ಅರುಣಾಚಲ ಪ್ರದೇಶದ ತವಾಂಗ್ ವಲಯದ ಯಾಂಗ್‌ಟ್ಸೆಯಲ್ಲಿ ಚೀನೀ ಸೈನಿಕರು ಎಲ್‌ಎಸಿ- ವಾಸ್ತವ ಗಡಿ ಗೆರೆ ದಾಟಿ ಬಂದುದರಿಂದ ಎರಡೂ ಕಡೆಯ ಸೈನಿಕರು ಗಾಯಗೊಂಡರು ಎಂದು ಭಾರತೀಯ ಸೇನೆ ತಿಳಿಸಿದೆ.

Image courtesy 

ಎಷ್ಟು ಜನ ಗಾಯಗೊಂಡರು ಎಂಬ ಮಾಹಿತಿ ಇಲ್ಲದಿದ್ದರೂ ಚೀನಾದ ಸೈನಿಕರಲ್ಲಿ ಹೆಚ್ಚು ಜನ ಗಾಯಗೊಂಡರು ಎಂದು ಹೇಳಲಾಗಿದೆ. ಲಡಾಖ್‌ನ ಗಾಲ್ವನ್ ಕಣಿವೆ ಮತ್ತು ಪ್ಯಾಂಗಾಂಗ್ ಘರ್ಷಣೆಗಳು ತಣ್ಣಗಾಗುವ ಹೊತ್ತಿಗೆ ಈ ಘರ್ಷಣೆಯು ಡಿಸೆಂಬರ್ 9ರಂದು ನಡೆದಿದೆ. ಕಳೆದೊಂದು ದಶಕದಿಂದ ಚೀನಾ ಗಡಿ ದಾಟಿ ಜಾಗದ ತಕರಾರು ತೆಗೆಯುವುದು ಹೆಚ್ಚಾಗಿದೆ.