ಮೂಡುಬಿದಿರೆ: ಶ್ರೀ ದಿಗಂಬರ ಜೈನ ಮಠ ಜೈನಕಾಶಿ ಮೂಡುಬಿದಿರೆಗೆ ಪ ಪೂ ಶ್ರೀಮಜ್ಜಗದ್ಗುರು ಶಂಕಾರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು, ದಿವ್ಯಕ್ಷೇತ್ರ ಹರಿಹರಪುರದಿಂದ ಆಗಮಿಸಿ ಸೌಹಾರ್ದ ಭೇಟಿ ನೀಡಿ ಭಗವಾನ್ ಪಾರ್ಶ್ವ ನಾಥಸ್ವಾಮಿ ಮಹಾಮಾತೇ ಕುಷ್ಮಾoಡಿನಿ ದೇವಿ ಮಂಗಳವಾರ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು ಬಳಿಕ ಜಗದ್ಗುರು ಪೊಜ್ಯ ಮೂಡುಬಿದಿರೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ವರ್ಯ ಮಹಾಸ್ವಾಮೀಜಿಗಳವರೊಂದಿಗೆ ಎರಡು ಗಂಟೆ ಧರ್ಮ ಚರ್ಚೆ ನಡೆಸಿದರು. ಈ ಸಂಧರ್ಭ ಯುವ ಪೀಳಿಗೆಗೆ ಸಂಸ್ಕಾರ ಶಿಬಿರ ಧರ್ಮ ಸಮ್ಮೇಳನದ ಬಗ್ಗೆ ಉತ್ತಮ ಚರ್ಚೆ ನಡೆಯಿತು.

ಶ್ರೀ ಮಠ ದ ಧರ್ಮ ಛಾವಡಿಯಲ್ಲಿ  ಪ.ಪೂ ಮೂಡುಬಿದಿರೆ ಹರಿಹರ ಶ್ರೀ ಳವರು ಪರಸ್ಪರ ಗೌರವ ವಿನಿಮಯ ಮಾಡಿಕೊಂಡರು.  ಮೂಡುಬಿದಿರೆ ಕ್ಷೇತ್ರ ಐತಿಹಾಸಿಕ ಅಪೂರ್ವ ಜೈನ ಕೇಂದ್ರವಾಗಿದ್ದು ಭಾರತೀಯ ಸಂಸ್ಕೃತಿ ಸಂವರ್ದನೆಗೆ ಮಹತ್ತರ ಕೊಡುಗೆ ನೀಡಿದೆ. ಇಲ್ಲಿಯ ಗುರು ಪರಂಪರೆ ಶಂಕರ ಪೀಠಕ್ಕೂ ಅನನ್ಯ ದರ್ಶನ ಸಿದ್ದಾoಥಗಳಲ್ಲಿ ಪುನರ್ ಜನ್ಮ, ಕರ್ಮ, ಪಾಪ ಪುಣ್ಯ, ಮೂರ್ತಿ ಪೂಜೆ ಮೊದಲಾದ ಧಾರ್ಮಿಕ ಜ್ಞಾನ ಕಾಂಡ,ಕ್ರಿಯಾ ಕಲಾಪಗಳಲ್ಲಿ ಹಲವು ಸಾಮ್ಯತೆಗಳಿವೆ ಎಂಬುದನ್ನು ತಿಳಿಸಿದರು. ಉಭಯ ಶ್ರೀಗಳು ಭಕ್ತ ವ್ರoದಕ್ಕೆ ಹರಸಿ ಆಶೀರ್ವಾದ ಮಾಡಿದರು. ಮೂಡುಬಿದಿರೆ ಕ್ಷೇತ್ರಕ್ಕೆ  ಆಗಮಿಸಿದ್ದು ಇಲ್ಲಿಯ ಅಪೂರ್ವ ಪ್ರಾಚೀನ ದೇವರ ಬಿಂಬ ಜಿನವಾಣಿ ಆಗಮ ಗ್ರಂಥ ದರ್ಶನ ಮಾಡಿ ಧರ್ಮ ಚರ್ಚೆ ಮಾಡಿ ನಿರಂತರ ಧರ್ಮಪ್ರಚಾರ ಕಾರ್ಯದಲ್ಲಿ ನಿರತ ಶ್ರೀ ಚಕ್ರ ಆರಾಧಕ ಹರಿಹರ ಸ್ವಾಮೀಜಿ ಆಗಮನ ಸಂತೋಷ ನೀಡಿದೆ. ಆಗಾಗ ಕ್ಷೇತ್ರ ಕ್ಕೆ ಪೊಜ್ಯ ಶ್ರೀ ಗಳ ಭೇಟಿ ಆಗುತ್ತಿರಲಿ ಎಂದು ಮೂಡುಬಿದಿರೆ ಸ್ವಾಮೀಜಿ ಆಶಯ ವ್ಯೆಕ್ತ ಪಡಿಸಿದರು. ಬಳಿಕ ರಾತ್ರಿ 9.30ಕ್ಕೆ ಹರಿಹರ ಸ್ವಾಮೀಜಿ ಅವರ ಸ್ವ ಕ್ಷೇತ್ರ ಕ್ಕೆ ತೆರಳಿದರು.