ಮಂಗಳೂರು: “ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ತ ಕೈಗನ್ನಡಿಯಾಗಿದೆ ಎಂಬುದಾಗಿ ಶಾಲಾ ಹಂತದ ಪ್ರತಿಭಾ ಕಾರಂಜಿ ಸ್ಪಾರ್ಕ್ - 2025 ಸ್ಪರ್ಧಿಗಳನ್ನು ಉದ್ಘಾಟಿಸುತ್ತಾ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ ಉರ್ವಾ ಇಲ್ಲಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಂ. ಗುರು ಮೈಕಲ್ ಲೋಬೋ ತಿಳಿಸಿದರು.

ಶಾಲಾ ಹಂತದ ಈ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಷಣ, ಛದ್ಮವೇಷ, ಭಾವಗೀತೆ, ಜಾನಪದ ಗೀತೆ, ಆಶುಭಾಷಣ, ದೇಶಭಕ್ತಿ ಗೀತೆ, ಕವನ ಪದ್ಯ ವಾಚನ,ಕವ್ವಾಲಿ, ಭರತನಾಟ್ಯ, ಹೀಗೆ ಹತ್ತು ಹಲವಾರು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ತೋರಿಸಿದರು. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಯಿತು. ಶಿಕ್ಷಕಿಯರಾದ ಪೂರ್ಣಿಮಾ, ಲವೀನ ಲೋಬೋ, ರೀನಾ ಕಾರ್ಯಕ್ರಮ ಸಂಯೋಜಿಸಿದರು.

ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಅಲೋಶಿಯಸ್ ಡಿಸೋಜರವರು ಉಪಸ್ಥಿತರಿದ್ದು ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕ - ರಕ್ಷಕ ಸಂಘದ ಉಪಾಧ್ಯಕ್ಷರಾದ ಪುಷ್ಪಾಂಜಲಿ ,ಹಿರಿಯ ಶಿಕ್ಷಕಿ ಲವೀನ ಡಿಕುನ್ನ, ಮತ್ತು ಲವೀನಾ ಪಿಂಟೊ ,ಶಾಲಾ ನಾಯಕಿ ಸುರಭಿ, ಉಪನಾಯಕಿ ಸ್ನೇಹ, ಉಪಸ್ಥಿತರಿದ್ದರು. ಶಿಕ್ಷಕಿ ರೀನಾ ಕಾರ್ಯಕ್ರಮ ನಿರೂಪಿಸಿ ಶಿಕ್ಷಕಿ ಪೂರ್ಣಿಮಾ ವಂದಿಸಿದರು.