ಬಂಟ್ವಾಳ:  ಪ್ರೀತಿ, ಸೇವೆಯಲಿ ಜೊತೆಗೂಡಿ, ಕ್ರಿಸ್ತ ವಿಶ್ವಾಸಿ ಸಾಕ್ಷಿಗಳಾಗೋಣ" "ಎಂಬ ಧ್ಯೇಯವಾಕ್ಯದೊಂದಿಗೆ ಪ್ರಧಾನ ಧರ್ಮಗುರುಗಳಾದ  ಧರ್ಮ ಪ್ರಾಂತ್ಯದ ಪ್ರಧಾನ ಧರ್ಮಗುರುಗಳಾದ ಮೂನ್ಸಿಂಜೊರ್ ವಂ ಮಾಕ್ಸಿಂ ನೊರೊನ್ಹಾರವರು ಪ್ರವಚನ ನೀಡಿ ನೂರಾರು ಭಕ್ತಾದಿಗಳು ಹಾಗೂ ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಧರ್ಮಕ್ಷೇತ್ರದ ಧರ್ಮಗುರುಗಳೊಂದಿಗೆ ಪವಿತ್ರ ಬಲಿ ಪೂಜೆಯನ್ನು ಭಕ್ತಿಪೂರ್ವಕವಾಗಿ ಅರ್ಪಿಸಲಾಯಿತು. ಡಿಸೆಂಬರ್ 8 ರಿಂದ  ಮೂರು ದಿನಗಳ  ಮಾತೆ ಮರಿಯಮ್ಮನವರ ಚರಣಕ್ಕೆ ನೊವೆನಾ ಪ್ರಾರ್ಥನೆಯನ್ನು, ಬಲಿಪೂಜೆಯನ್ನು ಅರ್ಪಿಸಲಾಯಿತು. 

ಚರ್ಚ್ ಧರ್ಮಗುರುಗಳಾದ ವಂದನೀಯ ಪ್ರಾನ್ಸಿಸ್ ಕ್ರಾಸ್ತಾರವರು ಈ ಸಂಭ್ರಮವನ್ನು ಸಡಗರದಿಂದ ಆಚರಿಸಲು ಸಹಕರಿಸಿದ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು . ಈ ಸಂದರ್ಭದಲ್ಲಿ ಹಬ್ಬವನ್ನು ಆಚರಿಸಲು ಸಹಕರಿಸಿದವರಿಗೆ ಗೌರವಪೂರ್ವಕವಾಗಿ ಮೇಣದ ಬತ್ತಿಯನ್ನು ನೀಡಿ ಸನ್ಮಾನಿಸಲಾಯಿತು . ಲೊರೆಟ್ಟೊ  ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಜೆಸನ್ ಮೋನಿಸ್ , ಬಂಟ್ವಾಳ ವಲಯದ ವಿವಿಧ ಚರ್ಚ್ ಗಳ ಧರ್ಮಗುರುಗಳು ಉಪಸ್ಥಿತರಿದ್ದರು.  ಚರ್ಚ್ ಪಾಲನಾ ಮಂಡಳಿ  ಸಂಭ್ರಮದ ಮೇಲುಸ್ತುವಾರಿಯನ್ನು ವಯಿಸಿತ್ತು.