ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ 

ಅಶ್ವಯುಜ ಶುಕ್ಲ ಪಕ್ಷ ಪ್ರತಿಪದೆ ನವರಾತ್ರಿ ವೃತದ ಮೊದಲ ದಿನ ದುರ್ಗಾದೇವಿಯ ಮೊದಲ ರೂಪ ಶೈಲ ಪುತ್ರಿಯನ್ನು ಉಪಾಸನೆ ಮಾಡಲಾಗುತ್ತೆ. ಶೈಲಪುತ್ರಿ ಸರ್ವಶಕ್ತಿವಂತಳಾಗಿದ್ದು ಹಿಮಾಲಯ ಪರ್ವತದ ಹೊಟ್ಟೆಯಿಂದ ಜನ್ಮ ಪಡೆದಿದ್ದಾಳೆ ಎಂದು ತಿಳಿದು ಬರುತ್ತದೆ ಆದುದರಿಂದಲೇ ಈಕೆಯನ್ನು ಶೈಲ ಪುತ್ರಿ ಎಂದು ಕರೆಯಲಾಗುತ್ತದೆ. 

ಈಕೆಯ ಬಲಗೈಯಲ್ಲಿ ತ್ರಿಶೂಲ, ಎಡಗೈಯಲ್ಲಿ ಕಮಲವನ್ನು ಹಿಡಿದು, ಎತ್ತಿನ ಮೇಲೆ ಆರೂಢಳಾಗಿರುವಂತೆ ಈಕೆಯನ್ನು ಚಿತ್ರಿಸಲಾಗಿದೆ.

ನವರಾತ್ರಿ ದಿನಗಳಲ್ಲಿ ಕೆಲವರು ಒಪ್ಪತ್ತು ಊಟ ಮಾಡಿ ಶಕ್ತಿ ಉಪಾಸನೆಯನ್ನು ಮಾಡುತ್ತಾರೆ. ಕೆಲವರು ನಿಷ್ಕಾಮ ಭಾವದಿಂದ ದುರ್ಗಾ ಸಪ್ತಶಕ್ತಿ ಪಟ್ಟಣವನ್ನು ಮಾಡುತ್ತಾರೆ. ಇದನ್ನು ಬಹಳ ಸಂಯಮದಿಂದ ಮಾಡಬೇಕಾಗುತ್ತದೆ. ಅದಕ್ಕಾಗಿ ಯಮ ನಿಯಮಗಳನ್ನು ಪಾಲಿಸಿ ಭಗವತಿ ದುರ್ಗೆಯ ಆರಾಧನೆ, ಪಠಣವನ್ನು ಮಾಡಬೇಕು. ಸಾತ್ವಿಕ ಪೂಜೆ ಮಾಡಬೇಕು.