ಕಿನ್ನಿಗೋಳಿ:  ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಒಂದು ವಿಶಿಷ್ಟವಾದ ವೈದ್ಯಕೀಯ ಪದ್ಧತಿಯಾಗಿದ್ದು ದೀರ್ಘಕಾಲೀನ ರೋಗವನ್ನು ಗುಣಪಡಿಸಲು ಸಾಧ್ಯವಿದೆ ಯಾವುದೇ ಅಡ್ಡ ಪರಿಣಾಮವಿಲ್ಲದೆ  ಮನುಷ್ಯನ ಆರೋಗ್ಯ ಸುಧಾರಣೆ ಮತ್ತು ಸುರಕ್ಷತೆ ಕಾಪಾಡುದಲ್ಲಿ ಹೆಚ್ಚಿನ ಮಹತ್ವ ನೀಡುತ್ತದೆ ಇದುವೇ ಒಂದು ಸಾಧನೆ ಎಂದು ಬಳ್ಕುಂಜೆ ಗ್ರಾಮ ಪಂಚಾಯತ್  ಅಧ್ಯಕ್ಷರು ಮಮತಾ ಪೂಂಜಾ ಹೇಳಿದರು.

ಅವರು ಕೊಲ್ಲೂರು ಬಳ್ಕುಂಜೆಯಲ್ಲಿ ನಡೆದ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ ಪುಣೆ,  ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ಆಸ್ಪತ್ರೆ ಮೂಡುಬಿದಿರೆ, ಆಯುಷ್ ಇಲಾಖೆ ಮಂಗಳೂರು, ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಕೊಲ್ಲೂರು, ಬಳ್ಕುಂಜೆ ಇವರ ಜಂಟಿ ಆಶ್ರಯದಲ್ಲಿ ಉಚಿತ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ಮಾಹಿತಿ ಹಾಗೂ ಆರೋಗ್ಯ ತಪಾಸಣೆ ಶಿಬಿರವನ್ನು   ಉದ್ಘಾಟಿಸಿ  ಮಾತನಾಡಿದರು.

ಈ ಸಂದರ್ಭ ಮಾಜಿ ತಾಲೂಕ್ ಪಂಚಾಯತ್ ಅಧ್ಯಕ್ಷರು  ರಶ್ಮಿ ಆಚಾರಿಯ,  ಹಿರಿಯರಾದ ಇತಾಪ ಸಾಲಿಯಾನ್, ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಉಪನ್ಯಾಸಕರಾದ ಡಾ. ಪ್ರಜ್ವಲ್ , ಡಾ. ಅನುಪ್ರಿತ ಶೆಟ್ಟಿ, ಬಳ್ಕುಂಜೆ ಪಂಚಾಯತ್ ಸದಸ್ಯರಾದ  ಆನಂದ, ಕೊಲ್ಲೂರು ಬಳ್ಕುಂಜೆ ಆರೋಗ್ಯ ಮತ್ತು ಕ್ಷೇಮ ಕೇಂದ್ರ ವೈದ್ಯಾಧಿಕಾರಿ  ಡಾ. ಶೋಭರಣಿ ಮತ್ತಿತರರು ಉಪಸ್ಥಿತರಿದ್ದರು