ಮಂಗಳೂರು: ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ಹಿರ್ಗಾನ್ ಅವರನ್ನು ಕಾರ್ಕಳ ಪೋಲೀಸರು ಅಮಾನವೀಯವಾಗಿ ಥಳಿದಿರುವುದರ ವಿರುದ್ಧ ಮಂಗಳೂರು ಎಸ್‌ಪಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆ ಯುವ ಕಾಂಗ್ರೆಸ್‌ನವರು ಪ್ರತಿಭಟನೆ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಮಾತನಾಡಿ ಬೆಂಗಳೂರಿನಲ್ಲಿದ್ದ ರಾಧಾಕೃಷ್ಣ ಹಿರ್ಗಾನರನ್ನು ಕಾರ್ಕಳ ಪೋಲೀಸು ಕಾನೂನು ಮೀರಿ ಊರಿಗೆ ಕರೆಸಿಕೊಂಡು ಹಲ್ಲೆ ನಡೆಸಿದ್ದಾರೆ. ಸದರಿ ಪೋಲೀಸರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ಮುಂದುವರಿಸುವುದಾಗಿ ಹೇಳಿದರು.
ಕಾಂಗ್ರೆಸ್ ನಾಯಕ ಐವಾನ್ ಡಿಸೋಜಾ ಅವರು ಮಾತನಾಡಿ ಜಾಲತಾಣದ ಪೋಸ್ಟ್ ಫಾರ್ವರ್ಡ್ ಮಾಡುವುದು ಅಪರಾಧ ಅಲ್ಲ ಎಂದು ಕೋರ್ಟು ಆಜ್ಞೆ ಇದ್ದರೂ ಕಾರ್ಕಳ ಪೋಲೀಸರು ತಿಳಿಗೇಡಿತನದಿಂದ ವರ್ತಿಸಿದ್ದಾರೆ. ಇದು ಖಂಡನೀಯ ಎಂದರು.
ನಾಯಕರು ಎಸ್‌ಪಿ ಅವರಿಗೆ ತತ್ಸಂಬಂಧ ಮನವಿ ಸಲ್ಲಿಸಿದರು. ಇಶಾನ್ ಕಂದಕ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಪೋಲೀಸರ ವಿರುದ್ಧ ಧಿಕ್ಕಾರ ಹಾಕಿದರು.