ಮೋದಿಯವರ ಮಂತ್ರಿ ಮಂಡಲ 81ಕ್ಕೆ ಹಿಗ್ಗಿದೆ. ನಿನ್ನೆ ಪ್ರಮಾಣವಚನ ಸ್ವೀಕರಿಸಿದ 4 ಜನ ಸೇರಿ ಕರ್ನಾಟಕದ 6 ಜನ ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ರಾಜ್ಯ ಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಮತ್ತು ಹುಬ್ಬಳ್ಳಿ ಧಾರವಾಡ ಲೋಕಸಭಾ ಸದಸ್ಯ ಪ್ರಹ್ಲಾದ ಜೋಶಿ ಮಂತ್ರಿ ಸ್ಥಾನ ಉಳಿಸಿಕೊಂಡಿದ್ದಾರೆ. ನಿರ್ಮಲಾ ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆ ಆಗಿದ್ದರೂ ಮೂಲದಿಂದ ತಮಿಳುನಾಡಿನವರು.
ಹೊಸದಾಗಿ ಕೇಂದ್ರದಲ್ಲಿ ಸಚಿವರಾಗಿರುವ ರಾಜ್ಯ ಸಭಾ ಸದಸ್ಯ ಉದ್ಯಮಿ ರಾಜೀವ್ ಚಂದ್ರಶೇಖರ್ ಸಹ ರಾಜ್ಯದಿಂದ ರಾಜ್ಯ ಸಭೆಗೆ ಆಯ್ಕೆ ಆಗಿದ್ದರೂ ಕರ್ನಾಟಕದವರಲ್ಲ.
ಚಿತ್ರದುರ್ಗ ಮೀಸಲು ಕ್ಷೇತ್ರದಿಂದ ಗೆದ್ದಿರುವ ಎ. ನಾರಾಯಣಸ್ವಾಮಿ ಸಂಸದರಾದ ಮೊದಲ ಬಾರಿಗೆ ಮಂತ್ರಿಯೂ ಆಗಿದ್ದಾರೆ. ಇವರು ಮೂಲದಲ್ಲಿ ಬೆಂಗಳೂರು ನಗರ ಜಿಲ್ಲೆಯ ಆನೆಕಲ್‌ನವರು.
ಹೊಸದಾಗಿ ಸಚಿವರಾದ ಲೋಕಸಭಾ ಸದಸ್ಯರಲ್ಲಿ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕೂಡ ಅಲ್ಲಿಯವರಲ್ಲ. ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸುಳ್ಯ ಕಡೆಯವರು.
ಭಗವಂತ ಖೂಬ್ ಬೀದರ್ ಜಿಲ್ಲೆಯವರೇ ಆಗಿದ್ದಾರೆ.