ಮಂಗಳೂರು:  ಸರ್ಕಾರಿ ಐ.ಟಿ.ಐ ಮಹಿಳಾ ಸಂಸ್ಥೆಯಲ್ಲಿ ಸರ್ಕಾರಿ ಖೋಟಾದಲ್ಲಿ ಕಂಪ್ಯೂಟರ್, ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕ್ ವೆಹಿಕಲ್, ರೋಬೋಟಿಕ್ ಕೋರ್ಸುಗಳಿಗೆ ಮತ್ತು ಮ್ಯಾನೇಜ್‍ಮೆಂಟ್ ಖೋಟಾದಲ್ಲಿ ಎಲೆಕ್ಟ್ರಿಷಿಯನ್ ಕೋರ್ಸುಗಳಿಗೆ ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಜುಲೈ 4 ರಿಂದ ಸಂಸ್ಥೆಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಿ ನೇರವಾಗಿ ಪ್ರವೇಶ ಪಡೆಯಬಹುದು. ಅರ್ಜಿ ಸಲ್ಲಿಸಲು ಅಗಸ್ಟ್ 31 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 9880119147, 9448858417 ಸಂಪರ್ಕಿಸುವಂತೆ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.