ಒಲಿಂಪಿಕ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತದ ಸ್ಪರ್ಧಿಯೊಬ್ಬರು ಫೆನ್ಸಿಂಗ್ ಕತ್ತಿ ವರಸೆಯಲ್ಲಿ ಒಂದು ಸುತ್ತನ್ನು ಗೆದ್ದು ದಾಖಲೆ ಬರೆದರು. ಅವರೇ ಭವಾನಿ ದೇವಿ.
ಇವರು ಮೊದಲ ಸುತ್ತಿನಲ್ಲಿ ಟ್ಯನೀಶಿಯಾದ ನಾಡಿಯಾ ಬೆನ್ ಅವರನ್ನು 15- 3ರಿಂದ ಅದ್ಭುತವಾಗಿ ಸೋಲಿಸಿ ಭಾರತದ ಫೆನ್ಸಿಂಗ್‌ನ ಮೊದಲ ಗೆಲುವಿನ ದಾಖಲೆ ಬರೆದರು.
ಆದರೆ ಎರಡನೆಯ ಸುತ್ತಿನಲ್ಲಿ ಫ್ರಾನ್ಸಿನ ಬನೋವ್ ಬ್ರೂನೆದ್ ವಿರುದ್ಧ ಸೋಲನುಭವಿಸಿ ಹೊರಬಿದ್ದರು.