ವರದಿ ರಾಯಿ ರಾಜಕುಮಾರ

ಜನರ ನಂಬಿಕೆಯಲ್ಲಿ, ದೇಶದ ಕಣಕಣದಲ್ಲಿ ಅನ್ನದಾನ, ವಿದ್ಯೆ, ಪವಿತ್ರತೆಗೆ ಹೆಸರುವಾಸಿಯಾದ ನೆಲೆಬೀಡು ಧರ್ಮಸ್ಥಳದ ವಿರುದ್ಧ ನಡೆಸುತ್ತಿರುವ ತಪ್ಪು ಪ್ರಚಾರಗಳನ್ನು, ಆಧಾರ ರಹಿತ ಆರೋಪಗಳನ್ನು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯು ಖಂಡ ತುಂಡವಾಗಿ ಖಂಡಿಸಿರುತ್ತದೆ. ಯಾರೇ ಆರೋಪ ಮಾಡುವುದಿದ್ದರೂ ಕೂಡ ಸೂಕ್ತವಾದ ಸಾಕ್ಷಿಗಳು ಇಲ್ಲದಿದ್ದಲ್ಲಿ ಅದನ್ನು ಅಲ್ಲಿಗೆ ಚಿವುಟಿ ಹಾಕಬೇಕಾದ ಮಹಾನ್ ಕರ್ತವ್ಯ ಪೊಲೀಸ್ ಇಲಾಖೆ, ನ್ಯಾಯಾಂಗ, ರಾಜ್ಯದ ಗೃಹ ಸಚಿವರು, ಹಾಗೂ ಕೇಂದ್ರದ ಗ್ರಹ ಸಚಿವರ ಖಾತೆಗಳಿಗೆ ಮುಖ್ಯವಾಗಿರುತ್ತದೆ. ಸುಳ್ಳಿನ ಕಂತೆಯನ್ನೇ ಎದುರು ಮಾಡುತ್ತಿರುವ ಸ್ವತಃ ಹಿಂದುಗಳೇ ಎಂದು ಕರೆಸಿಕೊಳ್ಳುವ ವ್ಯಕ್ತಿಗಳ ವಿರುದ್ಧವಾಗಿ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಡಿಸೆಂಬರ್ 31ರ ಒಳಗೆ ಸೂಕ್ತ ಆಧಾರಗಳನ್ನು ಸಾಕ್ಷಿಗಳನ್ನು ಸಲ್ಲಿಸದೆ ಇದ್ದಲ್ಲಿ ತೀವ್ರವಾದ ದೊಡ್ಡ ಮಟ್ಟದ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕೆ ಯೋಚಿಸುತ್ತಿದೆ ಎಂದು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋಂಸೆ ಜಯಕೃಷ್ಣ ಎ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. 

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಸಂಯೋಜಕ ಕೆಪಿ ಜಗದೀಶ್ ಅಧಿಕಾರಿ ಅವರು ಕಳೆದ 12 ವರ್ಷಗಳಿಂದ ಇಂತಹ ಸುಳ್ಳು ಅಪಪ್ರಚಾರಗಳು ಮೇಲಿಂದ ಮೇಲೆ ಧರ್ಮಸ್ಥಳ ಹಾಗೂ ಇತರ ಹಲವಾರು ದೇವಾಲಯದ ವಿರುದ್ಧ ಕೇಳಿ ಬರುತ್ತಿದೆ ಅಂತಹ ಎಲ್ಲ ಅಪಪ್ರಚಾರಗಳನ್ನು ಖಂಡಿಸುವುದರ ಒಟ್ಟಿಗೆ ಸರಕಾರವು ಕೂಡ ಸೂಕ್ತ ಸಾಕ್ಷಿಗಳನ್ನು ಒದಗಿಸದೆ ಇರುವ ಅಂತವರೆಲ್ಲರನ್ನು ಕೂಡ ತನಿಖೆಗೆ ಒಳಪಡಿಸಬೇಕು. ದೇವರ ಮೇಲಿನ ನಂಬಿಕೆ ಶಾಶ್ವತವಾಗಿ ಉಳಿಯುವಂತಹ ರೀತಿಯಲ್ಲಿ ಸರಕಾರ, ಸಚಿವರು, ಅಧಿಕಾರಿಗಳು ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಯಾವುದೇ ರೀತಿಯ ಊಹಾಪೋಹಗಳಿಗೆ, ದುರುದ್ದೇಶಪೂರ್ವಕವಾದ, ದಾಖಲೆ ರಹಿತವಾದ ವಿಚಾರಗಳನ್ನು ಯಾರೂ ಕೂಡ ಬೆಂಬಲಿಸಬಾರದು ಎಂದು ವಿನಂತಿಸಿದ್ದಾರೆ. 

ಸಮಿತಿಯು ಕಳೆದ 25 ವರ್ಷಗಳಿಂದ ನಿರಂತರವಾಗಿ ಸಮಾಜಕ್ಕೆ ಉಪಯೋಗವಾಗುವಂತಹ, ಜಿಲ್ಲೆಯ ಅಭಿವೃದ್ಧಿಗೆ ಕಾರಣಕರ್ತ ವಾಗುವಂತಹ ಹಲವಾರು ಯೋಜನೆಗಳನ್ನು ಮಾಡಿರುವುದನ್ನು ಈ ಸಂದರ್ಭದಲ್ಲಿ ಸ್ವತಹ ಸಂಸ್ಥಾಪಕರು ಹಾಗೂ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ಶೆಟ್ಟಿ, ನಾಗೇಶ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಅರುಣ ಪ್ರಕಾಶ್ ಶೆಟ್ಟಿ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ನೆನಪಿಸಿಕೊಂಡರು. ಎನ್‌ಜಿಒ ಸಂಸ್ಥೆಯಾಗಿಯೂ ಕೂಡ ಅಭಿವೃದ್ಧಿಯ ಕಾರ್ಯದಲ್ಲಿ ಸರಕಾರಕ್ಕೆ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಿದ್ದನ್ನು, ಕೊಂಕಣ ರೈಲ್ವೆ ಇತ್ಯಾದಿ ಎಲ್ಲಾ ಸಂದರ್ಭಗಳಲ್ಲಿಯೂ ಕೂಡ ಬೆಂಬಲಿಸಿದ್ದನ್ನು ದಾಖಲೆ ಸಮೇತ ಮುಂದಿನ ದಿನಗಳಲ್ಲಿ ಒದಗಿಸಿಕೊಡುವುದಾಗಿ ತಿಳಿಸಿರುತ್ತಾರೆ. 

ಒಟ್ಟಾರೆ ಜಿಲ್ಲೆಯ ಜನತೆಗೆ ನೀರು, ದಾರಿ, ಉತ್ತಮ ಪರಿಸರಕ್ಕಾಗಿ ನಾವು ಕಂಕಣಬದ್ಧವಾಗಿದ್ದೇವೆ ಎಂದು ಮತ್ತೆ ಮತ್ತೆ ಪತ್ರಕರ್ತರಲ್ಲಿ ನೆನಪಿಸಿಕೊಂಡರು.