ತವಾಂಗ್ ಬಳಿ ಭಾರತ - ಚೀನೀ ಸೈನಿಕರ ಘರ್ಷಣೆಯಲ್ಲಿ ನಮ್ಮ ಯಾರಿಗೂ ಗಂಭೀರ ಗಾಯವಾಗಿಲ್ಲ. ವಿಷಯವನ್ನು ರಾಜತಾಂತ್ರಿಕ ಮಟ್ಟಕ್ಕೆ ಒಯ್ದು ಚರ್ಚಿಸಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿಕೆ ನೀಡಿದರು.

Image courtesy
ಕಾಂಗ್ರೆಸ್, ಎಎಪಿ, ಆರ್‌ಜೆಡಿ ಸಂಸದರು ಮುಂದೂಡುವ ನೋಟೀಸು ನೀಡಿ ಚರ್ಚೆಗೆ ಅವಕಾಶ ಕೋರಿದರು. ಆದರೆ ಚರ್ಚೆಗೆ ಸಮಯ ನೀಡಲಿಲ್ಲ. ರಾಜ್ಯ ಸಭೆಯಲ್ಲಿ ರಾಜನಾಥ ಸಿಂಗ್ ಅದೇ ಹೇಳಿಕೆ ನೀಡಿದರು. ಪ್ರತಿಪಕ್ಷದವರು ಚರ್ಚೆಗೆ ಒತ್ತಾಯಿಸಿದರು. ಆದರೆ ಚರ್ಚೆ ಇಲ್ಲ ಎಂದು ಸಭಾಪತಿ ಹೇಳಿದ್ದರಿಂದ ವಿರೋಧ ಪಕ್ಷಗಳವರು ಪ್ರತಿಭಟಿಸಿ ಬಹಿಷ್ಕಾರ ಹಾಕಿ ಹೊರ ನಡೆದರು.