ಕನ್ನಡ ನಟಿ ಚೈತ್ರಾ ಕೊಟ್ಟೂರ ಕಳೆದ ತಿಂಗಳು ಉದ್ಯಮಿ ನಾಗಾರ್ಜುನ ಜೊತೆ ಮದುವೆ ಆಗಿದ್ದರು. ಆದರೆ ಎರಡೂ ಮನೆಯವರು ಒಪ್ಪದ ಕಾರಣ ಕೋಲಾರ ಮಹಿಳಾ ಪೋಲೀಸು ಠಾಣೆಗೆ ದೂರು ಹೋಗಿತ್ತು. ಅವರು ಆತ್ಮಹತ್ಯೆಗೂ ಪ್ರಯತ್ನಿಸಿದ್ದರು. ತಿಂಗಳೊಪ್ಪತ್ತಿನಲ್ಲಿ ಈಗ ಆಶ್ರಮ ಸೇರಿದ್ದಾರೆ.

ಒಂದೇ ತಿಂಗಳಲ್ಲಿ ಈ ವಾದ ಗಲಾಟೆಗಳಿಂದ ಸಂಸಾರ ನನಗೆ ಸಾಕಾಗಿದೆ. ಆಧ್ಯಾತ್ಮಿಕ ಒಲವು ಬಲಿತಿದೆ. ಆದ್ದರಿಂದ ಬೆಳಗಾವಿಯ ಓಶೋ ಆಶ್ರಮ ಸೇರಿದ್ದೇನೆ ಎಂದು ನಟಿ ಚೈತ್ರಾ ಹೇಳಿದ್ದಾರೆ.