ಮಂಗಳೂರು: “ದಿನನಿತ್ಯದ ಜೀವನದಲ್ಲಿ ಹೆಚ್ಚಿನ ಕೆಲಸಗಳಿಗೆ ಆನ್‌ಲೈನ್ ವ್ಯವಸ್ಥೆಗಳನ್ನು ಬಳಸಿಕೊಳ್ಳುತ್ತಿರುವುದರಿಂದ ಜನರು ಮೋಸ ಹೋಗುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ಆನ್‌ಲೈನ್ ಬಳಕೆಯ ಕುರಿತು ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯ ಎಂದು ‘Digital Safety! Think First, Click Later!’ ಎಂಬ ಸ್ಲೋಗನ್ ಹೊಂದಿದ ಬ್ಯಾನರ್‌ನ್ನು ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆಯೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ- ಕಾರ್ಯದರ್ಶಿಯೂ ಆಗಿರುವ ಜೈಬುನಿಸ್ಸಾ ಹೇಳಿದರು.”
ಅತಿಯಾದ ಆನ್ ಲೈನ್ ಬಳಕೆಯಿಂದ, ಹೆಚ್ಚಿನ ಮಕ್ಕಳು ನಾನಾ ರೀತಿಯ ಅಪಾಯಗಳಿಗೆ ಒಳಗಾಗುತ್ತಿದ್ದಾರೆ. ಇದರಿಂದ ಚಿಕ್ಕ ವಯಸ್ಸಿನಲ್ಲಿ ಹೆಚ್ಚಿನ ಮಕ್ಕಳು ಸುಸೈಡ್ ಮಾಡಿಕೊಳ್ಳುತ್ತಿದ್ದಾರೆ. ತಂತ್ರಜ್ಙಾನ ಹೇಗೆ ಅವಕಾಶಗಳನ್ನು ಹಿಗ್ಗಿಸಿದಿಯೋ ಹಾಗೇ ಅಷ್ಟೇ ಸವಾಲುಗಳನ್ನು ಸೃಷ್ಟಿಸಿವೆ. ದಿನದ ಬಹುತೇಕ ಸಮಯ ಮೊಬೈಲ್‌ನಲ್ಲೇ ಮುಳುಗುವುದರಿಂದ ಮಕ್ಕಳ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತವೆ. ನಿರಂತರವಾಗಿ ಮೊಬೈಲ್ ಬಳಕೆಯಿಂದ ಮಕ್ಕಳ ಆರೋಗ್ಯದ ಮೇಲೆ ವಿಪರೀತವಾದ ಪರಿಣಾಮ ಬೀರುತ್ತಿದೆ.
ಸಾಮಾಜಿಕ ಜಾಲತಾಣಗಳ ನಿರಂತರ ಬಳಕೆಯು ಮಕ್ಕಳಲ್ಲಿ ಮನಸ್ಸು, ಭಾವನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುವಮಾಡಬಹುದು. ಸೈಬರ್ ವಂಚಕರು ಮಕ್ಕಳ ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯ ಒಂದೆಡೆಯಾದರೆ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುವ ಸಂಗತಿಗಳು, ಸಿಗುವ ಮಾಹಿತಿಗಳು ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಪ್ರಭಾವ ಬೀರಬಹುದು ಎಂದು “ ಜಾಲತಾಣಗಳಿಂದಾಗುವ ಅಪಾಯಗಳನ್ನು ನಾವೆಲ್ಲರೂ ಅರಿಯೋಣ. ಮಹಿಳೆಯರು ಮತ್ತು ಸಂಕಷ್ಟಕ್ಕೆ ಒಳಗಾಗದಂತೆ ತಡೆಯೋಣ ಎಂದು ಡಾ. ತಿಪ್ಪೇಸ್ವಾಮಿ ಕೆ.ಟಿ ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ಇವರು ಹೇಳಿದರು.
ಈ ಒಂದು ತರಬೇತಿ ಕಾರ್ಯಕ್ರಮದ ಗುರಿ ಮತ್ತು ಉದ್ದೇಶಗಳನ್ನು ಸಿದ್ದಾರ್ಥ್ ಪಿ. ಡಿಜಿಟಲ್ ಸುರಕ್ಷತೆ ಸಂಶೋಧನೆ ಮತ್ತು ವಕಾಲತ್ತು ವಿಭಾಗದ ಮುಖ್ಯಸ್ಥರು, ರತಿ ಫೌಂಡೇಶನ್ ಇವರು ತಿಳಿಸಿದರು.
“ಮನೆಮನೆಗೆ ಪೊಲೀಸ್ ಇಲಾಖೆ ಸೈಬರ್ ಅಪರಾಧ ಅರಿವು ಮತ್ತು ಪೋಸ್ಟ್ ಬಳಕೆಯ ಪರಿಣಾಮಗಳ ಕುರಿತು ಅಭಿಯಾನ ನಡೆಸುತ್ತಿದೆ. ಆ ಮೂಲಕ ಪ್ರತಿಯೊಬ್ಬ ನಾಗರಿಕರನ್ನು ಜಾಗೃತಿಗೊಳಿಸೋಣ ಎಂದು ಗೀತಾ ಕುಲಕರ್ಣಿ ಸಹಾಯಕ ಕಾರ್ಮಿಕ ಆಯುಕ್ತರು, ಮಂಗಳೂರು ವಿಭಾಗ ಹೇಳಿದರು.”
ಈ ಕಾರ್ಯಕ್ರಮವನ್ನು ರತಿ ಫೌಂಡೇಶನ್, ಓ.ಆರ್.ಇ.ಎಸ್.ಪಿ, ಪಡಿ ಮಂಗಳೂರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ ದ.ಕ ಇವರ ಸಹಯೋಗದೊಂದಿಗೆ ದಿನಾಂಕ: 24-09-2025ರಂದು ಓಷಿಯನ್ ಪರ್ಲ್, ಮಂಗಳೂರು ಇಲ್ಲಿ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಜೈಬುನಿಸ್ಸಾ, ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದ.ಕ ಜಿಲ್ಲೆ, ಡಾ. ತಿಪ್ಪೇ ಸ್ವಾಮಿ ಕೆ.ಟಿ, ಸದಸ್ಯರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಡಾ. ಕೀರ್ತಿ ನಕ್ರೆ, ಸ್ಥಾಪಕರು ಮತ್ತು ಕಾರ್ಯನಿರ್ವಹಣಾ ನಿರ್ದೇಶಕರು, ಓ.ಆರ್.ಇ.ಎಸ್.ಪಿ, ಸಿದ್ಧಾರ್ಥ್ ಪಿ. ಡಿಜಿಟಲ್ ಸುರಕ್ಷತೆ ಸಂಶೋಧನೆ ಮತ್ತು ವಕಾಲತ್ತು ವಿಭಾಗದ ಮುಖ್ಯಸ್ಥರು, ರತಿ ಪೌಂಡೇಶನ್, ಗೀತಾ ಡಿ. ಕುಲಕರ್ಣಿ, ಸಹಾಯಕ ಪೊಲೀಸ್ ಆಯುಕ್ತರು ಸಿ.ಸಿ.ಆರ್.ಬಿ ಮಂಗಳೂರು, ನಾಜಿಯಾ ಸುಲ್ತಾನ್, ಸಹಾಯಕ ಕಾರ್ಮಿಕ ಆಯುಕ್ತರು, ಮಂಗಳೂರು ವಿಭಾಗ, ವಿಲ್ಮಾ, ಕಾರ್ಮಿಕ ಅಧಿಕಾರಿ, ಮಂಗಳೂರು, ಉಸ್ಮಾನ್, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ ಜಿಲ್ಲೆ, ಶ್ಯಾಮಲಾ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯ ಮಂಡಳಿಯ ಸದಸ್ಯರು, ಸಲ್ಮಾನ್ ಸಂಪನ್ಮೂಲ ವ್ಯಕ್ತಿ ರತಿ ಫೌಂಡೇಶನ್, ಪತ್ರಿಕಾ ಮಾಧ್ಯಮದವರು ದ.ಕ ಜಿಲ್ಲೆ, ಸಿಬ್ಬಂಧಿ ವರ್ಗದವರು ಪಡಿ ಸಂಸ್ಥೆ, ಶಾಲಾ ಶಿಕ್ಷಣ ಇಲಾಖೆಯ ಪ್ರತಿನಿಧಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮಕ್ಕಳ ರಕ್ಷಣಾ ಘಟಕ ಉಡುಪಿ ಮತ್ತು ದ.ಕ ಜಿಲ್ಲೆಯ ಪ್ರತಿನಿಧಿಗಳು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಡುಪಿ ಮತ್ತು ದ.ಕ ಜಿಲ್ಲೆಯ ಪ್ರತಿನಿಧಿಗಳು, ಮಕ್ಕಳ ಸಹಾಯವಾಣಿ – 1098ರ ಪ್ರತಿನಿಧಿಗಳು, ಕಾರ್ಮಿಕ ಇಲಾಖೆಯ ಪ್ರತಿನಿಧಿಗಳು, ಶಿಕ್ಷಣ ಸಂಪನ್ಮೂಲ ಕೇಂದ್ರದ ಪ್ರತಿನಿಧಿಗಳು ಭಾಗವಹಿಸಿದರು. ಕಾರ್ಯಕ್ರಮ ನಿರೂಪಣೆ ಡಾ. ಸ್ಮಿತಾ, ಡಾ. ಕೀರ್ತಿ ನಕ್ರೆ ಸ್ವಾಗತಿಸಿ, ರೆನ್ನಿ ಡಿಸೋಜ ವಂದಿಸಿದರು.