ವರದಿ ರಾಯಿ ರಾಜಕುಮಾರ

ಮಂಗಳೂರು: ಸ್ವರ್ಣವಲ್ಲಿ ಮಹಾಸಂಸ್ಥಾನ ಭಗವದ್ಗೀತಾ ಅಭಿಯಾನ ಸಮಿತಿ ಹಾಗೂ ಸಂಸ್ಕೃತ ಸಂಘ ಮಂಗಳೂರು ಇವರ ಸಹಯೋಗದಲ್ಲಿ  ರಾಮಕೃಷ್ಣ ಕಾಲೇಜು ಮಂಗಳೂರು ಇವರ ಆಶ್ರಯದಲ್ಲಿ ನಡೆದ ದಕ್ಷಿಣಕನ್ನಡ ಜಿಲ್ಲಾಮಟ್ಟದ ಭಗವದ್ಗೀತಾ ಸ್ಪರ್ಧೆಯನ್ನು ಉದ್ಘಾಟಿಸಿ ಭಗವದ್ಗೀತೆ ಮೋಕ್ಷಶಾಸ್ತ್ರ, ಜೀವನಶಾಸ್ತ್ರ, ತತ್ವಶಾಸ್ತ್ರ ನೋಡುಗನ ದೃಷ್ಟಿಗೆ ತಕ್ಕಂತೆ ಕಾಣುವ ದಾರ್ಶನಿಕ ಕಾವ್ಯ , ಮಹಾತ್ಮಾ ಗಾಂಧಿಯವರು ತಾಯಿ ಸತ್ತಮೇಲೆ ನನಗೆ ಗೀತೆಯೇ ತಾಯಿಯಾಗಿತ್ತು ಎಂದು ಹೇಳುತ್ತಿದ್ದರಂತೆ ಎಂಬುದಾಗಿ  ಚ.ನ. ಶಂಕರ ರಾವ್ ವಿಷ್ಲೇಶಿಸಿದರು. 

ಡಾ. ಶಿಕಾರಿಪುರ ಕೃಷ್ಣಮೂರ್ತಿಯವರು ಗೀತೆ ಜೀವನ ಪ್ರೀತಿಯನ್ನು ಕಲಿಸುತ್ತದೆ.  ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.  ಕೆ. ಪಿ ರಾವ್ ಅಧ್ಯಕ್ಷತೆ ವಹಿಸಿದ್ದರು. ವಿದ್ವಾನ್ ವಾಸುದೇವ ಕಾರಂತ, ಡಾ. ಪ್ರಸನ್ನಕುಮಾರ್ ಐತಾಳ, ರಾಜಾರಾಮ್ ಶರ್ಮಾ, ಅಭಿಯಾನದ ಜಿಲ್ಲಾ ಸಂಚಾಲಕ ಡಾ. ಮಧುಕೇಶ್ವರ ಶಾಸ್ತ್ರಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಸಂಚಾಲಕ ರಮೇಶ ಆಚಾರ್ಯ ಪ್ರಸ್ತಾವನೆ ಮಾಡಿ ಸ್ವಾಗತಿಸಿದರು. ಭಗವದ್ಗೀತೆಯನ್ನು ಸಂಪೂರ್ಣ ಕಂಠಪಾಠ ಮಾಡಿ ಶೃಂಗೇರಿ ಜಗದ್ಗುರುಗಳಿಂದ ಪುರಸ್ಕೃತರಾದ ಮಿಥಿಲ್ ಕೃಷ್ಣ ಭಟ್, ಧಾತ್ರಿ ರನ್ನು ಪುರಸ್ಕರಿಸಲಾಯಿತು. ತಾಲ್ಲೂಕು ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಸ್ಪರ್ಧೆ ನಡೆಸಿ ರಾಜ್ಯಮಟ್ಟಕ್ಕೆ ಅಯ್ಕೆ ಮಾಡಲಾಯಿತು. ಪ್ರತೀಕ್ಷಾ ಇವರು ಪ್ರಾರ್ಥನೆ ಮಾಡಿದರು. ವೆಂಕಟ್ರಮಣ ಕೆರೆಗದ್ದೆ ಕಾರ್ಯಕ್ರಮ ನಿರ್ವಹಿಸಿದರು. ರವಿ ಶಂಕರ್ ವಂದಿಸಿದರು.