ಮುಂದಿನ ವರುಷ ಚುನಾವಣೆ ನಡೆಯಲಿರುವ ಉತ್ರರ ಪ್ರದೇಶಕ್ಕೆ ಮೋದಿ ಸಂಪುಟದಲ್ಲಿ 14 ಸ್ಥಾನ ನೀಡಲಾಗಿದೆ.
ರಾಜನಾಥ್ ಸಿಂಗ್ ಸಹಿತ 7 ಜನ ಉತ್ತರ ಪ್ರದೇಶದ ಕೇಂದ್ರ ಮಂತ್ರಿಗಳಿದ್ದರು. ನಿನ್ನೆ ಹೊಸದಾಗಿ ಆರು ಜನರನ್ನು ಸೇರಿಸಿಕೊಳ್ಳಲಾಯಿತು. ಪ್ರಧಾನಿ ಮೋದಿ ಗುಜರಾತಿನವರಾದರೂ ಅವರು ಗೆದ್ದಿರುವುದು ಉತ್ತರ ಪ್ರದೇಶದ ಬನಾರಸ್‌ನಿಂದ.
ಉತ್ತರ ಪ್ರದೇಶದಿಂದ ಹೊಸದಾಗಿ ಮಂತ್ರಿ ಆದವರಲ್ಲಿ ಅಪ್ನಾ ದಳದ ಅನುಪ್ರಿಯ ಪಟೇಲ್ ಒಬ್ಬರು. ಬಿಹಾರದಿಂದ ಜೆಡಿಯುನ ಇಬ್ಬರನ್ನು ಮಂತ್ರಿ ಮಾಡಲಾಗಿದ್ದು ಜೆಡಿಯು ಮತ್ತೊಮ್ಮೆ ಕೇಂದ್ರ ಸಂಪುಟ ಸೇರಿದಂತಾಗಿದೆ.