ಕೊಲೊರಾಡೋದ ಸ್ಪ್ರಿಂಗ್ಸ್ ನಗರದಲ್ಲಿ ಭಾನುವಾರ ಮಧ್ಯ ರಾತ್ರಿ ಹುಟ್ಟುಹಬ್ಬದ ಪಾರ್ಟಿ ಮೇಲೆ ದಾಳಿ ಮಾಡಿದ ಒಬ್ಬನು ಆರು ಜನರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೊಲೊರಾಡೋದಲ್ಲಿ ಡೆನ್ವರ್ ಬಳಿಕದ ಎರಡನೇ ‌ನಗರ ಸ್ಪ್ರಿಂಗ್ಸ್. ತಾತ್ಕಾಲಿಕ ಎನಿಸಿದ ಟ್ರೇಲರ್ ಮನೆಯಲ್ಲಿ ಪಾರ್ಟಿ ನಡೆಯುತ್ತಿತ್ತು. ಕೃತ್ಯ ಪೂರ್ವ ನಿಯೋಜಿತ ಎಂದು ಪೋಲೀಸರು ಹೇಳಿದ್ದಾರೆ. ಒಟ್ಟಾರೆ ಗುಂಡು ಹಾರಿಸದೆ ಆರು ಜನರನ್ನು ಗುಂಡಿಟ್ಟು ಕೊಂದಿದ್ದಾನೆ.

ಕೊಲೆಯ ಬಳಿಕ ತಾನೂ ಗುಂಡು ಹಾರಿಸಿಕೊಂಡು ತಾಕೊಲೆ ಮಾಡಿಕೊಂಡಿದ್ದಾನೆ. ಗಾಯಗೊಂಡ ಆತ ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲಿ ‌ಸತ್ತ.‌ ಕೊಲೆಗಾರನು ಕೊಲೆಯಾದ ಒಬ್ಬಳ ಪ್ರಿಯಕರ ಎನ್ನಲಾಗಿದೆ. ಮಕ್ಕಳಿಗೆ ಏನೂ ಆಗಿಲ್ಲ. ಆಳುತ್ತಿದ್ದ ಅವರನ್ನು ‌ಪೋಲೀಸರು ಕೂಡಲೆ ಸುಭದ್ರ ಸ್ಥಳಕ್ಕೆ ಕರೆದೊಯ್ದರು.