ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಮೂಡುಬಿದಿರೆ ಘಟಕದ ಸಭೆ ನಡೆಯಿತು. ಈ 7 ನೇ ವರ್ಷದ ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರಿಗೆ ಪುತ್ತೂರು ಅಂಚೆವಿಭಾಗದ ವತಿಯಿಂದ ಸೇವಾ ಸೌಲಭ್ಯಗಳ ಮಾಹಿತಿ ನೀಡಲಾಯಿತು. ಹಿರಿಯ ಮಾರುಕಟ್ಟೆ ವ್ಯವಸ್ಥಾಪಕ ಗುರು ಪ್ರಸಾದ್ ಅವರು ಅಂಚೆ ಉಳಿತಾಯ, ಜೀವವಿಮೆ, ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆ, ಅಪಘಾತ, ಆರೋಗ್ಯ ವಿಮೆ ಇತ್ಯಾದಿ ಸೌಲಭ್ಯಗಳ ಮಾಹಿತಿ ಒದಗಿಸಿದರು.
ಅಧ್ಯಕ್ಷ ಶಿವಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ದಿವಾಕರ್ ವಂದಿಸಿದರು.