ಮಂಗಳೂರು:- ಜೋಕಿಮ್ ಫ್ರೆಡರಿಕ್ ಡಿ'ಸೋಜ (ಜೆ.ಎಫ್.ಡಿ'ಸೋಜ) ಇವರ ಜನನ ಮಂಗಳೂರು ಮಿಲಾಗ್ರಿಸ್‌ನ ಅತ್ತಾವರದಲ್ಲಿ. ಜೆ.ಎಫ್. ಡಿ'ಸೋಜ ಅತ್ತಾವರ ಇವರು ಚತುರ್ಭಾಷಾ ಲೇಖಕ (ಕೊಂಕಣಿ, ಕನ್ನಡ, ತುಳು, ಇಂಗ್ಲಿಷ್). 1961ರಿಂದ 2000 ವರೆಗೆ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೌಕರಿಯಲ್ಲಿದ್ದು 'ಸೂಪರಿಟೆಂಡೆಂಟ್” ಹುದ್ದೆ ತನಕ ಭಡ್ತಿ ಪಡೆದು 39 ವರ್ಷಗಳ ಸುದೀರ್ಘ ಸೇವೆಯಿಂದ ನಿವೃತ್ತಿ. ಇವರ ಬರವಣಿಗೆ 1960ರಲ್ಲಿ ಶುರು ಆಯ್ತು. 1960ರಲ್ಲಿ 'ಝಲೊ' ಕೊಂಕಣಿ ಮಾಸಿಕ ಪತ್ರಿಕೆಗೆ ಬರೆಯಲಾರಂಭಿಸಿದ ನಂತರ 'ಮಿತ್ರ', 'ವಿಶಾಲ್ ಕೊಂಕಣ್', 'ಕಣಸ್' ಪತ್ರಿಕೆಗಳಿಗೂ ಬರೆದರು.  ಜೆ.ಎಫ್. ಡಿ'ಸೋಜ ಅತ್ತಾವರ, ಜೆಫ್ರಿ ಎಂಬ ಕಾವ್ಯನಾಮಗಳಿಂದ ಅನೇಕ ಕಥೆ, ಕವನ, ಚುಟುಕು, ಲೇಖನಗಳನ್ನು ಬರೆದರು. ಈಗ ನಿವೃತ್ತರಾದ ನಂತರ ಎಲ್ಲಾ ಕೊಂಕಣಿ ಪತ್ರಿಕೆಗಳಿಗೆ ಮಕ್ಕಳ ಕಥೆ, ಸಕಾಲಿಕ ಲೇಖನಗಳನ್ನು ಬರೆಯುತ್ತಾ ಇದ್ದಾರೆ.

    ಇವರ ಮಕ್ಕಳ ಕಥೆಗಳ 10 ಪುಸ್ತಕಗಳು ಬಂಗಾರದ ಸರಣಿ ರೂಪದಲ್ಲಿ ಪ್ರಕಟವಾಗಿವೆ. (1) 'ಭಾಂಗಾರಾಚಿ ಮಾಸ್ತಿ' (ಬಂಗಾರದ ಮೀನು) (2) 'ಭಾಂಗಾರಾಚಿ ಕುರಾಡ್' (ಬಂಗಾರದ ಕೊಡಲಿ), (3) 'ಭಾಂಗಾರಾಚಿ ಚಿತ' (ಬಂಗಾರದ ಜಿಂಕೆ) (4) 'ಭಾಂಗಾರಾಚಿ ಇಮಾಜ್' (ಬಂಗಾರದ ಮೂರ್ತಿ), (5) 'ಭಾಂಗಾರಾಚಿ ಮೈರ್‌' (ಬಂಗಾರದ ನವಿಲು), (6) ಭಾಂಗಾರಾಚೆಂ ಮಾಜರ್' (ಬಂಗಾರದ ಬೆಕ್ಕು) (7) `ಭಾಂಗಾರಾಚೆಂ ಸುಕ್ಣೆo (ಬಂಗಾರದ ಹಕ್ಕಿ) (8) 'ಭಾಂಗಾರಾಚಿ ಕೀರ್' (ಬಂಗಾರದ ಗಿಳಿ) (9) 'ಭಾಂಗಾರಾಚಿ ಹಸ್” (ಬಂಗಾರದ ಬಾತುಕೋಳಿ) (10) ಭಾಂಗಾರಾಚೊ ಬುಡ್ಕುಲೊ (ಬಂಗಾರದ ಮಡಕೆ) (11) ರೊಬಿನ್‌ಹುಡ್ (12) ರೊಬಿನ್ಸನ್ ಕುಸೋ, ಇದಲ್ಲದೆ ದಿನನಿತ್ಯದ ಜೀವನಕ್ಕೆ ಅಗತ್ಯ ಸೂತ್ರಗಳ 'ವೆಳಾಕಾಳಾಚಿಂ ಸೂತ್ರಾಂ' ಹಾಸೊಚ್ ಹಾಸೊ ಹಾಸ್ಯ ಪುಸ್ತಕ ಸಹ ಪ್ರಕಟಗೊಂಡಿದೆ.

ಈಗ ಇವರ 13ನೇ ಪಸ್ತಕ 'ರೊಬಿನ್ನುಡ್' ಸಾಹಸಮಯ ಮಿನಿ ಕಾದಂಬರಿ ಪುಸ್ತಕ ಪ್ರಕಟಗೊಂಡಿದೆ. ಮಕ್ಕಳ ಸಾಹಿತ್ಯದ ವಿಭಾಗದಲ್ಲಿ 2004ರಲ್ಲಿ ಪ್ರಕಟಗೊಂಡಿರುವ ಭಾಂಗಾರಾಚಿ ಮಾಸ್ಸಿ (ಬಂಗಾರದ ಮೀನು), ಕೊಂಕಣಿ ಮಕ್ಕಳ ಕಥೆಗಳ ಪ್ರಥಮ ಸಂಕಲನಕ್ಕೆ 'ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 2007ರಲ್ಲಿ ಇವರ ಸಾಧನೆ ಪರಿಗಣಿಸಿ 'ಕೊಂಕಣಿ ಫ್ರೆಂಡ್ಸ್' ಕೊಂಕಣಿ ಯುನೈಟೆಡ್ ಕಿಂಗ್‌ಡಮ್, ಲಂಡನ್ (ಕೊಂಕಣಿ ಫ್ರೆಂಡ್ಸ್ ಡೊಟ್ ಕಾಂ) ಸಂಸ್ಥೆಯು 'ಕೊಂಕಣಿ ಸ್ಟಾರ್' ಬಿರುದನ್ನು ನೀಡಿ ಸನ್ಮಾನಿಸಿದೆ.  2015 ಜುಲಾಯಿ ತಿಂಗಳಲ್ಲಿ ಶ್ರೀ ವಿಕ್ಟರ್ ರೊಡ್ರಿಗಸ್, ಆಂಜೆಲೊರ್ ಸ್ಮಾರಕ ಸಾಹಿತ್ಯ ಪ್ರಶಸ್ತಿ ಲಭಿಸಿದೆ. * ಮಂಗಳೂರು ಆಕಾಶವಾಣಿಯಲ್ಲಿ ಇವರ ಕಾರ್ಯಕ್ರಮ (ಕೊಂಕಣಿಯಲ್ಲಿ) ಪ್ರಸಾರವಾಗಿದೆ. * 2019ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ 2018 ಪ್ರಶಸ್ತಿ ಲಭಿಸಿದೆ. * ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಡೆಮಿ 2018 ಸಾಲಿನ ಗೌರವ ಪ್ರಶಸ್ತಿ ಸಾಹಿತ್ಯ ವಿಭಾಗಕ್ಕೆ ಲಭಿಸಿದೆ.

ಕೊಂಕ್ಲಿ ಕುಟಮ್ ಬಾಪ್ರೆನ್ 2019 ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ 6000ಕ್ಕಿಂತ ಮೇಲ್ಪಟ್ಟು ಸಂಪಾದಕರಿಗೆ ಪತ್ರ ವಿಭಾಗದಲ್ಲಿ ಹೆಚ್ಚಿನ ಎಲ್ಲಾ ಕನ್ನಡ ಹಾಗೂ ಇಂಗ್ಲಿಷ್ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 90ರಷ್ಟು ತುಳು ಕವಿತೆಗಳು ಸಿ.ಸಿ. ಇಂಡಿಯಾ 'ಐತಾರೊಡು ಐತಾರ ನಮ್ಮ ಕುಡ್ಲ ತುಳು ಚಾನೆಲ್‌ನಲ್ಲಿ ಪ್ರಸಾರಗೊಂಡಿವೆ.  ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ ಕನ್ನಡ/ತುಳು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.  ಮಿಲಾಗ್ರಿಸ್ ಚರ್ಚ್ನ 'ಮಿಲಾಗ್ಲೆಂ ಮಿಲನ್' ಪತ್ರಿಕೆಯ ಸಂಪಾದಕೀಯ ಮಂಡಳಿಯಲ್ಲಿದ್ದು 4 ವರ್ಷಗಳ ತನಕ  ಪತ್ರದ ಸಂಪಾದಕರಾಗಿ ಕೆಲಸ ನಿರ್ವಹಿಸಿ, 2 ವರ್ಷದಿಂದ ಗೌರವ ಸಂಪಾದಕರಾಗಿರುತ್ತಾರೆ.  ಕೊಂಕಣಿ ಲೇಖಕರ ಒಕ್ಕೂಟ (ರಿ.) ಇದರ ಖಜಾಂಚಿಯಾಗಿ ಎರಡು ಅವಧಿಗೆ (4 ವರ್ಷ) ದುಡಿದಿದ್ದಾರೆ. ಕೊಂಕಣಿ, ಕನ್ನಡ, ಇಂಗ್ಲಿಷ್ ಹಾಗೂ ತುಳು ಸಾಹಿತ್ಯದಲ್ಲಿ ಇವರು ತಮ್ಮ ಬರಹ ಕೆಲಸಗಳನ್ನು ಮುಂದುವರಿಸುತ್ತಾ ಇದ್ದಾರೆ.