ಜಪಾನಿನ ಪ್ರಧಾನಿ ಫುಮಿಯೋ ಕಿಶಿಡಾ ಅವರ ಆಳುವ ಮೈತ್ರಿ ಕೂಟವು ಬಹುಮತ ಸಾಧಿಸಿರುವುದರಿಂದ ಇತ್ತೀಚಿಗೆ ಪ್ರಧಾನಿಯಾದ ಅವರು ಪ್ರಧಾನಿಯಾಗಿ ಮುಂದುವರಿಯುವರು.
465 ಸ್ಥಾನಗಳ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಅವರ ಲಿಬರಲ್ ಡೆಮೋಕ್ರಾಟಿಕ್ ಪಕ್ಷವು 261 ಮತ್ತು ಮೈತ್ರಿ ಕೂಟದ್ದು ಸೇರಿ 293 ಕ್ಷೇತ್ರಗಳಲ್ಲಿ ಆಳುವ ಪಕ್ಷ ಜಯ ಸಾಧಿಸಿದೆ. ಅವಧಿ ಮುಗಿದ ಸಂಸತ್ತಿನಲ್ಲಿ ಈ ಮೈತ್ರಿ ಕೂಟವು 305 ಸ್ಥಾನಗಳನ್ನು ಹೊಂದಿತ್ತು.