ಉಜಿರೆ: ದೇಶದ ಸಾರ್ವಜನಿಕ ಕ್ಷೇತ್ರದ 5ನೇ ಅತಿ ದೊಡ್ಡ ಬ್ಯಾಂಕ್ ಆಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಉಜಿರೆ ಶಾಖೆಯ ನವೀಕೃತ ಕಟ್ಟಡದ ಉದ್ಘಾಟನಾ ಸಮರಂಭ 14.06.2023 ರಂದು ನಡೆಯಿತು. ಗ್ರಾಹಕರಿಗೆ ಇನ್ನೂ ಉತ್ತಮ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಕಟ್ಟಡವನ್ನು ನವೀಕರಿಸಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಠೇವಣಿದಾರರಿಗಾಗಿ, ಹಿರಿಯ ನಾಗರಿಕರಿಗಾಗಿ ಅತ್ಯಾಕರ್ಷಕ ಬಡ್ಡಿ ದರ ನೀಡುತ್ತಿದೆ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದೆ. ಗ್ರಾಮೀಣ ಜನತೆಗೆ ಹಣಕಾಸಿನ ಸಾಕ್ಷರತೆ ಮತ್ತು ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯವು ಸದಾ ಬದ್ಧವಾಗಿರುತ್ತದೆ. ನಾರಿ ಶಕ್ತಿ ಸಾಲ ಯೋಜನೆಯ ಮುಖಾಂತರ ರೂ 1.5 ಕೋಟಿಗೂ ಹೆಚ್ಚಿನ ಸಾಲವನ್ನು ವಿವಿಧ ಸ್ತ್ರೀ ಶಕ್ತಿ ಸ್ವಸಹಾಯ ಸಂಘಕ್ಕೆ ವಿತರಿಸಲಾಗಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರು ಕ್ಷೇತ್ರ ಮಹಾ ಪ್ರಬಂಧಕರಾಗಿರುವ ರೇಣು ಕೆ ನಾಯರ್ ಇವರು ಇವರು ಬ್ಯಾಂಕಿನ ನವೀಕೃತ ಶಾಖೆಯನ್ನು ಉದ್ಘಾಟಿಸಿದರು. ಉಜಿರೆ ಜನಾರ್ಧನ ದೇವಸ್ಥಾನದ ಆನುವಂಶಿಕ ಟ್ರಸ್ಟೀ ಆಗಿರುವ ಶರತ್ ಕೃಷ್ಣ ಪದ್ವೆಟ್ನಾಯ ಸಮಾರಂಭದ ಮುಖ್ಯ ಅತಿಥಿ ಆಗಿದ್ದರು. ಲಕ್ಷ್ಮಿ ಇಂಡಸ್ಟ್ರೀಸ್ ಉಜಿರೆಯ ಮಾಲೀಕರಾಗಿರುವ ಕೆ ಮೋಹನ್ ಕುಮಾರ್, ಉಜಿರೆ SDM ಕಾಲೇಜಿನ ಪ್ರಾಂಶುಪಾಲರಾಗಿರುವ ಕುಮಾರ ಹೆಗ್ಡೆ ಹಾಗೂ ಉಜಿರೆ ಗ್ರಾಮ ಪಂಚಾಯತಿನ ಪಿಡಿಒ ಆಗಿರುವ ಪ್ರಕಾಶ್ ಶೆಟ್ಟಿ ಸಮಾರಂಭದ ಗೌರವಾನ್ವಿತ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು..
ಈ ಸಂಧರ್ಭದಲ್ಲಿ ಮಾತನಾಡುತ್ತಾ ಮುಖ್ಯ ಅತಿಥಿಗಳಾದ ಶರತ್ ಕೃಷ್ಣ ಪದ್ವೆಟ್ನಾಯ ಇವರು ವೇಗವಾಗಿ ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ಉಜಿರೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲ ರೀತಿಯ ಆರ್ಥಿಕ ಸಹಾಯ ಮಾಡಲಿ ಎಂದು ಹಾರೈಸಿದರು. ಬ್ಯಾಂಕಿನಿಂದ ಆರ್ಥಿಕ ಸಹಾಯ ಪಡೆದುಕೊಂಡು ಉದ್ಯಮಿಯಾಗಿ ಬೆಳೆದಿರುವ ಲಕ್ಷ್ಮಿ ಇಂಡಸ್ಟ್ರೀಸ್ ಉಜಿರೆಯ ಮಾಲೀಕರಾಗಿರುವ ಕೆ ಮೋಹನ್ ಕುಮಾರ್ ಇವರು ಬ್ಯಾಂಕಿಗೆ ಕೃತಜ್ನತೆ ಸಲ್ಲಿಸುತ್ತಾ ಬ್ಯಾಂಕ್ ಹೀಗೆಯೇ ಉಜಿರೆಯ ಜನತೆಗೆ ಬ್ಯಾಂಕಿಂಗ್ ಸೇವೆ ನೀಡಲಿ ಎಂದರು. ಉಜಿರೆ SDM ಕಾಲೇಜಿನ ಪ್ರಾಂಶುಪಾಲರಾಗಿರುವ ಕುಮಾರ ಹೆಗ್ಡೆ ಉಜಿರೆಯ ಜನತೆಯ ನಾಡಿ ಮಿಡಿತ ಅರ್ಥಮಾಡಿಕೊಂಡು ಉದ್ಯಮಗಳನ್ನು ಬೆಳೆಸುವಂತಹ ಕೆಲಸ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಾಡಲಿ ಎಂದು ಹೇಳಿದರು. ಗ್ರಾಮೀಣ ಭಾಗದ ಜನತೆಗೆ ಉತ್ತಮವಾದಂತಹ ಸೇವೆಗಳನ್ನು, ಬೇಕಾದಂತಹ ಸೌಲಭ್ಯಗಳನ್ನು ನೀಡುವ ಮೂಲಕ ಬ್ಯಾಂಕ್ ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದು ಪ್ರಕಾಶ್ ಶೆಟ್ಟಿ ಹೇಳಿದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರು ಕ್ಷೇತ್ರ ಮಹಾ ಪ್ರಬಂಧಕರಾಗಿರುವ ರೇಣು ಕೆ ನಾಯರ್ ಅವರು ಈ ಸಂದರ್ಭದಲ್ಲಿ ಮಾತನಾಡುತ್ತ ಬ್ಯಾಂಕ್ಗಳು ವಿಲೀನಗೊಂಡ ನಂತರ ಜನರಿಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸುತ್ತಿದೆ ಹಾಗೂ ಇದರ ಲಾಭ ಜನಸಾಮಾನ್ಯರಿಗೆ ದೊರಕುತ್ತಿದೆ ಎಂದು ಹೇಳಿದರು. ಬ್ಯಾಂಕ್ ತನ್ನ ಠೇವಣಿದಾರರಿಗಾಗಿ, ಹಿರಿಯ ನಾಗರಿಕರಿಗಾಗಿ ಅತ್ಯಾಕರ್ಷಕ ಬಡ್ಡಿ ದರ ನೀಡುತ್ತಿದೆ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದೆ ಎಂದೂ ಹೇಳಿದರು.
ಉಜಿರೆಯ ಜನತೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಈ ಶಾಖೆಯು ಸ್ಥಳೀಯರ ಬ್ಯಾಂಕಿಂಗ್ ಅಗತ್ಯಗಳನ್ನು ಪೂರೈಸಲಿದೆ ಎಂದು ಪ್ರಾದೇಶಿಕ ಮುಖ್ಯಸ್ಥರಾಗಿರುವ ಮಹೇಶ ಜೆಹೇಳಿದರು. ರಾಷ್ಟ್ರಿಕೃತ ಬ್ಯಾಂಕ್ ಗಳು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಹಾಗೂ ಸಾಮಾನ್ಯ ನಾಗರಿಕರಿಗಾಗಿ ಮಹಾನ್ ಸೇವೆಯನ್ನು ಮಾಡುತ್ತಿದೆ. ಸರ್ವರೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸೇವೆಯ ಲಾಭವನ್ನು ಪಡೆಯಬೇಕಾಗಿ ಅವರು ವಿನಂತಿಸಿದರು. ನಾರಿಯರಿಗಾಗಿ ಬ್ಯಾಂಕಿನ ಅತ್ಯುತ್ತಮ ಯೋಜನೆಯಾದ ನಾರಿ ಶಕ್ತಿ ಸಾಲದ ಬಗ್ಗೆ ಮಾತನಾಡುತ್ತಾ ಅವರು ಈ ಸಾಲದ ಬಡ್ಡಿ ದರ ಇತರ ಸಾಲಗಳಿಗಿಂತ 1.25% ಕಡಿಮೆ ಇದೆ ಮತ್ತು ಮಾರ್ಜಿನ್ ಕೇವಲ 5% ಮಾತ್ರ. 10.5% ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ ದೊರಕುತ್ತದೆ ಎಂದೂ ಹೇಳಿದರು.
ಈ ಶಾಖೆಯು ಬೀದಿ ವ್ಯಾಪಾರಿಗಳಿಗಾಗಿ ಪಿಎಮ್ ಸ್ವಾನಿಧಿ , ರೈತರಿಗಾಗಿ ಕೃಷಿ ಸಾಲ, ಮಹಿಳೆಯರಿಗಾಗಿ ಯೂನಿಯನ್ ನಾರಿ ಶಕ್ತಿ , ಗೋಲ್ಡ್ ಲೋನ್ -ಚಿನ್ನದ ಮೇಲೆ ತ್ವರಿತ ಸಾಲ , ಮುದ್ರಾ ಲೋನ್, ಗ್ರಹ ಸಾಲ, ವಾಹನ ಸಾಲ, ಶಿಕ್ಷಣ ಸಾಲ, ಎಮ್‌ಎಸ್‌ಎಮ್‌ಈ ಲೋನ್ ಇತ್ಯಾದಿಗಳನ್ನು ನೀಡುತ್ತದೆ. ಗ್ರಾಹಕರ ಅಗತ್ಯಗಳಿಗನುಸಾರವಾಗಿ ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆಗಳನ್ನು ತೆರೆಯುತ್ತದೆ. ಅತ್ಯಂತ ಹಿರಿಯ ನಾಗರಿಕರಿಗಾಗಿ ಫಿಕ್ಸೆಡ್ ಡೆಪಾಸಿಟ್ಗಳ ಮೇಲೆ 800 ದಿನಗಳಿಗೆ 7.50% ಅತ್ಯಾಕರ್ಷಕ ಬಡ್ಡಿ ದರವನ್ನು ಬ್ಯಾಂಕ್ ನೀಡುತ್ತಿದೆ. ಸರಕಾರಿ ಪ್ರಾಯೋಜಿತ ಯೋಜನೆಗಳಾದ ಅಟಲ್ ಪಿಂಚಣಿ ಯೋಜನಾ, PMSBY,PMJJBY ಹಾಗೂ ಸಣ್ಣ ಉಳಿತಾಯ ಯೋಜನೆಗಳಾದ ಪಬ್ಲಿಕ್ ಪ್ರೋವಿಡೆಂಟ್ ಫಂಡ್ , ಸುಕನ್ಯ ಸಮೃದ್ದಿ, ಕಿಸಾನ್ ವಿಕಾಸ್ ಪತ್ರ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಇತ್ಯಾದಿಗಳನ್ನು ಈ ಶಾಖೆಯಿಂದ ಪಡೆಯಬಹುದಾಗಿದೆ.
ಯೂನಿಯನ್ ಬ್ಯಾಂಕ್ ಅನಿವಾಸಿ ಭಾರತೀಯರಿಗಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೇ ಅತ್ಯುತ್ತಮ ಪ್ರೋಡಕ್ಟ್ಸ್ ಗಳನ್ನು ನೀಡುತ್ತಿದೆ. ಹತ್ತು ಹಲವಾರು ರೀತಿಯ ಬ್ಯಾಂಕಿಂಗ್ ಸೌಲಭ್ಯಗಳನ್ನು ಒಂದೇ ಕಡೆಯಲ್ಲಿ ಪೂರೈಸಿಕೊಳ್ಳಲು ಈ ಶಾಖೆ ಅನುವು ಮಾಡುತ್ತದೆ.
ನವೀಕೃತ ಶಾಖೆಯ ವಿಳಾಸ :
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ,
ಉಜಿರೆ ಶಾಖೆ,
ಮಾವಂತೂರ್ ರೆಸಿಡೆನ್ಸಿ
ಮುಖ್ಯ ರಸ್ತೆ, ಉಜಿರೆ – 574240
ಬೆಳ್ತಂಗಡಿ ತಾಲೂಕು