ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ ಪುರಸಭೆಯ ಬಸ್ಸು ನಿಲ್ದಾಣದ ಪ್ರವೇಶ ದ್ವಾರದ ಬಳಿಯ ಒಡೆದ ಪೈಪ್ ಲೈನ್ 3ನೇ ಬಾರಿಯ ವರದಿಯ ತರುವಾಯ 3ನೇ ದಿನವಾದ  ಇಂದು ಸರಿಪಡಿಸುವ ಕಾರ್ಯ ನಡೆಯುತ್ತಿದೆ. 

ಆದರೆ ಬಸ್ ನಿಲ್ದಾಣದ ಹೊರ ಹೋಗುವ ರಸ್ತೆ ತೂಗುಯ್ಯಾಲೆಯಂತೆ ಹಾಗೆಯೇ ಇದ್ದು ಬಸ್ ಚಾಲಕರು ಬಹಳ ಸಂತೋಷದಿಂದ ಜೋಕಾಲಿಯಲ್ಲಿ ತೂಗಾಡಿಸುತ್ತಾ ಪ್ರಯಾಣಿಕರಿಗೆ ಪುಕ್ಕಟೆ ಮನರಂಜನೆ ನೀಡುತ್ತಿದ್ದಾರೆ. 

ಕಳೆದ ಎರಡು ಮಾಸಿಕ ಸಭೆಗೆ ಮೊದಲು ಬಸ್ ನಿಲ್ದಾಣದ ವಾಹನ ವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಲು ವರದಿ ಮಾಡಿದೆ. ಪೊಲೀಸರು ಕೂಡ ಪುರಸಭೆಯವರು ಸ್ಥಳ ಗುರುತಿಸಿ ತಿಳಿಸಿದ್ದರೂ. ಪುರಸಭಾ ಅಧಿಕಾರಿಗಳಿಗೆ ಮೂರು ತಿಂಗಳಿಂದ ಸಮಯವೇ ಇಲ್ಲ. ಕೇಳಬೇಕಾದ ಶಾಸಕರು ಉದ್ಘಾಟನೆಯಲ್ಲೇ ನಿರತರಾಗಿದ್ದಾರೆ.

ವ್ಯವಸ್ಥೆ ಸರಿಪಡಿಸಲು ಯಾರಿಗೂ ಆಸಕ್ತಿ ಇಲ್ಲ.

ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ಕೌನ್ಸಿಲರ್ ಗಳ ಬೇಜವಾಬ್ದಾರಿ, ಅಧ್ಯಕ್ಷ, ಉಪಾಧ್ಯಕ್ಷರ ಕಣ್ಣು ಮುಚ್ಚಿ ಕಾರ್ಯಕ್ಕೆ ಸ್ಪಷ್ಟ ಉದಾಹರಣೆಗೆ ಮೂಡುಬಿದಿರೆ ಪುರಸಭೆಗೆ ಬನ್ನಿ