ಬೈಕಿನಲ್ಲಿ ಬಂದು ಕಡಬದ ಮರ್ದಾಳ ಮಸೀದಿಯಲ್ಲಿ ಜೈ ಶ್ರೀರಾಂ ಕೂಗಿ ಪರಾರಿಯಾದ ಇಬ್ಬರನ್ನು ಕಡಬ ಪೋಲೀಸರು ಸಿಸಿ ಟೀವಿ ದೃಶ್ಯದ ಮೇಲೆ ಬಂಧಿಸಿದ್ದಾರೆ.

ಬಿಳಿನೆಲೆ ಸೂಡ್ಲುವಿನ ಕೀರ್ತನ್, ಕಯ್ಕಂಬ ನೆಡ್ತೋಟದ ಸಚಿನ್ ಬಂಧಿತರು. ಮಸೀದಿ ನುಗ್ಗಿ ಕೂಗು ಹಾಕಿದಾಗ ಮಸೀದಿ ಮಂದಿ ಬಂದುದು ನೋಡಿ ಇಬ್ಬರೂ ಬೈಕಿನಲ್ಲಿ ಪರಾರಿ ಆಗಿದ್ದರು.