ಮಂಗಳೂರು, ಅ.1: ಜಿಲ್ಲೆಯಲ್ಲಿ ನವರಾತ್ರಿ ಉತ್ಸವದ ಆಚರಣೆಯ ಹಿನ್ನಲೆಯಲ್ಲಿ ಅಕ್ಟೋಬರ್ 3 ರಿಂದ 13ರವರೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಶಾರದಾ ದೇವಿಯ ವಿಗ್ರಹ ಪ್ರತಿಷ್ಠಾಪನಾ ಮತ್ತು ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಸಮಯದಲ್ಲಿ ಕಿಡಿಗೇಡಿಗಳು ಅಮಲು ಪದಾರ್ಥ ಸೇವಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ದಸರಾ ಮೆರವಣಿಗೆ ಸಾಗುವ ಪ್ರದೇಶಗಳಲ್ಲಿ ಆಯಾ ದಿನಗಳಂದು ಬಾರ್ ಮತ್ತು ವೈನ್ ಶಾಪ್ ಮದ್ಯದ ಅಂಗಡಿಗಳಲ್ಲಿ ಅಮಲು ಪದಾರ್ಥ ಮಾರಾಟ ಮಾಡದಂತೆ ಮತ್ತು ಮುಚ್ಚಲು ಹಾಗೂ ಈ ಸಮಯದಲ್ಲಿ ಎಲ್ಲಾ ಶೇಂದಿ ಅಂಗಡಿ ಮತ್ತು ಎಲ್ಲ ವಿಧದ ಅಮಲು ಪದಾರ್ಥಗಳ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಆದೇಶಿಸಿದ್ದಾರೆ.