ಚೀನಾ ಜನ ಪ್ರಜಾಪ್ರಭುತ್ವದ ಹಾಂಗ್‌ಜೌನಲ್ಲಿ ನಡೆಯುತ್ತಿರುವ ಏಶಿಯನ್ ಕ್ರೀಡಾಕೂಟದಲ್ಲಿ ಚೀನಾ ತನ್ನ ಎಂದಿನ ಪದಕ ಬಾಚುವಿಕೆ ಮುಂದುವರಿಸಿದೆ. ಭಾರತವು ಎರಡು ತಂಡ ಚಿನ್ನಗಳನ್ನು ಗಳಿಸಿತು.

ಭಾರತದ ಮೊದಲ ಚಿನ್ನದ ಪದಕ ಎರಡನೆಯ ದಿನ ಪುರುಷರ 10 ಮೀಟರ್ ಏರ್ ರೈಫಲ್‌ನಲ್ಲಿ ಬಂತು. ರುದ್ರಾಂಕಶ್ ಬಾಳಾಸಾಹೇಬ್ ಪಾಟೀಲ್, ಐಶ್ವರೀ ಪ್ರತಾಪ್ ಸಿಂಗ್ ತೋಮರ್, ದಿವ್ಯಾಂಶ್ ಸಿಂಗ್ ಪನ್ವರ್ ತಂಡ ಸ್ವರ್ಣ ಗೆದ್ದಿತು. ತಡರಾತ್ರಿ ಭಾರತದ ಮಹಿಳಾ ತಂಡವು ಟಿ20ಯಲ್ಲಿ ಶ್ರೀಲಂಕಾವನ್ನು ಸೋಲಿಸಿ ಚಿನ್ನ ಪಡೆಯಿತು.
ಸದ್ಯ ಭಾರತವು 2 ಚಿನ್ನ, 3 ಬೆಳ್ಳಿ, 6 ಕಂಚಿನ ಪದಕದೊಂದಿಗೆ 6ನೇ ಸ್ಥಾನ ಮುಟ್ಟಿದೆ. ಎರಡನೆಯ ದಿನದ ಕೊನೆಯಲ್ಲಿ ಕ್ರಮವಾಗಿ ಚಿನ್ನ ಬೆಳ್ಳಿ ಕಂಚು ಚೀನಾ 31- 13- 15 = 49, ತೆಂಕಣ ಕೊರಿಯಾ 6- 7- 8 = 21, ಜಪಾನ್ 3- 10- 8= 21 ಮೊದಲ ಮೂರು ಸ್ಥಾನಗಳಲ್ಲಿ ಇವೆ. ಉಜ್ಬೆಕಿಸ್ತಾನ್, ಹಾಂಗ್‌ಕಾಂಗ್ ನಾಲ್ಕು, ಐದನೆಯ ಸ್ಥಾನಗಳಲ್ಲಿ ಇವೆ.
12,000ಕ್ಕೂ ಹೆಚ್ಚು ಕ್ರೀಡಾಳುಗಳು ಇಲ್ಲಿ 481 ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಏಶಿಯಾದ ಒಲಿಂಪಿಕ್ಸ್ ದೇಶಗಳ ಸಂಖ್ಯೆ 45 ಈಗ ಇಲ್ಲಿವೆ.