ಕಷ್ಟದ ಸಮಯದಲ್ಲಿ ಯಾವಾಗಲು ನಿಮ್ಮ ಜೊತೆಯಾಗಿ ಇರುತ್ತಾನೆ. ನಿಮ್ಮ ಜೊತೆಯಾಗಿ ನಿಲ್ಲುತ್ತಾನೆ ಯಾವದೇ ಕಾರಣಕ್ಕೂ ಭಯಪಡಬೇಡ ಅನ್ನುವ ಧೈರ್ಯ ತುಂಬುತ್ತಾನೆ ಒಳ್ಳೆಯ ಸ್ನೇಹಿತ ಯಾವದೇ ಸಂದರ್ಭದಲ್ಲಿ ಸದಾ ನಿಮ್ಮ ಜೊತೆಯಾಗಿ ಇದ್ದು ಅವನಿಂದ ಆಗುವ ಎಲ್ಲಾ ಸಹಾಯ ನಿಮಗಾಗಿ ಮಾಡುತ್ತಾನೆ. ಅವನಿಂದ ಹಣದ ಸಹಾಯ ಮಾಡಲು ಆಗದೆ ಇದ್ದಾಗ ಕೂಡಾ ಅವನು ನಿಮ್ಮ ಜೊತೆಯಾಗಿ ನಿಂತು ಧೈರ್ಯ ತುಂಬುವನು. ನಿಜವಾದ ಸ್ನೇಹಿತ ಒಳ್ಳೆಯ ಸಿಹಿಯಾದ ಮಾತುಗಳನ್ನು ಆಡುತ್ತಾನೆ ನಾವು ತಪ್ಪು ಮಾಡಿದಾಗ ಕಹಿಯಾಗಿ ಮಾತನಾಡಿ ನಮಗೆ ಸರಿಯಾದ ಮಾರ್ಗದರ್ಶನ ಕೂಡಾ ಮಾಡುತ್ತಾನೆ. ಅವನು ಕಹಿಯಾಗಿ ಮಾತನಾಡಿ ತಿಳಿ ಹೇಳಿದಾಗ ನಾವು ಅವನನ್ನ ದೂರ ಮಾಡಿದರು ಪ್ರತಿದಿನ ಅವನು ನಮ್ಮ ಬಗ್ಗೆನೇ ಯೋಚನೆ ಮಾಡುತ್ತ ನಮಗೆ ಒಳ್ಳೆಯದನ್ನೇ ಬಯಸುತ್ತಾನೆ. ಅವರಿಗೆ ನಾವು ದೂರ ಮಾಡಿದರು ನಮಗೆ ತೊಂದರೆ ಆದಾಗ ಎಲ್ಲಾ ಮರೆತು ಮೊದಲು ಅವನು ನಮ್ಮ ಜೊತೆಯಾಗಿ ಬಂದು ನಿಲ್ಲುತ್ತಾನೆ.ಒಬ್ಬ ಒಳ್ಳೆಯ ಸ್ನೇಹಿತ ನಮ್ಮಿಂದ ಏನು ಬಯಸುವದಿಲ್ಲ. ಬಯಸುವದು ನಮ್ಮ ಸಮಯ ನಮ್ಮ ಸುರಕ್ಷೆ ಮಾತ್ರ.ನಮ್ಮ ಕೆಟ್ಟ ಸಮಯದಲ್ಲಿ ಅವನು ಯಾವತ್ತೂ ನಮ್ಮನ್ನ ಒಂಟಿಯಾಗಿ ಇರಲು ಬಿಡುವದಿಲ್ಲ. ಅವನಿಂದ ನಮಗೆ ಯಾವದೇ ತರಹ ಸಹಾಯ ಮಾಡಲು ಆಗದೆ ಇದ್ದರು ಸಹ ಸುಮ್ಮನೆ ಬಂದು ನಮ್ಮ ಪಕ್ಕದಲ್ಲಿ ನಿಂತು ನಾನು ನಿನ್ನ ಜೊತೆ ಇದ್ದೀನಿ ಅಂತ ಧೈರ್ಯ ಹೇಳುತ್ತಾನೆ.. ಇದು ಪ್ರಾಮಾಣಿಕ ಸ್ನೇಹ.

ಒಬ್ಬ ಸ್ನೇಹಿತ ಕಷ್ಟದಲ್ಲಿ ಇದ್ದಾಗ ತನ್ನ ಸ್ನೇಹಿತರಿಗೆ ಸಹಾಯ ಕೇಳುವದು ಸಹಜ ಆದರೆ ನಿಜವಾದ ಸ್ನೇಹಿತರು ಅವರ ಪರಿಸ್ಥಿತಿ ಬಗ್ಗೆ ನು ಹೇಳಿ ನಮಗೆ ತಿಳಿಸಬೇಕು ಅದನ್ನ ಬಿಟ್ಟು ಆ ಸ್ನೇಹಿತನ್ನ ದೂರ ಮಾಡಬಾರದು. ಸಂಭಂದ ಯಾವದೇ ಆಗಿರಲಿ ಅದರಲ್ಲಿ ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳೋದು ಬಹಳ ಮುಖ್ಯ. ಎಷ್ಟು ಸ್ನೇಹ ಸಂಭಂದಗಳು ತುಂಬಾ ಚಿಕ್ಕ ಚಿಕ್ಕ ವಿಷಯಕ್ಕೆ ಅಂತ್ಯ ಕಂಡಿದೆ ಅದು ಹಾಗೆ ಆಗ್ಬಾರ್ದು..

ನನ್ನ ಕೆಲವು ಸ್ನೇಹಿತರು ನಾನು ಅವರನ್ನ ಯಾವಾಗ ಎಲ್ಲಿ ಕರೆದರೂ ಯಾಕೆ ಅಂತಾನೂ ಕೇಳದೆ ನನ್ನ ಜೊತೆ ನಾನು ಕರೆದಲ್ಲಿ ಬಂದರು.. ಆದರೆ ಅವರು ನನ್ನನ್ನ ಕರೆದಾಗ ನಾನು ಬರದೇ ಇದ್ದಕ್ಕೆ ನನ್ನ ಪರಿಸ್ಥಿತಿಯ ಬಗ್ಗೆ ತಿಳಿದು ಕೂಡಾ ನಾನು ಬರಲಿಲ್ಲ ಅನ್ನೋ ಒಂದೇ ಕಾರಣ ನೀಡಿ ನನ್ನ ಸ್ನೇಹವನ್ನ ದೂರ ಇಟ್ಟರು... ನಾನು ಯಾವ ಕಾರಣಕ್ಕೆ ಬರಲಿಲ್ಲ ಎಂಬುದು ಅವರು ಅರ್ಥ ಮಾಡಿಕೊಳ್ಳಲಿಲ್ಲ.. ನಮ್ಮ ಅವತ್ತಿನ ಪರಸ್ಥಿತಿಯ ಬಗ್ಗೆ ಅರಿವಿಲ್ಲಿದ ಸ್ನೇಹಿತ ತಪ್ಪು ತಿಳಿದರೆ ಹೋಗಿ ತಿಳಿ ಹೇಳಿ ಮಾತನಾಡಬಹುದು ಆದರೆ ಎಲ್ಲಾ ಗೊತ್ತಿದ್ದೂ ಸಣ್ಣ ವಿಷಯಕ್ಕೆ ಸ್ನೇಹಿತನ ದೂರ ಮಾಡುವ ಸ್ನೇಹಿತರಿಗೆ ಏನು ಹೇಳದೆ ಮೌನವಾಗಿ ಇರುವದು ಒಳ್ಳೆಯದು ಅವರಿಗೆ ಸಮಯನೇ ಉತ್ತರ ಕೊಡುತ್ತೆ.

ನನ್ನ ಇನ್ನು ಕೆಲವು ಸ್ನೇಹಿತರು ನನ್ನ ಪ್ರತಿ ಪರಿಸ್ಥಿತಿಯಲ್ಲೂ ಸದಾ ನನ್ನ ಜೊತೆಯಾಗಿ ನಿಂತು ನನಗೆ ಸಹಾಯ ಮಾಡಿದ್ದಾರೆ ಮಾಡುತ್ತ ಇದ್ದರೆ. ಇವತ್ತು ಸಹ ನನ್ನ ನಾನು ಏನು ಹೇಳದೆಯ ನನ್ನ ಮನಸಿನ ಭಾವನೆಯನ್ನು ತಿಳಿದು ನನಗೆ ಅವರಿಂದ ಆಗುವ ಸಹಾಯ ಹಾಗೂ ಧೈರ್ಯದ ಮಾತುಗಳನ್ನ ಹೇಳುತ್ತಾರೆ.. ಏನಾದರೂ ನನ್ನ ಮಾತಿನಲ್ಲಿ ಬದಲಾವಣೆ ಕಂಡರೆ ಅವರ ಎಲ್ಲಾ ಕಾರ್ಯಗಳನ್ನು  ಬಿಟ್ಟು ನನ್ನ ಮನೆಗೆ ಬಂದು ನನ್ನ ಬಲವಂತದಿಂದ ಹೊರಗೆ ಕರೆದುಕೊಂಡು ಹೋಗಿ ನನ್ನ ಸಾಮಾನ್ಯ ಪರಿಸ್ಥಿತಿಗೇ ಮಾಡಿ ತಂದು ಬಿಟ್ಟು ಹೋಗುತ್ತಾರೆ ಊರಲ್ಲಿ ಇರದ ಸ್ನೇಹಿತರು ಫೋನ್ ಕಾಲ್ ಮಾಡಿ ನಮ್ಮ ಮನಸ್ಸಿಗೆ ಸಮಾಧಾನ ಆಗುವವರೆಗೂ ಮಾತನಾಡುತ್ತಾರೆ.. ಇವರು ನಿಜವಾದ ಉತ್ತಮ ಸ್ನೇಹಿತರು...

ಒಬ್ಬ ನಿಜವಾದ ಸ್ನೇಹಿತ ಮತ್ತೊಬ್ಬ ಸ್ನೇಹಿತನಿಂದ ಕೇವಲ ಅವನ ಸ್ನೇಹ ಮಾತ್ರ ಬಯಸುತ್ತೇನೆ ಅವನ ಸಮಯವನ್ನು ಬಯಸುತ್ತಾನೆ. ಅವನು ಬಡವ ಶ್ರೀಮಂತ ಜಾತಿ ಯಾವದನ್ನು ನೋಡಲ್ಲ.. ಅವನು ನೋಡುವದು ಅವನಿಗೆ ಸ್ಪಂದಿಸುವ ಮನಸ್ಸು ಮಾತ್ರ.""ನನ್ನ ಜೀವನದಲ್ಲಿ ಸದಾ ನನ್ನ ಜೊತೆಯಾಗಿ ನನ್ನ ರಕ್ಷಾಕವಚವಾಗಿ ನನ್ನ ಪ್ರತಿ ಹಂತದಲ್ಲೂ ಒಗ್ಗಟ್ಟಾಗಿ ನಿಂತ ನನ್ನ ಕೆಲವು ಪ್ರಾಣಸ್ನೇಹಿತರ ಭಾವಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

ನಿಷ್ಕರ್ಷ..

ಎಲ್ಲಾ ಸ್ನೇಹಿತರಿಗೂ ನನ್ನದೊಂದು ಮನವಿ ನಮ್ಮ ಜೀವನದಲ್ಲಿ ಒಬ್ಬ ಒಳ್ಳೆಯ ಸ್ನೇಹಿತ ಸಿಗುವದು ಬಹಳ ವಿಶೇಷ. ಪುಣ್ಯಮಾಡಿದವರಿಗೆ ಒಬ್ಬ ನಿಜವಾದ ಒಳ್ಳೆ ಮನಸ್ಸಿನ ಸ್ನೇಹಿತ ಸಿಗುತ್ತಾನೆ. ನೋಡಿ ಸ್ನೇಹಿತರೇ ನಿಮ್ಮ ಒಬ್ಬ ಗೆಳೆಯ ಕಷ್ಟದಲ್ಲಿ ಇದ್ದಾಗ ಅವನು ನಿಮಗೆ ಯಾವದೇ ಸಹಾಯ ಕೇಳಿದಾಗ ನಿಮ್ಮ ಕೈಯಲ್ಲಿ ಏನು ಮಾಡಲು ಆಗದೆ ಇದ್ದರು ಸಹ ಪರವಾಗಿಲ್ಲ ಆದರೆ ಅವನ ಜೊತೆಯಲ್ಲಿ ನೀವು ಇರುವದು ಬಹಳ ಮುಖ್ಯ ಅವ್ನಿಗೆ ನಿಮ್ಮ ಆಸರೆ ಕೂಡಾ ಮುಖ್ಯ..

ನಮ್ಮ ಜೊತೆ ನಿಂತು ಯುದ್ಧ ಮಾಡದೇ ಇದ್ರು ಸರಿಯಾದ ಮಾರ್ಗದರ್ಶನ ಮಾಡೋ ಶ್ರೀ ಕೃಷ್ಣನ ಹಾಗೆ ಇರೋ ಸ್ನೇಹಿತರು ನೀವಾಗಿ.

ನಮ್ಮ ಫ್ರೆಂಡ್ಸ್ ಲಿಸ್ಟ್ ನಲ್ಲಿ ಎಷ್ಟು ಜನ ಇದ್ದಾರೆ ಅನ್ನೋದು ಮುಖ್ಯ ಅಲ್ಲಾ ನಮ್ಮ ಜೊತೆ ಎಷ್ಟು ಜನ ನಿಲ್ತಾರೆ ಅನ್ನೋದು ಮುಖ್ಯ....


ನವೀನ ಹಬೀಬ ಶಿಕ್ಷಕರು