ಮಂಗಳೂರು: ಕ್ಯಾಂಪಸ್ ಫ್ರಂಟ್ ಪರವಾಗಿ ಮಂಗಳೂರಿನ ಗಡಿಯಾರ ಗೋಪುರದ ಎದುರು ಅತಿಥಿ ಶಿಕ್ಷಕರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸಿದರು.

ಅತಿಥಿ ದೇವೋ ಭವ, ಗುರು ದೇವೋ ಭವ ಬರೇ ಮಾತಾಗಿದೆ, ಬಿಜೆಪಿ ಸರಕಾರವು ನಾಲ್ಕು ತಿಂಗಳಿಂದ ಸಂಬಳ ನೀಡದೆ ತೊಂದರೆ ನೀಡಿದೆ. ಎಲ್ಲ ಅತಿಥಿ ಶಿಕ್ಷಕರು ಬೀದಿಗಿಳಿಯದಂತೆ ಅತಿಥಿ ಶಿಕ್ಷಕರ ಗೋಳನ್ನು ತೊಡೆಯಬೇಕು ಎಂದು ಅತಿಥಿ ಶಿಕ್ಷಕ, ಶಿಕ್ಷಕಿಯರು ಬೇಡಿಕೆ ಮುಂದಿಟ್ಟರು.