ನನ್ನೆಲ್ಲಾ ಓದುಗರಿಗೆ ದಸರಾ ಹಬ್ಬದ ಹಾರ್ಧಿಕ ಶುಭಾಶಯಗಳು. ನೆಚ್ಚಿನ ಓದುಗರೇ ಇಂದು ನನ್ನ ಲೇಖನದ ವಿಷಯ ನಮ್ಮೊಳಗೇ ಅಡಗಿರುವ ರಾವಣನನ್ನು ಸಂಪೂರ್ಣವಾಗಿ ದಹನ ಮಾಡುವ ವಿಚಾರದ ಕುರಿತು.
ಓದುಗರೇ ವಿಜಯದಶಮಿಯ ಅಶ್ವಿನಿ ಮಾಸದ ಶುಕ್ಲ ಪಕ್ಷದ ಹತ್ತನೇ ತಿಥಿಯ ದಿನವನ್ನು ನಾವು ವಿಜಯದ ಪ್ರತೀಕವಾಗಿ ಆಚರಣೆಯನ್ನು ಮಾಡುತ್ತೇವೆ. ಆ ದಿನ ಶ್ರೀರಾಮ್ ರು ರಾವಣನ ಕೆಲ ಕೆಟ್ಟ ಗುಣಗಳ ಮೇಲೆ ವಿಜಯವನ್ನು ಸಾದಿಸಿದ ದಿನ. ಅಂದು ಶ್ರೀರಾಮ್ ರು ರಾವಣರ ಒಳಗಿದ್ದ ಕೆಟ್ಟತನದ ಮೇಲೆ ಅಧರ್ಮದ ಮೇಲೆ ಅಹಂ ನ ಮೇಲೆ ಅಹಂಕಾರದ ಮೇಲೆ ಪಾಪದ ಮೇಲೆ ಯುದ್ಧ ಮಾಡಿ ಅವರೊಳಗೆ ಮನೆ ಮಾಡಿದ್ದ ಎಲ್ಲಾ ಈ ಗುಣಗಳನ್ನು ಬುಡದ ಸಮೇತ ಕಿತ್ತು ಹಾಕಿ ಅವುಗಳನ್ನ ಸೋಲಿಸಿ ಅವುಗಳಿಂದ ಒಬ್ಬ ಅದ್ಬುತ ಬ್ರಾಹ್ಮಣನ ಕಲ್ಯಾಣ ಮಾಡಿದ್ದರು* ಈಗ ಪ್ರಸ್ತುತ ದಿನಗಳಲ್ಲಿ ದಸರಾ ಹಬ್ಬದ ವಿಜಯದಶಮಿಯಂದು ರಾವಣನ ಮೂರ್ತಿಯನ್ನು ತಂದು ನಾವುಗಳು ಸ್ವತ ನಮ್ಮನ್ನ ನಾವು ಭಗವಂತ ಶ್ರೀರಾಮ್ ರೆಂದು ಭಾವಿಸಿ ಆ ರಾವಣನ ಪ್ರತಿಮೆಯನ್ನು ಸುಟ್ಟು ಸಂತೋಷ ಪಡುತ್ತೇವೆ.. ಆದರೆ ನೀವುಗಳು ಒಂದು ದಿನವಾದ್ರೂ ಯೋಚನೆ ಮಾಡಿದ್ದೀರಾ ನಿಮ್ಮಲ್ಲಿ ಭಗವಂತ ಶ್ರೀರಾಮ್ ರ ಒಂದು ಗುಣಗಳಾದ್ರು ಇವೆಯಾ ಅಂತ? ಸಾಧ್ಯನೇ ಇಲ್ಲಾ ಭಗವಂತ ರಾಮನ ಗುಣಗಳು ದೂರ ನೀವು ಸುಡೋ ರಾವಣನ ಗುಣಗಳು ನಿಮ್ಮಲ್ಲಿ ಇಲ್ಲಾ. ನಿಜ ಓದುಗರೇ ನಮ್ಮಲ್ಲಿ ಯಾರೊಬ್ಬರಲ್ಲೂ ಶ್ರೀರಾಮರ ಹಾಗೇ ಸಾಸಿವೆಯಷ್ಟು ಒಳ್ಳೆತನ ಇಲ್ಲಾ...
ಪ್ರತಿವರ್ಷ ನಾವುಗಳು ರಾವಣನ ಪ್ರತಿಮೆ ಮೂರ್ತಿಯನ್ನು ತಂದು ಅದನ್ನ ಸುಟ್ಟು ದಸರಾ ಹಬ್ಬದ ಆಚರಣೆಯನ್ನು ಮಾಡುತ್ತೇವೆ. ಆದರೆ ನಿಜವಾಗಿಯೂ ಸುಡಬೇಕಾಗಿರೋದು ನಮ್ಮೊಳಗಿನ ರಾವಣನನ್ನು ನಮ್ಮೊಳಗಿನ ಕೆಟ್ಟ ಗುಣಗಳನ್ನು ಕೆಟ್ಟ ವಿಚಾರಗಳನ್ನು ಅಹಂಕಾರವನ್ನು ಅಹಂ ಅನ್ನು ಅಧರ್ಮವನ್ನು ಕಾಮ ಕ್ರೋಧ ಮದ ಮತ್ಸರವನ್ನು ನಾವುಗಳು ದಸರಾ ಹಬ್ಬದ ದಿನ ನಮ್ಮೊಳಗೇ ಅಡಗಿ ಮನೆ ಮಾಡಿ ಕೂತಿರುವ ಈ ರಾವಣ ಸ್ವರೂಪಿ ದುಷ್ಟಗುಣಗಳನ್ನು ಸುಟ್ಟು ಭಸ್ಮ ಮಾಡಬೇಕು. ಮಾಡಿ ನಮ್ಮನ್ನ ನಾವು ಶುದ್ಧ ಮಾಡಿಕೊಂಡು ಉತ್ತಮ ಜೀವನ ಮಾಡಬೇಕು. ಈ ಎಲ್ಲಾ ಗುಣಗಳು ಹೊರಗೆ ಬಂದಾಗ ಮಾತ್ರ ನಮ್ಮೊಳಗೇ ಭಗವಂತ ಶ್ರೀರಾಮ್ ರು ನೆಲೆಸುತ್ತಾರೆ...
ನಾಳೆಯ ದಿನ ಪಟ್ಟಾಭಿಷೇಕವಾಗಿ ರಾಜನಾಗಬೇಕಿದ್ದ ಭಗವಂತ ಶ್ರೀರಾಮ್ ರು ಅವರ ತಂದೆಯ ಒಂದೇ ಒಂದು ಮಾತಿಗೆ ಗೌರವ ಕೊಟ್ಟು ತನ್ನೆಲ್ಲ ರಾಜ್ಯಭಾರ ರಾಜ ಸಿಂಹಾಸನ ಬಿಟ್ಟು 14 ವರ್ಷ ತನ್ನ ಪತ್ನಿಯ ಜೊತೆಗೆ ವನವಾಸಕ್ಕೆ ಹೋದರು. ಇಂದು ಎಷ್ಟು ಜನ ನಿಮ್ಮ ತಂದೆ ತಾಯಿಯ ಮಾತಿಗೆ ಬೆಲೆ ಕೊಡುತ್ತೀರಾ ಪ್ರಾಮಾಣಿಕವಾಗಿ ಹೇಳಿ ನೋಡೋಣ..
ನನಗೆ ಒಂದು ಅರ್ಥವಾಗುತ್ತಿಲ್ಲ ನಾವುಗಳು ಪ್ರತಿವರ್ಷ ದಸರಾ ಹಬ್ಬದ ವಿಜಯದಶಮಿ ದಿನ ರಾವಣ ಮೂರ್ತಿ ದಹನ ಮಾಡುತ್ತ ರಾವಣನನ್ನು ಸಂಹಾರ ಮಾಡುತ್ತ ಬರುತ್ತಿದ್ದೇವೆ. ಹಾಗಿದ್ರೆ ಇಂದಿಗೂ ನಮ್ಮಗಳ ಮದ್ಯೆ ರಾವಣ ಜೀವಂತವಾಗಿ ಹೇಗಿದ್ದಾನೆ.? ರಾವಣನ ನಾಶ ಆಗಿದೆ ಅನ್ನೋದಾದ್ರೆ ಕೆಲ ದಿನಗಳ ಹಿಂದೆ ಮನೆ ಅಂಗಳದಲ್ಲಿ ಆಟ ಆಡ್ತಾ ಇರೋ ಏಳು ವರ್ಷದ ಹೆಣ್ಣು ಮಗುವನ್ನು ಅತ್ಯಾಚಾರ ಮಾಡಿ ನಿರ್ಧಯವಾಗಿ ಕೊಲೆ ಮಾಡಿ ಆ ಮಗುವಿನ ತಾಯಿಯ ಪ್ರೀತಿಯ ಮಗುವನ್ನು ಕಿತ್ತುಕೊಂಡ ಕ್ರೂರಿ ಯಾರು? ಪಶುವಿನ ಚಿಕಿತ್ಸೆ ಕೊಡಿ ಅಂತ ಒಂದು ಹೆಣ್ಣು ವೈದ್ಯರನ್ನು ಕರೆದು ಸಾಮೂಹಿಕವಾಗಿ ನರಭಕ್ಷರಂತೆ ಅತ್ಯಾಚಾರ ಮಾಡಿ ಸುಟ್ಟು ಕೊಲೆ ಮಾಡಿದ ಕ್ರೂರಿಗಳು ಯಾರು? ವರದಕ್ಷಿಣೆ ಕಿರುಕುಳ ಕೊಟ್ಟು ಹೆಣ್ಣುಮಕ್ಕಳ ಹತ್ಯೆ ಮಾಡುವವರು ಯಾರು? ಭಗವಂತನ ಕೃಪೆಯಿಂದ ಸರಕಾರಿ ಕೆಲಸ ಸಿಕ್ಕು ಅಲ್ಲಿ ಹೋಗಿ ಭ್ರಷ್ಟಾಚಾರರಾಗಿ ಅಮಾಯಕ ಅಸಹಾಯಕ ಜನರ ಭಾವನೆಗಳ ಜೊತೆಗೆ ಆಟ ಆಡುವವರು ಯಾರು? ಹೇಳಿ ಯಾರು ಇವರೆಲ್ಲ.
ಅಪಹರಣ ಮಾಡಿ ಮರ್ಯಾದೆಯ ಗೌರವದ ಪಾಲನೆ ಮಾಡಿದವನು ಪರಮ ಶಿವಭಕ್ತ ಬ್ರಾಹ್ಮಣ,ನಿಜವಾದ ರಾವಣರು ಈಗಿನ ಜನರು ನಾವುಗಳು ರಾವಣ ಸೀತಾಮಾತೆಯನ್ನು ಅಪಹರಣ ಮಾಡಿದ್ದರು ಸಹ ಅವರನ್ನ ಬಹಳ ಗೌರವ ಪೂರ್ವಕವಾಗಿ ನೋಡಿಕೊಳ್ಳುತ್ತಿದ್ದರು. ಒಂದು ಕ್ಷಣವು ಸಹ ಅವರನ್ನು ಕೆಟ್ಟ ದೃಷ್ಟಿಯಲ್ಲಿ ನೋಡಿಲ್ಲ. ಆದರೆ ನಾವುಗಳು ಇಂದು ಹೋದಲ್ಲಿ ಬಂದಲ್ಲಿ ಕಣ್ಣಿಗೆ ಕಾಣೋ ಹೆಣ್ಣುಮಕ್ಕಳನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತೇವೆ ಅವರ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತನಾಡುತ್ತೇವೆ. ಮನೆಯಲ್ಲಿ ಇರುವ ಹೆಣ್ಣುಮಕ್ಕಳ ಜೊತೆಗೆ ತುಂಬಾ ಕೆಟ್ಟದಾಗಿ ನಡೆದುಕೊಳ್ಳುತ್ತೇವೆ... ಹೀಗಿದ್ದಾಗ ನಾವುಗಳು ಹೇಗ ನಮ್ಮನ್ನ ನಾವು ಶ್ರೀರಾಮ್ ರ ಪರಿಪಾಲಕರು ಅಂತ ಹೇಳಿಕೊಳ್ಳುತ್ತೇವೆ..
ಬಹುಷಃ ವಿಜಯದಶಮಿ ದಿನ ರಾವಣನ ಪ್ರತಿಮೆ ಮೂರ್ತಿ ದಹನ ಮಾಡುವ ಸಮಯ ರಾವಣ ಅಂದುಕೊಳ್ಳುತ್ತಿರಬಹುದು. ಈ ಕಲಿಯುಗದ ಜನ ಗುಣಗಳಲ್ಲಿ ಆದರ್ಶಗಳಲ್ಲಿ ನನ್ನ ಸರಿಸಮಾನರು ಇಲ್ಲಾ ಅಂತಹದ್ರಲ್ಲಿ ಸ್ವತ ತಮ್ಮನ್ನ ತಾವು ಭಗವಂತ ಶ್ರೀರಾಮ್ ರು ಎಂದು ಭಾವಿಸಿ ನನ್ನ ದಹನ ಮಾಡುತ್ತಿದ್ದರೆ ಎಂದು.
ದಸರಾ ಹಬ್ಬ ಹತ್ತು ಪ್ರಕಾರದ ಪಾಪಗಳು ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಅಹಂಕಾರ ಆಲಸ್ಯ ಹಿಂಸೆ ಹಾಗೂ ಕಳ್ಳತನದ ಪರಿಣಾಮದ ಸದಪ್ರೇರಣೆ ಪ್ರಧಾನ ಮಾಡುತ್ತದ್ದೆ.
ಅಂದು ನಡೆದ ಯುದ್ಧದ ಫಲಿತಾಂಶ ಅಧರ್ಮದ ಮೇಲೆ ಧರ್ಮದ ವಿಜಯ ಅಸತ್ಯದ ಮೇಲೆ ಸತ್ಯದ ವಿಜಯ ಕೆಟ್ಟತನದ ಮೇಲೆ ಒಳ್ಳೆತನದ ವಿಜಯ ಪಾಪದ ಮೇಲೆ ಪುಣ್ಯದ ವಿಜಯ ಅತ್ಯಾಚಾರದ ಮೇಲೆ ಸದಾಚಾರದ ವಿಜಯ ಕ್ರೋಧದ ಮೇಲೆ ಕರುಣೆ ದಯೆಯ ವಿಜಯ ಕ್ಷಮೆಯ ವಿಜಯ ಅಜ್ಞಾನ ಮೇಲೆ ಜ್ಞಾನದ ವಿಜಯ ರಾವಣನ ಮೇಲೆ ಶ್ರೀರಾಮ್ ರ ವಿಜಯ
ಬನ್ನಿ ಇದೆ ವಿಜಯದಶಮಿಯಂದು ನಮ್ಮೊಳಗೇ ಅಡಗಿ ಕೂತು ನಮ್ಮಿಂದ ಅಧರ್ಮ ಕಾರ್ಯಗಳನ್ನು ಮಾಡಿಸುತ್ತಿರುವ ರಾವಣನ ದಹನ ಮಾಡಿ ಅಲ್ಲಿ ಶ್ರೀರಾಮ್ ರ ಆದರ್ಶಗಳನ್ನು ಅಳವಡಿಸಿಕೊಂಡು ರಾಮನಾಮ ಜಫೀಸುತ್ತ ಮಾದರಿ ಜೀವನ ನಡೆಸೋಣ...
ನವೀನ ಗೋಪಾಲಸಾ ಹಬೀಬ ಎಮ್ ಎ ಬಿ ಎಡ್