ಅಶ್ವಯುಜ ಶುಕ್ಲ ದ್ವಿತೀಯ, ನವರಾತ್ರಿಯ ಎರಡನೇ ದಿನ ದುರ್ಗೆಯ ಎರಡನೇ ರೂಪವೇ " ಬ್ರಹ್ಮಚಾರಿಣಿ". ಈಕೆ ನಾರದಮುನಿಯ ಅರಿಕೆಯಂತೆ ಘೋರ ತಪಸ್ಸನ್ನು ಮಾಡಿದಳು.

ಈಕೆಯು ಬಲಗೈಯಲ್ಲಿ ಜಪಮಾಲೆ, ಎಡಗೈಯಲ್ಲಿ ಕಮಂಡಲವನ್ನು ಹಿಡಿದುಕೊಂಡಿದ್ದಾಳೆ. ಈಕೆಯ ಉಪಾಸನೆಯಿಂದ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮದ ದೈವೀ ಗುಣಗಳು ವೃದ್ಧಿಸುತ್ತವೆ ಎಂದು ಹೇಳಲಾಗುತ್ತದೆ. 

ದುರ್ಗಾದೇವಿಯ ಒಂಬತ್ತು ಪ್ರಕಾರಗಳಿವೆ. 9 ದಿನವೂ ನಿರಂತರ ದೀಪ ಪ್ರಜ್ವಲನೆ ಮಾಡಲಾಗುತ್ತದೆ. ಈ ರೀತಿ ಮಾಡುವುದರಿಂದ, ಮತ್ತು ಫಲಾಹಾರ ಮಾತ್ರ ಸೇವಿಸಿ ಕ್ಷಮೆ, ದಯೆ, ಉದಾರತೆಯನ್ನು ಆಚರಿಸಿ ಭೂಮಿಯ ಮೇಲೆಯೇ ಮಲಗುವುದರಿಂದ ಇಷ್ಟಾರ್ಥ ಸಿದ್ದಿ ಆಗುತ್ತದೆ ಎಂದು ಪುರಾಣಗಳು ಸಾರಿವೆ.