ಮೂಡುಬಿದಿರೆ: ವಿದೇಶಗಳಲ್ಲಿ ಕೆಲಸ ಪಡೆದುಕೊಳ್ಳಲು ಅಂತರಾಷ್ಟ್ರೀಯ ವ್ಯವಹಾರದ ಜೊತೆ ಇಂಗ್ಲಿಷ್ ಹಾಗೂ ಡಿಜಿಟಲ್ ಜ್ಞಾನ ಅವಶ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ನುಡಿದರು.
ಆಳ್ವಾಸ್ (ಸ್ವಾಯತ್ತ) ಕಾಲೇಜಿನ ನಿರ್ವಹಣಾ ವಿಭಾಗವು ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ ‘ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಅಗತ್ಯವಾದ ವ್ಯವಹಾರ ಕೌಶಲ್ಯಗಳು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆಳ್ವಾಸ್ ಪ್ರಗತಿ’ಯು ಉದ್ಯೋಗ ಅವಕಾಶವನ್ನು ಕಲ್ಪಿಸುವಲ್ಲಿ ಪ್ರಮುಖ ವೇದಿಕೆಯಾಗಿ ರೂಪುಗೊಂಡಿದೆ ಎಂದರು.
ಇನ್‍ಲ್ಯಾಂಡ್ ಗ್ರೂಪ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮೆರಾಜ್ ಯೂಸುಫ್, ಕಾಲೇಜಿನ ಆಡಳಿತ ನಿರ್ವಹಣಾ ವಿಭಾಗದ ಮುಖ್ಯಸ್ಥೆ ಸುರೇಖಾ ರಾವ್, ಪ್ರಾಧ್ಯಾಪಕ ಸಂಯೋಜಕರಾದ ಸೋನಿ ವಿದ್ಯಾರ್ಥಿ ಸಂಯೋಜಕರಾದ ಹಾರ್ದಿಕ್ ಶೆಟ್ಟಿ ಮತ್ತು ಮೋಕ್ಷಿತ್ ಇದ್ದರು. ವಿದ್ಯಾರ್ಥಿನಿ ನಿರೀಕ್ಷಣ ನಿರೂಪಿಸಿ, ಆದರ್ಶ ವಂದಿಸಿದರು.