ಜನರ ಖಾಸಗಿತನ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ಸೈಬರ್ ದಾಳಿ ನಡೆಸಿರುವ ಪೆಗಾಸಸ್ ಸ್ಕಯ್‌ವೇರ್ ಬಗೆಗೆ ಎಸ್‌ಐಟಿ- ವಿಶೇಷ ತನಿಖಾ ದಳದಿಂದ ತನಿಖೆ ನಡೆಸಲು ಸೂಚಿಸುವಂತೆ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಲಾಯಿತು.

ವಕೀಲ ಎಂ. ಎಲ್. ಶರ್ಮಾ ಎನ್ನುವವರು ಗುರುವಾರ ಅರ್ಜಿ ಹಾಕಿದರು. ಭಾರತದ ಪ್ರಜಾಪ್ರಭುತ್ವ ಮತ್ತು ಸಾರ್ವಜನಿಕ ವ್ಯವಸ್ಥೆಗೆ ಇದರಿಂದ ಹಾನಿಯಾಗಿದೆ. ಪತ್ರಕರ್ತರು, ಬುದ್ಧಿಜೀವಿಗಳು, ರಾಜಕಾರಣಿಗಳು ಮೊದಲಾದವರ ಖಾಸಗಿ ಬದುಕಿನ ಮೇಲೆ ಹಲ್ಲೆ ಆಗಿದೆ. ಆದ್ದರಿಂದ ಸೂಕ್ತ ತನಿಖೆ ವಿಶೇಷ ರೀತಿಯಲ್ಲಿ ಬೇಗ ಆಗಬೇಕು ಎಂದು ಅರ್ಜಿಯಲ್ಲಿ ಕೇಳಲಾಗಿದೆ.