ಮಂಗಳೂರು :  ನಗರಾದ್ಯದಂತ ಅತೀಯಾಗಿ ಸುರಿದ ಮಳೆಯಿಂದ ನಗರದ ಶಿವನಗರ, ಪಾಂಡೇಶ್ವರ, ಎಮ್ಮೆಕೆರೆ ಮುಂತಾದ ಕಡೆಗಳಲ್ಲಿ ಅತಿಯಾದ ಮಳೆಯಿಂದ ನೆರೆಯಾಗಿ, ಸುಮಾರು 40ಕ್ಕೂ ಹೆಚ್ಚು ಮನೆಗಳ ಗೃಹಪಯೋಗ ವಸ್ತುಗಳು ನಾಶವಾಗಿದ್ದು,  ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ  ಐವನ್ ಡಿ ಸೋಜ ಇವರು ಪರಿಹಾರ ಒದಗಿಸಿಕೊಡುವಲ್ಲಿ ಮತ್ತು ಬೇರೆ ಕಡೆ ನೀರು ತಿರುಗಿಸಿ ಕೊಡುವಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ನಗರ ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ ಸ್ಥಳೀಯ ಇಂಜಿನಿಯರ್ ರೊಂದಿಗೆ ಮಾತನಾಡಿ, ತಹಶೀಲ್ದಾರ ಮೂಲಕ ಕೂಡಲೇ ಅಂದಾಜು ವೆಚ್ಚ ತಯಾರಿಸಿ, ಕೂಡಲೇ ಪರಿಹಾರ ಒದಗಿಸಿಕೊಡಬೇಕೆಂದು ಜಿಲ್ಲಾಧಿಕಾರಿಯವರಿಗೆ ಒತ್ತಾಯಿಸಿದರು.