ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಅಸಂತಡ್ಕ ಪ್ರದೇಶದಲ್ಲಿ ಏಳೆಂಟು ಇದ್ದ ಕಾಡುಕೋಣಗಳ ಗುಂಪು ಕಂಡಿದೆ. ಇದರಿಂದ ಜನರು ತೀವ್ರ ಆತಂಕಕ್ಕೆ ಒಳಗಾದರು. ಕಳೆದ ವರುಷ ಈ ಸುತ್ತಿನಲ್ಲಿ ಕಾಡುಕೋಣಗಳ ಹಿಂಡು ಅಪಾರ ಹಾನಿ ಉಂಟುಮಾಡಿತ್ತು.
ಜನರು ಭಯಬೀತರಾಗಲು ಇನ್ನೂ ಒಂದು ಕಾರಣವಿದೆ. ಕಳೆದ ವಾರ ಪಕ್ಕದ ಕೆಯ್ಯೂರಿನಲ್ಲಿ ಚಿರತೆಯೊಂದು ದನ ಕೊಂದು, ಅರ್ಧ ತಿಂದಿತ್ತು. ಉಳಿದುದನ್ನು ರಬ್ಬರ್ ಮರದ ಮೇಲೆ ಇಟ್ಟು ಹೋಗಿತ್ತು.